ಕ್ಷಯ ರೋಗಿಗಳಿಗೆ ಆರು ತಿಂಗಳ ಕಾಲ ಪೌಷ್ಟಿಕ ಆಹಾರ ಧಾನ್ಯ ವಿತರಣೆ
ಕೊಟ್ಟೂರು 19 : ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಕೊಟ್ಟೂರು ಜೆ.ಸಿ.ಐ. ಕಾಟನ್ ಜೂನಿಯರ್ ಛೇಂಬರ್ ಇವರ 25 ನೇ ವರ್ಷದ ರಜತ ಮಹೋತ್ಸವದ ಸವಿನೆನಪಿಗಾಗಿ ನಿರಂತರ ಸರಣಿ ರೂಪದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಇವರ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ತರಬೇತಿ ಹಾಗೂ ಮಕ್ಕಳ ಆರೋಗ್ಯದ ತಪಾಸಣೆ, ರಕ್ತದಾನ ಶಿಬಿರ ಕಣ್ಣಿನ ಅರೋಗ್ಯ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮವನ್ನು ಇತ್ತೀಚೆಗೆ ಅಯೋಜಿಸಲಾಗಿತ್ತು, ಕೊಟ್ಟೂರು ಆರೋಗ್ಯ ಕೇಂದ್ರ , ಕೊಟ್ಟೂರು ಆಡಳಿತ ಅಧಿಕಾರಿಗಳ ಮನವಿಯ ಮೇರೆಗೆ ಕ್ಷಯ ರೋಗಿಗಳ ಆರು ತಿಂಗಳ ಕಾಲ ಪೌಷ್ಟಿಕ ಆಹಾರ ಧಾನ್ಯ ವಿತರಿಸಲು ನಾಲ್ಕು ಜನರನ್ನು ಕೊಟ್ಟೂರು ಕಾಟನ್ ಜ್ಯೂನಿಯರ್ ಛೇಂಬರ್ ಡಿಸೆಂಬರ್ ರವರೆಗೆ ಪೌಷ್ಠಿಕ ಆಹಾರ ಧಾನ್ಯ ವಿತರಿಸಲು ನಿರ್ಧರಿಸಲಾಯಿತು ನಂತರ ನೆಡೆದ ವೈಧ್ಯಾಧಿಕಾರಿಗಳ ಮತ್ತು ಜೆ.ಸಿ.ಐ. ಸದಸ್ಯರುಗಳ ಹಾಗೂ ಆಶಾ ಕಾರ್ಯಕರ್ತೆಯರ ಸಮ್ಮುಖದಲ್ಲಿ ನಾಲ್ಕು ಜನ ಫಲಾನುಭವಿಗಳಿಗೆ ಜೆ.ಸಿ ಸದಸ್ಯರುಗಳಾದ ಯುವ ಮುಖಂಡ ಸಂತೋಷ್ ಅಟವಾಳ್ಗಿ , ರಾಮಣ್ಣ, ಜೆ.ಸಿ ಕೇಶವಪ್ರಸಾದ್ ಜೆ.ಸಿ. ವಿಕ್ರಂ , ಹೆಗ್ಗಪ್ಪನಹಳ್ಳಿ ಉಪನ್ಯಾಸಕರಾದ ಜೆ.ಸಿ.ಐ ಹಾಲಿ ಅಧ್ಯಕ್ಷರಾದ ನಂದೀಶ್ ತುರಕಾಣಿ, ಸೇರಿ ಇವರುಗಳ ಪೌಷ್ಠಿಕ ಆಹಾರ ಕೊಡುವುದರ ಬಗ್ಗೆ ನಿರ್ಧರಿಸಿ ದತ್ತು ಕಾರ್ಯಕ್ರಮಕ್ಕೆ ಕೈ ಜೋಡಿಸಿದರು.
ಈ ಸಂದರ್ಭದಲ್ಲಿ ಕೊಟ್ಟೂರು ಸಮುದಾಯ ಕೇಂದ್ರದ ಆರೋಗ್ಯಧಿಕಾರಿಯಾದ ಭದ್ಯನಾಯ್ಕ, ರೋಗಿಗಳ ಆರೋಗ್ಯದ ಕುರಿತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಿದರು. ಅರೋಗ್ಯ ಇಲಾಖೆಯ ಹೆಲ್ತ್ ಅಫೀಸರ್ ಎಂ.ಎಸ್. ನಾಗರಾಜ್ ರವರು ರೋಗಿಗಳಿಗೆ ಕೆಲವು ಸಲಹೆ ಹಾಗೂ ಮಾಹಿತಿಯನ್ನು ನೀಡಿದರು, ಆ ಆಹಾರ ವಿತರಣೆ ಕಾರ್ಯಕ್ರಮವು ಪ್ರತೀ ತಿಂಗಳು 15 ರಿಂದ 20 ರವರೆಗೆ ನೆಡಯಲಿದ್ದು, ಅಷ್ಟರೊಳಗಾಗಿ ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮದ ರೂಪುರೇಷ ಬಗ್ಗೆ ಮಾಹಿತಿ ಹಂಚಿಕೊಂಡರು, ಈ ಸಂದರ್ಭದಲ್ಲಿ ಜೆ.ಸಿ. ಯ ಈಶ್ವರ್ಪ ತುರುಕಾಣಿ, ಜೆ.ಸಿ. ಜಗದೀಶ್ ಚಂದ್ರಬೋಸ್, ಹೇಮಂತ್ ಕುಮಾರ್, ಸಕ್ರ್ಪರೆಡ್ಡಿ, ಕಾರ್ಯಕ್ರಮದಲ್ಲಿ ಹಾಜರಿದ್ದರು.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಉಪನ್ಯಾಸಕರಾದ ಈಶ್ವರ್ಪ ತುರುಕಾಣಿ, ಕ್ಷಯಮುಕ್ತ ಭಾರತ ಮಾಡಲು ಹೊರಟಿರುವ ಪ್ರಧಾನಮಂತ್ರಿಗಳ ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಆಭಿಯಾನ ಕಾರ್ಯಕ್ರಮ ಕ್ಕೆ ನಾವುಗಳು ಅಳಿಲು ಸೇವೆ ಸಲ್ಲಿಸಲು ನಮ್ಮ ಛೇಂಬರ್ ವತಿಯಿಂದ ಸಿದ್ದರಿದ್ದು, ರೋಗಿಗಳಿಗೆ 3 ಕೆ.ಜಿ ಗೋಧಿ ನುಚ್ಚು, 1 ಕೆ.ಜಿ ಶೇಂಗಾ, 1 ಕೆ.ಜಿ ಹೆಸರುಬೇಳೆ, 1 ಕೆ.ಜಿ ತೊಗರಿಬೇಳೆ, ಸೇರಿದಂತೆ ಕೋಷ್ಠಕದಲ್ಲಿ ನಮೂದಿಸಿರುವ ಪ್ರತಿ ಆಹಾರ ಬುಟ್ಟಿಯನ್ನು ಕ್ಷಯರೋಗ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಪೂರ್ಣ ಚಿಕತ್ಸಾವಧಿಗೆ ನೀಡಲಾಗುವುದುಯೆಂದರು. ಈ ದತ್ತು ಪಡೆದ ರೋಗಿಗಳ ಯೋಗಕ್ಷೇಮವನ್ನು ಆರೋಗ್ಯ ಇಲಾಖೆಯ ಅಧಿಕಾರಗಳ ಸಹಯೋಗದೊಂದಿಗೆ ಮಾಡಲಾಗುವುದುಯೆಂದರು.