ರೋಣ

ಮಕ್ಕಳಿಗೆ ನೋಟ್ ಬುಕ್ ವಿತರಣೆ

ಮಕ್ಕಳಿಗೆ ನೋಟ್ ಬುಕ್ ವಿತರಣೆ

ರೋಣ 20:  ತಾಲೂಕಿನ ಹುನಗುಂಡಿ  ಗ್ರಾಮದಲ್ಲಿ  ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಭವನದಲ್ಲಿ ಇದೇ  ಸೆಪ್ಟಂಬರ್‌-17ರಂದು ಗ್ರಾಮದ ಗುರುಹಿರಿಯರ ಸಮ್ಮುಖದಲ್ಲಿ  ವಿಶ್ವದ ಅತ್ಯಂತ ದೊಡ್ಡ ವ್ಯಕ್ತಿತ್ವವುಳ್ಳ ಭಾರತದ  ಪ್ರಧಾನಿ ನರೇಂದ್ರ ಮೋದಿಯವರಿಗೆ 73ನೇ ವರ್ಷದ ಹುಟ್ಟುಹಬ್ಬ ಪ್ರಯುಕ್ತ ಹುನಗುಂಡಿ ಗ್ರಾಮದ ಗುರು ಹಿರಿಯರು ಮತ್ತು ವಾಲ್ಮೀಕಿ ಸಂಘದ ಅಧ್ಯಕ್ಷ ಹಾಗೂ ಗದಗ ಜಿಲ್ಲಾ ಎಸ್ ಟಿ ಮೋರ್ಚಾ ಮಾಜಿ ಅಧ್ಯಕ್ಷ ಬಸವಂತಪ್ಪ ಎಚ್ ತಳವಾರ  ನರೇಂದ್ರ ಮೋದಿ ಹುಟ್ಟು ಹಬ್ಬಕ್ಕೆ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಅಕ್ಕಿ  ವಿತರಣೆ ಮಾಡಿದರು ಬಸವಂತಪ್ಪ ಎಚ್ ತಳವಾರವರು  ನರೇಂದ್ರ ಮೋದಿ ನಮ್ಮ ಭಾರತ ದೇಶದ ಹೆಗ್ಗಳಿಕೆಯ 2014 ನೇ ಇಶ್ವಿಯಲ್ಲಿ ಭಾರತ ದೇಶದ ಪ್ರಧಾನಿಯಾಗಿ ಸತತವಾಗಿ 10 ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿದ್ದು, ನಮ್ಮ ದೇಶಕ್ಕೆ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸಕ್ಕೆ ಒತ್ತು ಕೊಟ್ಟು ಬಡ ಕುಟುಂಬ ದವರಿಗೆ ನೆರವಾಗಿ ದೇಶದಲ್ಲಿನ ಬಡತನ ನಿರ್ಮೂಲನೆ ಮಾಡಿ ಇವತ್ತು ವಿಶ್ವದಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದ್ದು ಹೆಮ್ಮೆಯ ವಿಷಯ ಆಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಹಿರಿಯರಾದ ವೈ ಬಿ ಮಂಡಸೊಪ್ಪಿ,ಪಿ ಎಸ್  ಶಾಲಿಮಠ, ಎಸ್ ಬಿ ಕಲ್ಮಟ, ಬಿ ಎಚ್ ಜಡೆಗೌಡ್ರ, ಬಸಮ್ಮ  ನವಚಿದ್ರ, ಚನ್ನವ  ಕುರಿ,  ಹನುಮವ್ವ  ತಳವಾರ, ನಿರ್ಮಲ ತಳವಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು. 


ಸುದ್ದಿ ಓದಿ