ಗದಗ

ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಗದಗ 03:  ದೇಶಪಾಂಡೆ ಫೌಂಡೆಶನ್ ಸಂಸ್ಥಾಪಕರಾದ ಗುರುರಾಜ್ ಮತ್ತು ಜಯಶ್ರೀ ಹುಬ್ಬಳ್ಳಿ ಇವರ ವತಿಯಿಂದ ಲಕ್ಷ್ಮೇಶ್ವರ  ಪಟ್ಟಣದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಕೊರೊನಾ ಸಂಕಷ್ಟದಿಂದ ಆರ್ಥಿಕವಾಗಿ ತೊಂದರೆಯನ್ನು  ಎದುರಿಸುತ್ತಿರುವ ಲಕ್ಷ್ಮೇಶ್ವರ ತಾಲೂಕಿನ ಟೇಲರಿಂಗ  ಮಾಲಕರು ಮತ್ತು ಕೆಲಸಗಾರರಿಗೆ ಹಾಗೂ  ಕ್ಷೇಮಾಭಿವೃದ್ಧಿ ಸಂಘದವರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.  ಈ ಸಮಯದಲ್ಲಿ ಸಂಘದ ಅಧ್ಯಕ್ಷ  ರಾಮಣ್ಣ ಮೇಘರಾಜ ಮಾತನಾಡಿ ರಾಜ್ಯಕ್ಕೆ ಆವರಿಸಿರುವ ಮಹಾಮಾರಿ ಕೊರೊನಾ ನಿಯಂತ್ರಿಸಲು ಸರಕಾರ ಲಾಕ್ ಡೌನ್  ಜಾರಿಯಿಂದ ಎಲ್ಲಾ ಅಂಗಡಿ-ಮುಗಟ್ಟುಗಳು ಬಂದ್ ಆಗಿದ್ದರಿಂದ ನಮ್ಮ ಜೀವನ ನಡೆಸುವುದೇ ಕಷ್ಟಕರವಾಗಿದ್ದು, ಈ ಹಿಂದೆ ನಾವು ತಹಶಿಲ್ದಾರರ ಮುಖಾಂತರ  ಸಹಾಯ ನೀಡಬೇಕೆಂದು ಮನವಿ ಸಲ್ಲಿಸಿದ್ದೆವು ಅದನ್ನು  ರೈತ ಧ್ವನಿ ಟಿವಿ ಮಾಧ್ಯಮದಲ್ಲಿ ಹಾಗೂ ಪತ್ರಿಕೆಯಲ್ಲಿ ಪ್ರಸಾರವಾದ ವರದಿಯ  ಪ್ರತಿಫಲವಾಗಿ ಇಂದು ದೇಶಪಾಂಡೆ ಫೌಂಡೇಶನ್ ಸಂಸ್ಥೆಯವರು ನಮ್ಮ ವೃತ್ತಿಬಾಂಧವರಿಗೆ ಆಹಾರದ ದಿನಸಿ ಕಿಟ್ಟುಗಳನ್ನು ವಿತರಣೆ ಮಾಡಿರುವುದಕ್ಕೆ ತುಂಬಾ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.     ಈ ಸಮಯದಲ್ಲಿ ಸಂಘದ ವತಿಯಿಂದ  ದೇಶಪಾಂಡೆ ಫೌಂಡೇಶನ್ ಉದ್ಯೋಗಿ ಯಾದ ಕುಮಾರಿ ಮಂಜುಳಾ ಕಳ್ಳಿ ಯವರಿಗೆ ಸನ್ಮಾನಿಸಲಾಯಿತು .ಈ ಸಮಯದಲ್ಲಿ ಸಂಘದ ಸದಸ್ಯರಾದ ರೀಯಾಜ್‌ಅಹ್ಮದ್ ಕಲಬುರ್ಗಿ,ಮಂಜುನಾಥ ಗೊರವರ, ದೀಪಕ್ ಪವಾರ,ರೀಯಾಜ್‌ಅಹ್ಮದ್ ಮುಲ್ಲಾ ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು. 


ಸುದ್ದಿ ಓದಿ