ವಿಕಲಚೇತನರಿಗೆ ದಿನಸಿ ಕಿಟ್ ವಿತರಣೆ
ಹಗರಿಬೊಮ್ಮನಹಳ್ಳಿ 16 : ಡಾನ್ ಬೋಸ್ಕೊ ಚರ್ಚ, ಲಿಂಗರಾಜಪುರಮ್, ಬೆಂಗಳೂರು, ಡಾನ್ ಬೊಸ್ಕೋ ಸಮಾಜ ಸೇವಾ ಸಂಸ್ಥೆ ಹೊಸಪೇಟೆ, ತಾಲೂಕು ಪಂಚಾಯಿತಿ, ಹಗರಿಬೊಮ್ಮನ ಹಳ್ಳಿ ಸಂಯುಕ್ತಾಶ್ರಯದಲ್ಲಿ ಅಸಿಸಿ ಲೆಪ್ರೊಸಿ ಸೆಂಟರ್ ಅಸ್ಪತ್ರೆಯ ಮುಂಬಾಗದಲ್ಲಿ 120 ಅಲೆಮಾರಿ ವಿಕಲಚೇತನರಿಗೆ ದಿನಸಿ ಕಿಟ್ಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹೆಚ್ ಬಿ ಹಳ್ಳಿಯ ತಾಲೂಕು ಪಂಚಾಯಿತಿಯ ಸ್ಥಾಏದ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ ಹೊಸಪೇಟೆ ಡಾನ್ ಬೋಸ್ಕೊ ಸಂಸ್ಥೆ ತಾಲೂಕಿನಲ್ಲಿ ಸಮಾಜಸೇವೆಯನ್ನು ಮಾಡುತ್ತಿದ್ದು ಕಳೆದ ಒಂದು ತಿಂಗಳಿನಿಂದ ಅಲೆಮಾರಿಯವರಿಗೆ, ಕುಷ್ಠರೋಗಿಗಳಿಗೆ ಜೊತೆಗೆ 120 ವಿಕಲಚೇತನರಿಗೆ ಇಂದು ದಿನಸಿ ಕಿಟ್ ಗಳನ್ನು ವಿತರಣೆ ಮಾಡುತ್ತಿರುವುದು ಒಳ್ಳೆ ಕಾರ್ಯವಾಗಿದೆ , ಈ ಸಂಸ್ಥೆ ಯಾವುದೇ ಸರಕಾರದ ಸಹಾಯ ವಿಲ್ಲದೆ ತನ್ನ ಸ್ವಂತ ಅದಾಯಲ್ಲಿ ಈ ಕಾರ್ಯ ಮಾಡುತ್ತಿರುವುದು ಶ್ಲಾಘನಿಯ ಎಂದು ಹೇಳಿದರು ಜೊತೆಗೆ ಸರಕಾರ ವಿಕಲಚೇತನರಿಗೊಸ್ಕರ ಒಂದು ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಡಾನ್ ಬೋಸ್ಕೊ ನಿರ್ದೇಶಕ ಪಾಧರ್ ಅನಂದ್ ಮಾತನಾಡಿ ಹೆಚ್ ಬಿ ಹಳ್ಳಿ ವಿಕಲಚೇತನ ಕುಟುಂಬಗಳು ಸಂಕಷ್ಟದಲ್ಲಿ ಇರುವುದು ನಮಗೆ ಕಂಡುಬಂದಿದ್ದು ಅವರಿಗೆ ನಮ್ಮ ಸಮಾಜ ಸೇವಾ ಸಂಸ್ಥೆಯಿಂದ ದಿನಸಿ ಕಿಟ್ ಗಳನ್ನು ಕೊಡುವುದರ ಮೂಲಕ ಅವರ ಸೇವೆ ಮಾಡಲು ನಮಗೆ ಅವಕಾಶ ಸಿಕ್ಕಿದೆ ಎಂದು ಹೇಳಿದರು ಹಾಗೂ ಈ ಸಂದರ್ಭದಲ್ಲಿ ಪಾದರ್ ಅಲೋಷಸ್ ರವರನ್ನು ದನ್ಯತಾ ಭಾವದಿಂದ ಸ್ಮರಿಸಿದರು,
ಕ್ರಿಮ್ ಯೋಜನೆಯ ಜಿಲ್ಲಾ ಸಂಯೋಜಕರಾದ ಶರಣಪ್ಪ ಜೆ ಮಾತನಾಡಿ ವಿಕಲಚೇತನರು ಈ ಸಂದರ್ಭದಲ್ಲಿ ಅತ್ಮ ವಿಶ್ವಾಸದಿಂದಿರಬೇಕು,ತಾವುಗಳು ಸಾಧಿಸುವಂತಹ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು ಸಾಂಕೇತಿಕವಾಗಿ ಡಾನ್ ಬೊಸ್ಕೋ ನಿರ್ದೇಶಕರಾದ ಪಾಧರ್ ಅನಂದ್ ,ಹೆಚ್ ಬಿ ಹಳ್ಳಿ ತಾಲೂಕು ಪಂಚಾಯಿತಿಯ ಸ್ಥಾಯಿ ಸಮಿತಿಯ ಅದ್ಯಕ್ಷರು ಅದ ಬುಡ್ಧಿ ಬಸವರಾಜ ,ಶರಣಪ್ಪ ಜೆ,ಕ್ರೀಮ್ ಯೋಜನೆಯ ಜಿಲ್ಲಾ ಸಂಯೋಜಕರು, ಸಿಸ್ಟರ್ ಮೇಬಲ್,ಸಿಸ್ಟರ್ ಲಿಟ್ಟಿ, ಸಾಂಕೇತಿಕವಾಗಿ ಅಹಾರದ ಕಿಟ್ಗಳನ್ನು ವಿತರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಡಾನ್ ಬೊಸ್ಕೋ ಸಂಸ್ಥೆಯ ಸಿಬ್ಬಂದಿಗಳು ಆದ ತಾಲೂಕು ಸಂಯೋಜರಾದ ಬಾಣದ ನಾಗರಾಜ, ವಿ ಲಯ್ ಯೋಜನೆಯ ಸಂಯೋಜಕರಾದ ಸದ್ದಾಂ ಹುಸೇನ್,ಮಕ್ಕಳ ಸಹಾಯವಾಣಿ ಸಿಬ್ಬಂದಿಯವರಾದ ಸಂತೋಷ,ಸ್ವಾಮಿ,ಜ್ಯೋತಿ,ಮತ್ತು ಅಂಗವಿಕಲರು ಭಾಗವಹಿಸಿದ್ದರು.