ಮಹಲಿಂಗಪುರ

ಗೃಹರಕ್ಷಕ ದಳದವರಿಗೆ ದಿನಸಿ ಕಿಟ್ ವಿತರಣೆ

ಗೃಹರಕ್ಷಕ ದಳದವರಿಗೆ ದಿನಸಿ ಕಿಟ್ ವಿತರಣೆ
ಮಹಾಲಿಂಗಪುರ: ಪುರಸಭೆ ಮಾಜಿ ಮಂಜು ಬಕರೆ ಗೃಹರಕ್ಷಕ ದಳದ ಸಿಬ್ಬಂದಿಗೆ ದಿನಸಿ ಕಿಟ್ ವಿತರಿಸಿದರು.

ಮಹಾಲಿಂಗಪುರ 28: ಕೊರೊನಾ ಲಾಕಡೌನ್ ಸಮಯದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು, ಪ್ರಂಟ್‌ಲೈನ್ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸಿದ ಗೃಹರಕ್ಷಕ ದಳದ ಸಿಬ್ಬಂದಿಗೆ ಪುರಸಭೆ ಮಾಜಿ ಸದಸ್ಯ ಹಾಗೂ ಗೃಹರಕ್ಷಕ ದಳದ ಮಾಜಿ ಸಿಬ್ಬಂದಿ ಮಂಜು ಬಕರೆ ಅವರು ದಿನಸಿ ಕಿಟ್ ವಿತರಿಸಿದರು. 

ದಿನಸಿ ಕಿಟ್ ವಿತರಿಸಿದ ಮಂಜು ಬಕರೆ ಮಾತನಾಡಿ ಅತ್ಯಂತ ಕಡಿಮೆ ಸಂಬಳದಲ್ಲಿ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಯ ಕಾರ್ಯವು ಶ್ಲಾಘನೀಯವಾಗಿದೆ. ಕೊರೊನಾ ಸಮಯದಲ್ಲಿ ತಮ್ಮ ಕುಟುಂಬವನ್ನು ಲೆಕ್ಕಿಸದೇ ಧೈರ್ಯವಾಗಿ ಕೆಲಸವನ್ನು ಮಾಡಿದ್ದಾರೆ. ಅಲ್ಲದೇ ಗೃಹ ರಕ್ಷಕ ದಳದ ಸಿಬ್ಬಂದಿಯ ಕಷ್ಟ, ನೋವು-ನಲಿವುಗಳು ನನಗೆ ಗೊತ್ತಿರುವ ಕಾರಣ ನನ್ನ ಕೈಲಾದಮಟ್ಟಿಗೆ ಸಹಾಯವನ್ನು ಸಲ್ಲಿಸಿದ್ದೇನೆ ಎಂದರು. 

ಪುರಸಭೆ ಸದಸ್ಯ ಬಲವಂತಗೌಡ ಪಾಟೀಲ, ಕಾಂಗ್ರೆಸ್ ಮುಖಂಡ ಡಾ. ಎ.ಆರ್‌.ಬೆಳಗಲಿ, ಮಹಾಲಿಂಗಪ್ಪ ಕಂಠಿ, ಲಕ್ಷ ್ಮಣ ಮಾಂಗ, ಸಿಂಧೂರ ಹಲಸಪ್ಪಗೋಳ, ಮಹಾಲಿಂಗಪುರ ಠಾಣಾಧಿಕಾರಿ ಶೇಖರ ಘಾಟಗೆ, ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಎಚ್‌.ಬಿ.ಚೌಧರಿ, ಪ್ರಥಮ ದರ್ಜೆ ಸಹಾಯಕ ಎಚ್‌.ಗಿರಿಶಂಕರ ಮೂರ್ತಿ, ಮಹಾಲಿಂಗಪುರ ಘಟಕಧಿಕಾರಿ ಎಂ.ವ್ಹೀ. ರಾಖೂರ, ಗೃಹರಕ್ಷಕ ದಳದ ಸಿಬ್ಬಂದಿಯಾದ ವಿ.ಬಿ.ಪೂಜಾರಿ, ಕೆ.ಎಸ್‌.ಮಾಳಿ, ಬಿ.ಸಿ.ಕವಟಕೊಪ್ಪ, ಎಂ.ಎ.ಹುಂಡೆಕಾರ, ಎಸ್‌.ಬಿ.ಕೌಜಲಗಿ, ಬಿ.ಎಸ್‌.ಜಿಡಿಮನಿ, ಪಿ.ಕೆ.ದಲಾಲ, ಆರ್‌.ಜಿ.ನಾಯಕ, ಎಸ್‌.ಪಿ.ಅಥಣಿ, ಎ.ಎಂ.ಬೀಳಗಿ, ಎ.ಎಸ್‌.ದೊಡಮನಿ, ಬಿ.ಎನ್‌. ಕರಿಗಾರ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ