ಬಳ್ಳಾರಿ

ಪ್ರಾಣಿ ಪಕ್ಷಿಗಳಿಗಾಗಿ ಕಾಳು ನೀರಿನ ತೊಟ್ಟಿಗಳ ವಿತರಣೆ

ಪ್ರಾಣಿ ಪಕ್ಷಿಗಳಿಗಾಗಿ ಕಾಳು ನೀರಿನ ತೊಟ್ಟಿಗಳ ವಿತರಣೆ

ಬಳ್ಳಾರಿ 01: ನಿಮಗಾಗಿ ನಾವು ಸಂಸ್ಥೆಯ ವತಿಯಿಂದ ಬಿಸಲಿನ ಬೇಗೆಯನ್ನು ಅನುಭವಿಸುತ್ತಿರು ಪ್ರಾಣಿ ಪಕ್ಷಿಗಳ ನೆರವಿಗಾಗಿ ಸಹಜೀವಿಗಳು ಹೆಸರಿನ ಯೋಜನೆ ರೂಪಿಸಿಕೊಂಡು ಬಟ್ಟಲು/ತೊಟ್ಟಿಗಳನ್ನು ಬದ್ಧತೆಯಿಂದ ನಿರ್ವಹಿಸಿಕೊಂಡು ಹೋಗುವ ಆಸಕ್ತ ಸಾರ್ವಜನಿಕರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ವಿನಯ ರವರು ಮಾತನಾಡಿ ಬಿಸಿಲಿನ ತಾಪಕ್ಕೆ ಮೂಕ ಜೀವಿಗಳಿಗೆ ತೊಂದರೆಯಾಗುತ್ತಿದ್ದು ನಮ್ಮ ಸಹಜೀವಿಗಳನ್ನು ಸಂರಕ್ಷಿಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು ಎಂದು ತಿಳಿಸಿದರು. ಸಂಸ್ಥೆಯ ಕಾರ್ಯನಿರ್ವಾಹಕರಾದ ನಾಗರಾಜ್ ರವರು ಮಾತನಾಡಿ ಈ ಬಟ್ಟಲು ಮತ್ತು ತೊಟ್ಟಿಗಳ ವಿತರಣೆಯು ಏಪ್ರಿಲ್ ತಿಂಗಳು ಪೂರ್ತಿ ನಡೆಯಲಿದ್ದು ಆಸಕ್ತರು ಸಂಸ್ಥೆಯ ಮೊಬೈಲ್ ಸಂಖ್ಯೆ 9448584400 ನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದೆಂದು ತಿಳಿಸಿದರು. 

    ಕಾರ್ಯಕ್ರಮದಲ್ಲಿ ಸದಸ್ಯರಾದ ಸಂದೀಪ್, ವೀರೇಶ್, ಬಾಲಸುಬ್ರಮಣ, ಅನಿಲ್, ನಾಗರಾಜ್, ಸೂರಜ್, ಕೇದಾರನಾಥ್, ರಾಜಶೇಖರ್ ಸ್ವಾಮಿ, ಮೆಹಬೂಬ್ ಭಾಷ, ತಿಪ್ಪೇಶ್, ಪೃಥ್ವಿ, ಮಾರುತಿ, ದಕ್ಷಿಣ ಮೂರ್ತಿ, ಗೋಡೆ ಶಿವರಾಜ್ ಇತರರು ಪಾಲ್ಗೋಂಡಿದ್ದರು ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ನೀರಿನ ಬಟ್ಟಲು ತೊಟ್ಟಿಗಳನ್ನು ಸಂಸ್ಥೆಯಿಂದ ವಿತರಿಸಲಾಯಿತು. 


ಸುದ್ದಿ ಓದಿ