ಮಹಲಿಂಗಪುರ

ಪ್ರವಾಹ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳ ವಿತರಣೆ

ಪ್ರವಾಹ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳ ವಿತರಣೆ

ಮಹಾಲಿಂಗಪುರ : ಎಕ್ಷಿಡ್ ಕ್ರಾಪ್ ಸೈನ್ಸ್‌ ಲಿ. ಹುಬ್ಬಳ್ಳಿ ಕಂಪನಿ ವತಿಯಿಂದ ಸಮೀಪದ ನಂದಗಾಂವ ಗ್ರಾಮದ ಘಟಪ್ರಭಾ ನದಿ ಪ್ರವಾಹ ಸಂತ್ರಸ್ತರಿಗೆ ಶುಕ್ರವಾರ ಆಹಾರ ಕಿಟ್ ಗಳನ್ನು ನಿರ್ದೇಶಕರಾದ ಸುರೇಶ್ ಹೊಸೂರ ವಿತರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, 2019 ಕೋರೋನ ಕಾಲದಿಂದಲೂ ಕಂಪನಿಯು ಬ್ಲ್ಯಾಂಕೇಟ್ಸ್‌ ಮತ್ತು ವಿವಿಧ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಿಸುತ್ತ ಬಂದಿದೆ. ಪ್ರಸ್ತುತ ನಂದಗಾಂವ ಗ್ರಾಮದ 85 ಕುಟುಂಬಗಳು ಗುಣಮಟ್ಟದ 2 ಕೆಜಿ ಅಕ್ಕಿ, 5 ಕೆಜಿ ಗೋದಿ ಹಿಟ್ಟು, 1 ಕೆಜಿ ಸಕ್ಕರೆ , 1 ಕೆಜಿ ಒಳ್ಳೆಣ್ಣೆ, 1/2 ಕೆಜಿ ಮಸಾಲೆ ಪದಾರ್ಥಗಳನ್ನು ಪಡೆದುಕೊಂಡವು. 

ಕಂಪನಿಯು ಮುಧೋಳ ವಿಭಾಗದ ನಂದಗಾಂವ, ಇಂಗಳಗಿ, ಯಡಹಳ್ಳಿ, ರೂಗಿ, ಉತ್ತೂರ 250 ಕಿಟ್ ಗಳು, ಜಮಖಂಡಿ ವಿಭಾಗದ ಆಲಗೂರ, ಆಲಬಾಳ, ಮುತ್ತೂರ, ಜಂಬಗಿ ಬಿಕೆ 350 ಕಿಟ್ ಗಳು, ಗೋಕಾಕ ವಿಭಾಗದ ಲೋಳಸೂರ, ಮಸಗುಪ್ಪಿ, ಕಮಲದಿನ್ನಿ, ವಡೆರಟ್ಟಿ 250 ಒಟ್ಟು 1 ಸಾವಿರ ಕಿಟ್ ಗಳನ್ನು ವಿತರಿಸಿದೆ ಎಂದರು. 

ಈ ಸಮಯದಲ್ಲಿ ಕಂಪನಿ ನಿರ್ದೇಶಕ ಸುರೇಶ್ ಹೊಸೂರ ಮತ್ತು ರಂಗಪ್ಪ ಹೊಸೂರ, ಸದಾಶಿವ ಗೊಬ್ಬರದ, ಯಲ್ಲಪ್ಪ ಉಪ್ಪಾರ, ಶಿವಾನಂದ ಕಡ್ಲಿಮಟ್ಟಿ, ಮಹಾದೇವ ಮನ್ನೆನ್ನವರ, ಧೀರಜ್ ಓಸ್ವಾಲ, ಕಂಪನಿಯ ಸಿಬ್ಬಂದಿ ಹಾಗೂ ಗ್ರಾಮದ ಇನ್ನಿತರರು ಇದ್ದರು. 


ಸುದ್ದಿ ಓದಿ