ಕಾಯಕಯೋಗಿಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ
ಬಳ್ಳಾರಿ 06: ಸನ್ಮಾರ್ಗ ಗೆಳೆಯರ ಬಳಗ ಮಲಬಾರ್ ಗೋಲ್ಡ್ ಬಳ್ಳಾರಿ ಇವರ ಸಹಯೋಗದಲ್ಲಿ ನಗರದ ರಸ್ತೆ ಬದಿಯಲ್ಲಿ ಚಪ್ಪಲಿ ಹೊಲಿಯುವ ಕೆಲಸವನ್ನು ಮಾಡುತ್ತಿರುವ ಕಾಯಕಯೋಗಿಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿದರು.
ಸನ್ಮಾರ್ಗದ ಅಧ್ಯಕ್ಷ ಎಚ್ ಲಕ್ಷ್ಮಿಕಾಂತ ರೆಡ್ಡಿ ಲಾಕ್ ಡೌನ್ ದಿನ ನಿತ್ಯ ಕೆಲಸ ಮಾಡಿ ಜೀವನ ಸಾಗಿಸುವುದು ತುಂಬಾ ಕಷ್ಟಕರವಾಗಿದೆ ಅಂತವರನ್ನು ಗುರುತಿಸಿ ವಾರಕ್ಕೆ ಆಗುವಷ್ಟು ಆಹಾರ ಧಾನ್ಯಗಳ ಕಿಟ್ ನೀಡುತ್ತಿದ್ದವೆ ಎಂದರು. ಚೈತನ್ಯ ರಾಧಾಕೃಷ್ಣ ಸದಾ ಜನರ ಮಧ್ಯೆ ಇರುವಂತಹ ನೀವುಗಳು ವ್ಯಾಕ್ಸಿನ್ ಹಾಕಿಸಿಕೊಳ್ಳಿ ಸರ್ಕಾರದ ನಿಯಮಗಳನ್ನು ಪಾಲಿಸಿ ಎಂದು ಹೇಳಿದರು.
ಮಲಬಾರ್ ಗೋಲ್ಡ್ ಡಿ ವಿಜಯಕುಮಾರ್ ಉಪಾಧ್ಯಕ್ಷ ಸಲ್ಲ ಹನುಮಂತ ರೆಡ್ಡಿ ಸತೀಶ ಕುಮಾರ್. ತೇಜ ರಘುರಾಮ ಸಿದ್ದು ವಣೆನೂರು ಅಶೋಕ್ ಭಂಡಾರಿ, ಸತ್ಯನಾರಾಯಣ ಪೇಟೆ. ಗಡಿಗಿ ಚನ್ನಪ್ಪ ವೈತ್ತ ಬೆಂಗಳೂರು ರಸ್ತೆ ಕೌಲ್ ಬಜಾರ್ ಮೋತಿ ಸರ್ಕಲ್ ಎಸ್ ಪಿ ಸರ್ಕಲ್ ವಿತರಿಸಲಾಯಿತು.