ಬಳ್ಳಾರಿ

ಗಂಗಾಮತ ಸಮಾಜದಿಂದ ಬ್ರೆಡ್, ಹಾಲು, ಹಣ್ಣು ವಿತರಣೆ

ಗಂಗಾಮತ ಸಮಾಜದಿಂದ ಬ್ರೆಡ್, ಹಾಲು, ಹಣ್ಣು ವಿತರಣೆ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 05: ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಕೊಡಗೈ ದಾನಿಗಳಾದ ನಾಡೋಜ ಜಿ.ಶಂಕರ್ ಅವರ ಜನ್ಮ ದಿನದ ನಿಮಿತ್ಯ ವಿಜಯನಗರ ಜಿಲ್ಲಾ ಗಂಗಾಮತ (ಬೆಸ್ತ) ಸಮಾಜ ಸಂಘದಿಂದ ಹಗರಿಬೊಮ್ಮನಹಳ್ಳಿಯ ವೆಂಕೋಬಣ್ಣನವರ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ಹಾಗೂ ಹೊರರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಿದರು. 

ಈ ಸಂದಂರ್ಭದಲ್ಲಿ ಗಂಗಾಮತ ಸಮಾಜದ ವಿಜಯನಗರ ಜಿಲ್ಲಾಧ್ಯಕ್ಷ ಅಂಬಾಡಿ ನಾಗರಾಜ್ ಮಾತನಾಡಿ ನಮ್ಮ ಸಮಾಜದ ಅನರ್ಘ್ಯ ರತ್ನಗಳಾದ ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರವರ 76ನೇ ಹಾಗೂ ನಾಡೋಜ ಶಂಕರ್ 66ನೇ ಹುಟ್ಟು ಹಬ್ಬದ ನಿಮಿತ್ಯ ತಾಲೂಕಾಸ್ಪತ್ರೆಯ ಒಳ ಹಾಗೂ ಹೊರರೋಗಿಗಳಿಗೆ ಬ್ರೆಡ್ ಸೇರಿದಂತೆ ಹಾಲು, ಹಣ್ಣು ವಿತರಿಸಲಾಗುತ್ತಿದೆ ರಾಮನಾಥ್ ಕೋವಿಂದ್ ಅವರು ವಿನಮ್ರ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ, ವಿನಮ್ರತೆಯಿಂದ ರಾಷ್ಟ್ರವನ್ನು ಪ್ರೀತಿಸುವ ವ್ಯೆಕ್ತಿಯಾಗಿದ್ದಾರೆ ಉತ್ತರ ಪ್ರದೇಶದ ಒಂದು ಪುಟ್ಟ ಹಳ್ಳಿಯ ಸಾಮಾನ್ಯ ರೈತಮನೆತನದಲ್ಲಿ ಜನಿಸಿ ನಂತರ ವಕೀಲಿ ವೃತ್ತಿ ಮಾಡುತ್ತಾ ರಾಜ್ಯಸಭೆಗೆ ಆಯ್ಕೆಯಾದರು,ಬಿಹಾರ್ ರಾಜ್ಯಪಾಲರಗಿಯು ಸೇವೆ ಸಲ್ಲಿಸಿ ನಂತರ ರಾಷ್ಟ್ರಪತಿ ಹೆದ್ದೆಯನ್ನು ಅಲಂಕರಿಸಿದ್ದಾರೆ ಇಂದು ಅವರಿಗೆ ಶುಭ ಕೋರಿ ಇನ್ನು ಮುಂದಿನ ದಿನಗಳಲಿ ರಾಷ್ಟ್ರಕ್ಕೆ ಉತ್ತಮ ಸೇವೆ ಸಲ್ಲಿಸುವಂತೆ ಭಗವಂತ ಕೃಪೆ ತೋರಲಿ ಮತ್ತೋರ್ವರಾದ ನಾಡೋಜ ಶ್ರೀಶಂಕರ ಅವರು ಶೋಷಿತರ ದ್ವನಿ,ಧಮನಿತ ಜನರ ಆಶಾಕಿರಣ ಸಾಮಾಜಿ ನ್ಯಾಯದ ಪರಿಪಾಲಕರಾಗಿದ್ದರು ಎಂದು ತಿಳಿಸಿ  ಜನ್ಮದಿನಾಚರಣೆಯ ಶುಭ ಕೋರಿದರು. 

ಈ ಸಂಧರ್ಭದಲ್ಲಿ ಸಿಹಿ ನೀರು ಪಕ್ಕೀರ​‍್ಪ, ಕಡ್ಲಬಾಳು ರಮಮೂರ್ತಿ, ವೀರೇಶ್ ಕಡಲಬಾಳು, ಸರ್ದಾರ ರಾಮಣ್ಣ, ಸರ್ದಾರ ಯಮನೂರ, ಸರ್ದಾರ ಗೋವಿಂದಪ್ಪ, ನಾಗರಾಜ, ಪೂಜಾರ ಹುಲುಗಪ್ಪ, ಗೋವಿಂದಪ್ಪ, ಕೊಳ್ಳಿ ವೇಂಕಟೇಶ, ನಿಂಗಪ್ಪ, ಭರ್ಮಪ್ಪ, ನಾರಾಯಣಪ್ಪ, ಬಾಲಾಜಿ ಕೊಟ್ರೇಶ್, ಮಹೇಶ್, ರವಿ ಗೌಡ ಸೇರಿದಂತೆ ಗಂಗಾಮತ ಸಮಾಜದ ಮುಕಂಡರು ಭಾಗವಹಿಸಿದ್ದರು. 


ಸುದ್ದಿ ಓದಿ