ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ
ಹಗರಿಬೊಮ್ಮನಹಳ್ಳಿ 13: ತಾಲೂಕಿನ ಹಂಪಾಪಟ್ಟಣ ಗ್ರಾಮದ ಚಂದ್ರ ಮೌಳೇಶ್ವರ ಅನುಧಾನಿತ ಪ್ರೌಡಶಾಲೆಯ ಒಂಬತ್ತನೇ ತರಗತಿಯ 3 ಹಾಗೂ ಎಂಟನೇ ತರಗತಿಯ ಒಬ್ಬ ವಿದ್ಯಾರ್ಥಿನಿಗೆ ಬ್ರೆಡ್ಸ್ ಬೆಂಗಳೂರು ಹಾಗೂ ಹೊಸಪೇಟೆ ಡಾನ್ ಬೋಸ್ಕೊ ಸಂಸ್ಥೆಯಿಂದ ಸೈಕಲ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾನ್ ಬೋಸ್ಕೊ ಸಂಸ್ಥೆಯ ನಿರ್ದೇಶಕರಾದ ಫಾದರ್ ಆನಂದ್ ಮಾತನಾಡಿ ಕಳೆದ ಎರಡು ದಿನಗಳ ಹಿಂದೆ ಇದೇ ಹಂಪಾಪಟ್ಟಣದ ಚಂದ್ರ ಮೌಳೇಶ್ವರ ಅನುಧಾನಿತ ಪ್ರೌಡಶಾಲೆಯ ಆವರಣದಲ್ಲಿ ಹೊಸಪೇಟೆಯ ಮಕ್ಕಳ ಸಹಾಯವಾಣಿಯ ಮಕ್ಕಳ ಮುಕ್ತ ಸಂವಾಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಒಂಬತ್ತನೇ ತರಗತಿಯ ವಿಧ್ಯಾರ್ಥಿನಿ ಶಶಿಕಲಾ ಮಾತನಾಡಿ ನಾನು ಮತ್ತು ನನ್ನ ಇನ್ನು ಮೂವರು ಸ್ನೇಯಿತೆಯರು ಗುಳೇದಾಳ್ ಹಳ್ಳಿಯಿಂದ ಪ್ರತಿ ದಿನ ಐದು ಕಿಲೋ ಮೀಟರ್ ನಡೆದುಕೊಂಡು ಶಾಲೆಗೆ ಬರಬೇಕು ತುಂಬಾ ತೊಂದರೇ ಅಗುತ್ತದೆ ಎಂದು ಹೇಳಿದಾಗ ತಕ್ಷಣ ಈ ಸಮಸ್ಯಗೆ ಪರಿಹಾರ ಒದಗಿಸಬೇಕೆಂದು ನಮ್ಮ ಬೆಂಗಳೂರಿನ ಬ್ರೆಡ್ಸ್ ಸಂಸ್ಥೆಗೆ ಮನವಿ ಮಾಡಿಕೊಂಡಾಗ ಅಲ್ಲಿ ಕಾರ್ಯಕಾರಿ ನಿರ್ದೇಶಕರಾದ ಫಾದರ್ ರುಬಿನ್ ಆ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲು ಒಪ್ಪಿದ್ದು ಇಂದು ನಾಲ್ಕು ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ ಮಾಡಲಾಯಿತು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು, ಅದೇ ರೀತಿ ಮಕ್ಕಳ ಮಕ್ಕಳ ಸಹಾಯವಾಣಿಯ ಸಂಯೋಜಕರಾದ ಚಿದಾನಂದ ಚೈಲ್ಡ ಲೈನ್ ಸೇ ದೋಸ್ತ ಟ್ಯಾಗನ್ನು ಮಕ್ಕಳಿಗೆ ವಿತರಿಸಿದರು.
ಸೈಕೆಲ್ ಪಡೆದ ವಿದ್ಯಾರ್ಥಿನಿ ಶಶಿಕಲಾ ಮಾತನಾಡಿ ಡಾನ್ ಬೋಸ್ಕೊ ಸಂಸ್ಥೆಯಿಂದ ನಮಗೆ ಸೈಕೆಲ್ ವಿತರಣೆ ಮಾಡಿರುವುದು ತುಂಬಾ ಸಂತೋುುಷವಾಗಿದೆ ನಾವು ಇನ್ನು ಮುಂದೆ ಸೈಕಲ್ ನಲ್ಲಿಯೇ ಶಾಲೆಗೆ ಬರಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾನ್ ಬೋಸ್ಕೊ ಸಂಸ್ಥೆಯ ಕ್ರೀಮ್ ಯೋಜನೆಯ ಸಂಯೋಜಕರಾದ ಶರಣಪ್ಪ, ಮಕ್ಕಳ ಸಹಾಯ ವಾಣಿಯ ಸಂತೋಷ ಕುಮಾರ, ಸ್ವಾಮಿ, ಶಿಕ್ಷಕರಾದ ಕೋಟೆಪ್ಪ, ವೆಂಕಟೇಶ ಹಾಗೂ ಸೈಕಲ್ ಪಡೆದುಕೊಂಡ ವಿದ್ಯಾರ್ಥಿನಿಯರು, ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.