ಮುದ್ದೆಬಿಹಾಲ್

ಬಾಗವಾನ ಜಮಾತದಿಂದ ಬಡವರಿಗೆ ರಮಜಾನ್ ಕಿಟ್ ವಿತರಣೆ

ಬಾಗವಾನ ಜಮಾತದಿಂದ ಬಡವರಿಗೆ ರಮಜಾನ್ ಕಿಟ್ ವಿತರಣೆ

ಮುದ್ದೇಬಿಹಾಳ 24:  ಪಟ್ಟಣದ ಬಾಗವಾನ ಜಮಾಅತ ವತಿಯಿಂದ ಬಡವರಿಗೆ ರಮಜಾನ ಹಬ್ಬದ ಪ್ರಯುಕ್ತ ದಿನಸಿ ವಸ್ತುಗಳ ಕಿಟ್ ವಿತರಣಾ ಕಾರ್ಯಕ್ರಮ ದಿ ಬಾಗವಾನ ಅಲ್ಪಸಂಖ್ಯಾತರ ಪತ್ತಿನ ಸಹಕಾರಿ ಸಂಘದ ಸಭಾ ಭವನ ದಲ್ಲಿ ಇಂದು ಶುಕ್ರವಾರ ಪ್ರಾರ್ಥನೆಯ ನಂತರ ಜರುಗಿತು.  

ಈ ಸಂದರ್ಭದಲ್ಲಿ ಮಾತನಾಡಿದ  ಜಾಮಿಯಾ ಮಸೀದೆ ಇಮಾಮ ಮೌಲಾನಾ ಆಪ್ತಾಬ ರಮಜಾನ ತಿಂಗಳ ಪ್ರತಿಯೊಂದು ಕಾರ್ಯಕ್ಕೆ ಇತರ ದಿನಕ್ಕಿಂತಲೂ ಶೇಖಡಾ70 ರಷ್ಟು ಪುಣ್ಯ ಪ್ರಾಪ್ತಿ ಇದೆ.ಪ್ರತಿ ವರ್ಷ ಹಲವಾರೂ ಮಹನಿಯರು ಬಡವರಿಗೆ ದಿನಸಿ ಕಿಟ್ ವಿತರಿಸುತ್ತಾರೆ ಆದರೆ ಬಾಗವಾನ ಜಮಾತ ನವರು ಈ ಬಾರಿ ವಿಶೇಷವಾಗಿ ಬಡವರ ಮನೆ ಬಾಗಿಲಿಗೆ ಕಿಟ್ ವಿತರಣೆ ಮಾಡಿ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಂಡಿರುವದು ವಿಶೇಷವಾಗಿದೆ. ಇಸ್ಲಾಂ ಧರ್ಮದಲ್ಲಿ ದೇವನ ಸಂಪ್ರೀತಿಗೆ ಪಾತ್ರರಾಗಲೂ ಇಂತಹ ಕಾರ್ಯ ಮಹತ್ವವನ್ನು ಪಡೆದುಕೊಂಡಿದೆ ಎಂದರು. 

ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಹಿರಿಯ ಸದಸ್ಯ ಎಚ ಆರ.ಬಾಗವಾನ ಸಮಾಜದ ಕಾರ್ಯಚಟುವಟಿಕೆಯ ಬಗ್ಗೆ ವರದಿ ವಾಚನ ಮಾಡಿದರು. ಸಂಘದ ಅಧ್ಯಕ್ಷ ಸುಲೇಮಾನ ಮಮದಾಪೂರ ಅಧ್ಯಕ್ಷತೆ ವಹಿಸಿದ್ದರು. 

 ವೇದಿಕೆಯ ಮೇಲೆ ಸಂಘದ ಉಪಾಧ್ಯಕ್ಷ ಎ.ಎ.ಹಳ್ಳೂರ, ಕಾರ್ಯದರ್ಶಿ ಎನ್‌.ಆರ್‌.ಮಮದಾಪೂರ, ಖಜಾಂಚಿ ಜಾಫರ  ಬಾಗವಾನ, ಬಾಗವಾನ ಬ್ಯಾಂಕ ಅಧ್ಯಕ್ಷ ಎಚ್‌.ಬಿ.ಸಾಲಿಮನಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. 

ಬಾಗವಾನ ಮಸೀದೆ ಇಮಾಮ ಮೌಲಾನಾ ಹುಸೇನ ಉಮರಿ ಆಶೀರ್ವಚನ ನೀಡಿದರು. ಎನ್‌.ಆರ.ಮಮದಾಪೂರ ನಿರೂಪಿಸಿದರು. ಡಿ.ಎಮ್ ಚೌಧರಿ ವಂದಿಸಿದರು. 

 ಹಿರಿಯರಾದ ಎಮ್‌.ಆರ್‌.ಕಲಾದಗಿ, ಡಿ.ಡಿ.ಬಾಗವಾನ, ಎನ್‌.ಡಿ.ಬಾಗವಾನ, ಎ.ಕೆ.ಮಕ್ತೆದಾರ, ಎನ್‌.ಡಿ.ಹುಂಚಾಳ, ಯು.ಕೆ.ಮಕ್ತೆದಾರ, ಎ.ಎನ್‌.ಹಳ್ಳೂರ, ಅಲ್ತಾಪ ಬಾಗವಾನ, ಶಪಿ ಬಾಗವಾನ, ಸಯ್ಯದ ಹಳ್ಳೂರ, ಜಾಫರ ಮುಜಾವರ ಉಸ್ಮಾನ ಬಾಗವಾನ, ಅಬ್ದುಲ್ಲಾ ಚೌಧರಿ, ಮುಸ್ತಫಾ ಬಾಗವಾನ, ಅಲ್ಲಾಬಕ್ಷ ಇಟಗಿ, ಮಜೀದ ಬಾಗವಾನ, ಆಶಿಪ ಹಳ್ಳೂರ, ರಷೀದ ಚೌಧರಿ ಮುಂತಾದವರು ಉಪಸ್ಥಿತರಿದ್ದರು. ನಂತರ ಮನೆಮನೆಗೆ ತೆರಳಿ ದಿನಸಿ ಕಿಟ್ ವಿತರಿಸಲಾಯಿತು. 


ಸುದ್ದಿ ಓದಿ