ಶಿಗ್ಗಾವ್

ಡೆಂಗ್ಯೂ ರೋಗ ನಿಯಂತ್ರಣ ಭಿತ್ತಿ ಪತ್ರ ಹಂಚಿಕೆ

ಡೆಂಗ್ಯೂ ರೋಗ ನಿಯಂತ್ರಣ ಭಿತ್ತಿ ಪತ್ರ ಹಂಚಿಕೆ

ಶಿಗ್ಗಾವಿ 09 : ಬನ್ನಿ ಡೆಂಗ್ಯೂ ಮತ್ತು ಚಿಕನಗುನ್ಯಾ ರೋಗ ನಿಯಂತ್ರಣ ಎಂಬ ಬಿತ್ತಿ ಪತ್ರವನ್ನು ಕಾಂಗ್ರೆಸ್ ಮುಖಂಡ ಯಾಶೀರಖಾನ ಪಠಾಣ ಇಡಿ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆಗೆ ಕಾರ್ಯಕರ್ತರ ಮೂಲಕ ಹಂಚುವುದರ ಮೂಲಕ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.    

ಬಿತ್ತಿ ಪತ್ರದಲ್ಲಿ : ರೋಗ ಲಕ್ಷಣಗಳು : ಇದ್ದಕ್ಕಿದ್ದಂತೆ ತೀವ್ರ ಜ್ವರ, ಮೈಕೈ ನೋವು, ಕೀಲು ನೋವು, ತಲೆನೋವು, ಹಣೆಯ ಮುಂಭಾಗ ಕಣ್ಣಿನ ಹಿಂಭಾಗದಲ್ಲಿ ನೋವು.    

ಮುಂಜಾಗ್ರತೆ ಕ್ರಮಗಳು : ಮನೆಯ ಒಳಗೆ ಮತ್ತು ಹೊರಗೆ ಇರುವ ನೀರಿನ ತೊಟ್ಟಿ, ಡ್ರಮ್, ಮತ್ತು ಬ್ಯಾರಲಗಳನ್ನು ವಾರಕ್ಕೊಮ್ಮೆ ಸ್ವಚ್ಚವಾಗಿ ತೊಳೆದು ಬಣಗಿಸಿ ನೀರು ಭರ್ತಿ ಮಾಡಿ ಭದ್ರವಾಗಿ ಮುಚ್ಚಿರಿ, ಮನೆಯ ಸುತ್ತ ಮುತ್ತ ಮಳೆಯ ನೀರು ಸಂಗ್ರಹವಾಗುವಂತಹ ಪ್ಲಾಸ್ಟಿಕ್ ವಸ್ತುಗಳು ಟೈರ, ಟೆಂಗಿನ ಚಿಪ್ಪುಗಳು,ಮುಂತಾದವುಗಳನ್ನು ತಕ್ಷಣ ವಿಲೇವಾರಿ ಮಾಡಿ ಇಡಿಸ್ ಸೊಳ್ಳೆಗಳು ಮೊಟ್ಟೆಗಳನ್ನು ಇಡುವಂತೆ ಜಾಗೃತಿವಹಿಸಿರಿ, ಏರಕೂಲರ್, ಹೂವಿನ ಕುಂಡ, ಕಾರಂಜಿಗಳನ್ನು ಪ್ರತಿ ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಭರ್ತಿ ಮಾಡಲು ಮುಂಜಾಗ್ರತೆಯ ವಹಿಸಬೇಕು ಮಾಹಿತಿಯು ಈ ಭಿತ್ತಿ ಪತ್ರದಲ್ಲಿ ಇದೆ ಈ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಸರಕಾರಿ ಆಸ್ಪತ್ರೆಗೆ ಬೇಟಿ ಕೊಟ್ಟು ಸೂಕ್ತ ಚಿಕಿತ್ಸೆ ಪಡೆಯಲು ವಿನಂತಿಸಲಾಗಿದೆ. 


ಸುದ್ದಿ ಓದಿ