ಸಿದ್ದಾರೂಢ ಧ್ಯಾನಮಂದಿರಕ್ಕೆ 1.50 ಲಕ್ಷ ಸಹಾಯಧನ ವಿತರಣೆ
ಮಹಾಲಿಂಗಪುರ 08: ಪಟ್ಟಣದ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ನಿರ್ಮಿಸುತ್ತಿರುವ ಧ್ಯಾನಮಂದಿರ ಕಾಮಗಾರಿಗೆ ಧರ್ಮಸ್ಥಳದ ಧರ್ಮಾಕಾರಿ ವಿರೇಂದ್ರ ಹೆಗಡೆ ಅವರು ಮಂಜೂರಿ ಮಾಡಿದ 1.50ಲಕ್ಷ ಸಹಾಯಧನ ಡಿಡಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಮುಧೋಳ ತಾಲೂಕಾ ಯೋಜನಾಕಾರಿ ರಾಜು.ಎಸ್ ಅವರು ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮಿಜಿ ಅವರಿಗೆ ವಿತರಿಸಿದರು.
ಡಿಡಿ ವಿತರಿಸಿದ ರಾಜು ಎಸ್. ಅವರು ಮಾತನಾಡಿ ಧರ್ಮಸ್ಥಳದ ಪೂಜ್ಯರ ಆಶೀರ್ವಾದಿಂದ ರಾಜ್ಯದ 31 ಜಿಲ್ಲೆಗಳಲ್ಲಿ 6 ಲಕ್ಷ 67 ಸಾವಿರಕ್ಕೂ ಅಧಿಕ ಮಹಿಳಾ ಸ್ವಸಹಾಯ ಸಂಘಗಳು ನಡೆಯುತ್ತಿವೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಮಹಿಳಾ ಸಂಘಗಳಿಗೆ ಸಾಲದ ನೆರವು, ಸ್ವ ಉದ್ಯೋಗಕ್ಕೆ ನೆರವು, ದೇವಸ್ಥಾನಗಳ ಜೀರ್ಣೋದ್ದಾರ, ಸರ್ಕಾರಿ ಶಾಲೆಗಳ ದುರಸ್ಥಿ, ನಿರ್ಗತಿಕರಿಗೆ ಮಾಸಾಶನ, ವೈದ್ಯಕೀಯ ನೆರವು, ಸಂಘದ ಸದಸ್ಯರ ಮಕ್ಕಳಿಗೆ ವೃತ್ತಿಪರ ಶಿಕ್ಷಣಕ್ಕೆ ಸಹಾಯಧನ, ಶೌಚಾಲಯ ನಿರ್ಮಾಣಕ್ಕೆ ಧನ ಸಹಾಯ ಹತ್ತಾರು ಜನಪ್ರೀಯ ಯೋಜನೆಗಳ ಮೂಲಕ ರಾಜ್ಯದ ಬಡ ಜನರ ಕಲ್ಯಾಣಕ್ಕಾಗಿ ಪೂಜ್ಯರು ಶ್ರಮಿಸುತ್ತಿದ್ದಾರೆ.
ಶ್ರೀ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮ ಟ್ರಸ್ಟ್ ಕಮಿಟಿಯವರು ಪೂಜ್ಯರು ನೀಡಿದ 1.50ಲಕ್ಷ ಹಣವನ್ನು ಮಂಜುನಾಥನ ಪ್ರಸಾದವೆಂದು ತಿಳಿದು ಒಂದು ರೂಪಾಯಿ ಅನಾವಶ್ಯಕ ಖರ್ಚಾಗದಂತೆ ಕಾಳಜಿವಹಿಸಿ ಧ್ಯಾನಮಂದಿರದ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ವಿನಂತಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ರನ್ನಬೆಳಗಲಿ ವಲಯ ಮೇಲ್ವಿಚಾರಕ ಎಚ್.ಲೋಕೇಶ, ಮಹಾಲಿಂಗಪುರ ವಲಯ ಮೇಲ್ವಿಚಾರಕ ರೇಣುಕಾರಾಜ, ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮ ಟ್ರಸಟ್ ಕಮಿಟಿ ಉಪಾಧ್ಯಕ್ಷ ಡಾ.ಬಿ.ಡಿ.ಸೋರಗಾಂವಿ, ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಮೋರೆ, ಖಜಾಂಚಿ ಅಲ್ಲಪ್ಪ ಗುಂಜಿಗಾಂವಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಸೇವಾಪ್ರತಿನಿಧಿಗಳಾದ ಭಾರತಿ ಫಕೀರಪುರ, ಶಿಲ್ಪಾ ಭಾವಿಕಟ್ಟಿ, ಸಾವಿತ್ರಿ ಗೊಂದಿ, ಮಂಜುಳಾ ಹಳ್ಳಿ, ವರ್ಷ ಜಗದಾಳ, ಶ್ರೀಮಠದ ಸದ್ಭಕ್ತರಾದ ಸಿದ್ರಾಮಯ್ಯ ಗೋಠೆ, ಸಿದ್ದು ಧಡೂತಿ ಸೇರಿದಂತೆ ಹಲವರು ಇದ್ದರು.