ಹಗರಿಬೊಮ್ಮನಹಳ್ಳಿ

ನ್ಯಾಯಾಧೀಶರಿಂದ ಸಂವಿಧಾನ ಶಿಲ್ಪಿಗೆ ಅಗೌರವ ; ಕ್ರಮಕ್ಕೆ ಆಗ್ರಹ

ನ್ಯಾಯಾಧೀಶರಿಂದ ಸಂವಿಧಾನ ಶಿಲ್ಪಿಗೆ ಅಗೌರವ ; ಕ್ರಮಕ್ಕೆ ಆಗ್ರಹ

ಲೋಕದರ್ಶನ ವರದಿ 


ಹಗರಿಬೊಮ್ಮನಹಳ್ಳಿ 28: ದೇಶದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಭಾವಚಿತ್ರ ತೆರೆವುಗೊಳಿಸುವಂತೆ ಪಟ್ಟು ಹಿಡಿದಿದ್ದು ನಿಜಕ್ಕೂ ದೇಶಕ್ಕೆ ಅಗೌರವ ತೋರಿದಂತಾಗಿದೆ ಕೂಡಲೇ ರಾಯಚೂರು ಸತ್ರ ನ್ಯಾಯಾಲಯದ ನ್ಯಾ. ಎಂ.ಸಿ.ಮಲ್ಲಿಕಾರ್ಜುನರನ್ನು ಸೇವೆಯಿಂದ ವಜಾಗೊಳಿಸುವಂತೆ ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ದೊಡ್ಡಬಸಪ್ಪ ಆಗ್ರಹಿಸಿದರು. 

ಪಟ್ಟಣದ ತಹಶಿಲ್ದಾರ್ ಕಚೇರಿ ಎದುರು ನ್ಯಾ. ಎಂ.ಸಿ.ಮಲ್ಲಿಕಾರ್ಜುನ ವಿರುಧ್ಧ ತಾಲೂಕು ಡಿಎಸ್‌ಎಸ್ ಸಂಘಟನೆಯು ಪ್ರತಿಭಟಿಸಿ, ತಹಶಿಲ್ದಾರ್ ಮೂಲಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು, ಮುಖ್ಯ ಮಂತ್ರಿಗಳಿಗೆ, ವಿಜಯನಗರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ತೆರೆವುಗೊಳಿಸಿದ್ದನ್ನು ಖಂಡಿಸಿ ಅವರಿಗೆ ಮನವಿ ನೀಡಿ ಮಾತನಾಡಿದರು. 

ಬಿಡಿ ಸಂಸ್ಥಾನಗಳನ್ನು ಇಡಿಯಾಗಿ ಮಾಡಿ ಗಣರಾಜ್ಯೋತ್ಸವವನ್ನು ಆಚರಣೆ ಮಾಡುವ ಸುದಿನವನ್ನು ಹಬ್ಬದಂತೆ ಆಚರಿಸಬೇಕು ಅದನ್ನು ಬಿಟ್ಟು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರೆವುಗೊಳಿಸಿದರೆ ಮಾತ್ರ ಕಾರ್ಯಕ್ರಮಕ್ಕೆ ಬರುವೆ ಎಂಬ ಹಠ ಸಾಧಿಸಿರುವುದು ದೇಶಕ್ಕೆ ತೋರಿದ ಅಗೌರವವಾಗಿದೆ ಇಂತಹ ಕೃತ್ಯ ನ್ಯಾಯಾಧೀಶರಿಂದ ಆಗಿರುವುದು ನಿಜಕ್ಕೂ ಅಪರಾಧವಾಗಿದೆ, ಮೊದಲು ಸಂವಿಧಾನಕ್ಕೆ ಗೌರವ ನೀಡುವ ನ್ಯಾಯಾಧೀಶರೇ ಇಂತಹ ಕೃತ್ಯವೆಸಗಿರುವುದು ಖಂಡನೀಯ ಈ ಕೂಡಲೇ ಇದಕ್ಕೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. 

ಈ ಸಂಧರ್ಭಧಲ್ಲಿ ಡಿಎಸ್‌ಎಸ್ ಜಿಲ್ಲಾಧ್ಯಕ್ಷ ರಮೇಶ್, ಎ.ಮಹೇಶ್, ಹೆಚ್‌.ಮರಿಸ್ವಾಮಿ, ಕಾಳಿ ಬಸವರಾಜ, ಕೆ.ಮಹೇಶ್ವರ, ಹೆಚ್‌.ಜಿ.ಸ್ವಾಮಿ, ಹೆಚ್‌.ಭರಮಪ್ಪ, ಹತ್ತಿ ಅಡಿವೆಪ್ಪ, ಬುಳ್ಳಪ್ಪ ಉಪ್ಪಾರಗಟ್ಟಿ, ಒಚಿಟಿ ಮೇಘರಾಜ, ಎಂ.ಮೈಲಪ್ಪ, ಹೆಚ್‌.ಮರಿಯಪ್ಪ, ಉಮೇಶ್ ಉಲವತ್ತಿ, ಅನಂದಳ್ಳಿ ದೊಡ್ಡಬಸಪ್ಪ, ಅಲಬೂರು ಗಣೇಶ್, ಎ.ಕೆ.ರಾಮಣ್ಣ, ಪಿ.ಯಮುನೂರ​‍್ಪ ಸೇರಿದಂತೆ ಸಮಾಜದ ಮುಖಂಡರು ಇದ್ದರು. 


ಸುದ್ದಿ ಓದಿ