ಪಕ್ಷ ದ್ರೋಹ ಮಾಡುವವರಿಗೆ ಇದು ಎಚ್ಚರಿಕೆಯ ಗಂಟೆ: ಶ್ರೀಮಂತ ಹಳ್ಳಿ
ವಿಪ್ ಉಲ್ಲಂಘನೆ ಸದಸ್ಯರ ಅನರ್ಹತೆ,
ಮಹಾಲಿಂಗಪುರ 30: ವಿಪ್ ಉಲ್ಲಂಘನೆ ಮಾಡಿದ ಮೂವರು ಸದಸ್ಯರನ್ನು ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಅನರ್ಹಗೊಳಿಸಿರವುದು ಪಕ್ಷಕ್ಕೆ ಸಂದ ಜಯ ಹಾಗೂ ಪಕ್ಷ ದ್ರೋಹ ಮಾಡುವವರಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ ಎಂದು ಭಾಜಪ ನಗರ ಘಟಕದ ಅಧ್ಯಕ್ಷ ಶ್ರೀಮಂತ ಹಳ್ಳಿ ಹೇಳಿದರು.
ಸ್ಥಳೀಯ ಜಿಎಲ್ಬಿಸಿ ಸಭಾಭವನದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿಗಳ ಅವರು. 28 ರ ಆದೇಶ ಪ್ರತಿ ಬಿಡುಗಡೆ ಮಾಡಿ ಮಾತನಾಡಿದರು. ಮಹಾಲಿಂಗಪುರ ಪುರಸಭೆಗೆ ಭಾಜಪ ಪಕ್ಷದಿಂದ ಆಯ್ಕೆಯಾಗಿ ಅಧಿಕಾರ ಮತ್ತು ಸ್ವಾರ್ಥಕ್ಕಾಗಿ ಕೊನೆಯ ಘಳಿಗೆಯಲ್ಲಿ ಕಾಂಗ್ರೆಸ್ ಜೊತೆ ಸೇರಿ ಪಕ್ಷಕ್ಕೆ ದ್ರೋಹ ಮಾಡಿದ್ದ ಸವಿತಾ ಹುರಕಡ್ಲಿ, ಚಾಂದನಿ ನಾಯಕ, ಗೋದಾವರಿ ಬಾಟ್ ಇವರ ಸದಸ್ಯತ್ವವನ್ನು ರದ್ದು ಪಡಿಸಿ ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ಆದೇಶ ಹೊರಡಿಸಿದ್ದು ಪಕ್ಷ ದ್ರೋಹಿಗಳಿಗೆ ತಕ್ಕ ಶಿಕ್ಷೆಯಾಗಿದೆ ಎಂದರು.
ಭಾಜಪ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಕುಳ್ಳೊಳ್ಳಿ ಮಾತನಾಡಿ, ಜಿಲ್ಲಾಧಿಕಾರಿಯವರ ಆದೇಶ ಸ್ವಾಗತಾರ್ಹ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಶೇಖರ ಅಂಗಡಿ, ಈರ್ಪ ದಿನ್ನಿಮನಿ, ಮನೋಹರ ಶಿರೋಳ, ಸಜನಸಾಬ ಪೆಂಡಾರಿ, ಭೀಮಶಿ ಗೌಂಡಿ, ಶಿವಲಿಂಗ ಘಂಟಿ, ಚನ್ನಪ್ಪ ಪಟ್ಟಣಶೆಟ್ಟಿ, ರಾಜು ಚಮಕೇರಿ, ಚನ್ನಬಸು ಯರಗಟ್ಟಿ, ರವಿ ಜವಳಗಿ, ಶಿವಾನಂದ ಅಂಗಡಿ, ಮಹಾಲಿಂಗ ಮುದ್ದಾಪುರ, ಬಸವರಾಜ ಚಮಕೇರಿ, ಮಹೇಶ ಮುಕುಂದ, ಹನಮಂತ ಜಮಾದಾರ, ನಾಗಪ್ಪ ಖೋತ, ಶಿವನಗೌಡ ಪಾಟೀಲ, ಜಮೀರ ಯಕ್ಸಂಬಿ, ಶಿವಾನಂದ ಹುಣಶ್ಯಾಳ, ಚನ್ನಪ್ಪ ರಾಮೋಜಿ ಇತರರು ಇದ್ದರು.