ಕ್ರೀಡೆ

ರೊನಾಲ್ಡೊ ವಿರುದ್ಧದ ಅತ್ಯಾಚಾರ ಆರೋಪ ವಜಾ

ರೊನಾಲ್ಡೊ ವಿರುದ್ಧದ ಅತ್ಯಾಚಾರ ಆರೋಪ ವಜಾ

ಲಾಸ್ ವೇಗಾಸ್: ಜೂನ್ 12: ಪೋರ್ಚುಗಲ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ವಿರುದ್ಧದ ಅತ್ಯಾಚಾರ ಆರೋಪವನ್ನು ಯುಎಸ್ ನ್ಯಾಯಾಧೀಶರು ವಜಾಗೊಳಿಸಿದ್ದಾರೆ.

2009ರಲ್ಲಿ ಲಾಸ್ ವೇಗಾಸ್ ಹೋಟೆಲೊಂದರಲ್ಲಿ ರೊನಾಲ್ಡೊ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅಮೆರಿಕದ ಮಾಡೆಲ್ ಕ್ಯಾಥರೀನ್ ಮಯೋರ್ಗಾ ಆರೋಪಿಸಿದ್ದರು.

ಬಳಿಕ, ಲಾಸ್ ವೇಗಾಸ್‌ನಲ್ಲಿರುವ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಜೆನ್ನಿಫರ್ ಡಾರ್ಸೆ, ಮಯೋರ್ಗಾ ಅವರ ವಕೀಲರೊಬ್ಬರು ನ್ಯಾಯಯುತವಾದ ವಿಚಾರಣೆಯನ್ನು ನಡೆಸಲು ಸಾಧ್ಯವಾಗದಷ್ಟು ಗಂಭೀರ ದುರ್ವ್ಯವಹಾರವನ್ನು ಮಾಡಿದ್ದಾರೆ ಎಂದು ಹೇಳಿದರು.

ಮಯೋರ್ಗಾ ಅವರ ವಕೀಲರಾದ ಲೆಸ್ಲಿ ಸ್ಟೋವಾಲ್ ಅವರು ದುಷ್ಕೃತ್ಯ ಮತ್ತು ದಾವೆಯ ಸರಿಯಾದ ಪ್ರಕ್ರಿಯೆಯಲ್ಲಿ ಭಾಗಿಯಾಗಲಿಲ್ಲ ಎಂದು ನ್ಯಾಯಾಧೀಶ ಡಾರ್ಸೆ ಆರೋಪಿಸಿದರು. ಇದು ಮಯೋರ್ಗಾ ಕೋರ್ಟ್ ನಲ್ಲಿ ಸೋಲು ಕಾಣಲು ಕಾರಣವಾಯಿತು ಎಂದು ತಿಳಿಸಿದರು.

ಈ ಮಧ್ಯೆ 2009ರಲ್ಲಿ ಲಾಸ್ ವೇಗಾಸ್‌ನಲ್ಲಿ ಇಬ್ಬರೂ ಭೇಟಿಯಾದರು ಎಂಬುದನ್ನು ಪೋರ್ಚುಗಲ್ ಫುಟ್ಬಾಲ್ ಆಟಗಾರ ರೊನಾಲ್ಡೊ ನಿರಾಕರಿಸಲಿಲ್ಲ.

ಸುದ್ದಿ ಓದಿ