ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ನಿತ್ಯ ಶ್ರಾವಣಮಾಸದ ಪ್ರವಚನ
ಮಹಾಲಿಂಗಪುರ 10: ಪಟ್ಟಣದ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಿತ್ಯ ಸಂಜೆ 7 ರಿಂದ 8-30ರವರೆಗೆ ಪ್ರವಚನ ಜರುಗಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ಪೀಠಾಧಿಪತಿ ಸಹಜಾನಂದ ಸ್ವಾಮಿಜಿ ಹೇಳಿದರು.
ಸೋಮವಾರ ಮುಂಜಾನೆ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಪ್ರಾರಂಭಿಸಿದ ನಿರಂತರ ಓಂ ನಮ: ಶಿವಾಯ ಮಹಾಮಂತ್ರದ ನಾಮಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಶ್ರಾವಣ ತಿಂಗಳ ಪೂರ್ತಿ, ಶ್ರೀಮಠದಲ್ಲಿ ಮುಂಜಾನೆ 7ರಿಂದ ಸಂಜೆ 7ರವಗೆರೆ ನಿರಂತರ ನಾಮಸ್ಮರಣೆ, ಸದ್ಭಕ್ತರಿಂದ ನಿತ್ಯ 56 ಅಧ್ಯಾಯಗಳ ಚರಿತ್ರೆ ಪಠಣ ನಡೆಯಲಿವೆ ಎಂದರು.
ಶ್ರಾವಣಮಾಸದ ನಿತ್ಯ ಪ್ರವಚನ ಕಾರ್ಯಕ್ರಮದಲ್ಲಿ ಖ್ಯಾತ ಪ್ರವಚನಕಾರ ಪದ್ಮಶ್ರೀ ಇಬ್ರಾಹಿಂ ಸುತಾರ, ಮಲ್ಲೇಶಪ್ಪ ಕಟಗಿ ಶರಣರು ಪ್ರವಚನ ನೀಡಲಿದ್ದಾರೆ.
ಶರಣ ಮಲ್ಲೇಶಪ್ಪ ಕಟಗಿ, ಈಶ್ವರ್ಪ ಮುಂಡಗನೂರ, ಸಂಗಪ್ಪ ಶೀಲವಂತ, ಮಹಾಲಿಂಗಪ್ಪ ಕರೆಹೊನ್ನ, ಹಣಮಂತ ಮೀರಾಪಟ್ಟಿ, ಉದ್ದಪ್ಪ ನೀಲಾರಿ, ಮಹಾಲಿಂಗಪ್ಪ ಜಿಟ್ಟಿ, ಸಿದ್ರಾಮ ಮಠಪತಿ, ಮಲ್ಲಪ್ಪ ಯಾದವಾಡ, ಪರಿಠ ಇತರರಿದ್ದರು.