ಕೋ-ಆಪರೇಟಿವ ಸೊಸೈಟಿಗೆ ನಿರ್ದೇಶಕರು ಅವಿರೋಧವಾಗಿ ನೇಮಕ : ಮುಷಾಫೀರ ನದಾಫ

ಕೋ-ಆಪರೇಟಿವ ಸೊಸೈಟಿಗೆ ನಿರ್ದೇಶಕರು ಅವಿರೋಧವಾಗಿ ನೇಮಕ : ಮುಷಾಫೀರ ನದಾಫ

ಧಾರವಾಡ 25: ಧಾರವಾಡ ಜಿಲ್ಲಾ ಕಂದಾಯ ಇಲಾಖೆಯ ನೌಕರರ ಕೋ- ಆಪರೇಟಿವ ಸೊಸೈಟಿಯ 2024-2029ನೇ ಸಾಲಿನ ಐದು ವರ್ಷಗಳ ಅವಧಿಗಾಗಿ ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಸೊಸೈಟಿ ನಿರ್ದೇಶಕ ಮಂಡಳಿಗೆ ನಾಲ್ಕು ಜನ ಪದಾಧಿಕಾರಿಗಳು ಮತ್ತು ಎಲ್ಲ ಒಂಬತ್ತು ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು   ಚುನಾವಣಾಧಿಕಾರಿ ಮುಷಾಫೀರ ನದಾಫ ಅವರು ತಿಳಿಸಿದ್ದಾರೆ. 

ಈ ಕುರಿತು ಪ್ರಕಟಣೆ ನೀಡಿರುವ ಅವರು, ನಂತರ ನಡೆದ ಪದಾಧಿಕಾರಿಗಳ ಆಯ್ಕೆಯಲ್ಲಿಯೂ ಸಹ ಸಂಘದ ಅಧ್ಯಕ್ಷರಾಗಿ ಆಯ್‌.ಎಫ್‌. ಅಯ್ಯನಗೌಡ್ರ, ಉಪಾಧ್ಯಕ್ಷರಾಗಿ ಅಮಿತ ಮುದ್ದಿ , ಗೌರವ ಕಾರ್ಯದರ್ಶಿಯಾಗಿ ಅಜಯ ಆಯಿ,  ಸಹ ಕಾರ್ಯದರ್ಶಿಯಾಗಿ ಸುವರ್ಣಾ ಚೀಟಿನ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. 

ಸೊಸೈಟಿಯ ಉಳಿದ ನಿರ್ದೇಶಕ ಸ್ಥಾನಗಳಿಗೆ ವೆಂಕಟೇಶ ಹಟ್ಟಿಯವರ, ನಾಸೀರ ಅಮರಗೋಳ, ಮಹೇಶ ನಾಗವ್ವಗೋಳ, ಪರಮಾನಂದ ದಡ್ಡಿನವರ, ಸಚಿನ ಮಾಳಗಿ, ಬಿ.ಐ.ಅಂಗಡಿ, ರವಿ ಸಂಕಣ್ಣವರ, ಸಿರಿಲ್ ಗುತ್ತಲ, ನಿರ್ಮಲಾ ನಂದನವಾಡ ಅವರು ಅವಿರೋಧವಾಗಿ ನೇಮಕಗೊಂಡಿದ್ದಾರೆ. 

ನಿರ್ದೇಶಕರು ಹಾಗೂ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗುವ ಸಂದರ್ಭದಲ್ಲಿ  ಧಾರವಾಡ ಜಿಲ್ಲಾ ಕಂದಾಯ ನೌಕರ ಸಂಘದ ಜಿಲ್ಲಾಧ್ಯಕ್ಷ ರವಿ ಕಟ್ಟಿ, ಮಲ್ಲಿಕಾರ್ಜುನ ಸೊಲಗಿ, ಶ್ರೀಧರ ಕೆ., ಶಿವಕುಮಾರ ಮೇಟಿ, ಮಂಜುನಾಥ ಗೂಳಪ್ಪನವರ, ರಮೇಶ ಬಂಡಿ, ಲಕ್ಷ್ಮಣ ಪತ್ತಾರ, ಮಲ್ಲಿಕಾರ್ಜುನ ಬಿರಾದಾರ ಸೇರಿದಂತೆ ಇತರರು ಇದ್ದರು ಎಂದು ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ