ಮಹಲಿಂಗಪುರ

ಬನಶಂಕರಿದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ

ಬನಶಂಕರಿದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ

ಮಹಾಲಿಂಗಪುರ 09 : ಹಿಂದೂ ದೇವಾಲಯಗಳಲ್ಲಿ ಶ್ರಾವಣ ಮಾಸದಲ್ಲಿ ಪುರಾಣ ಅಧ್ಯಾತ್ಮ, ಜಟೋತ್ಸವ, ದೀಪೋತ್ಸವದಂತ ಕಾರ್ಯಗಳು ನಿರಂತರವಾಗಿ ನಡೆಯುತ್ತವೆ. ಈ ನೆಪದಿಂದಾದರೂ ಭಕ್ತರು ನಿತ್ಯವು ದೇವಸ್ಥಾನಗಳಿಗೆ ಬರುವಂತಾಗಬೇಕು ಅಂದಾಗ ಮಾತ್ರ ಆದ್ಯಾತ್ಮದ ಉಳಿವು ಸಾಧ್ಯ, ಶ್ರಾವಣ ಮಾಸದಲ್ಲಿ ಒಮ್ಮೆಯಾದರೂ ಪುಣ್ಯ ಕಥೆಗಳನ್ನು ಕೇಳುವುದರಿಂದ ಜೀವನ ಪಾವನವಾಗುತ್ತದೆ ಎಂದು ಹಟಗಾರ ಸಮಾಜ ಹಿರಿಯರಾದ ಮಲ್ಲಪ್ಪ ಬಾವಿಕಟ್ಟಿ ಅಭಿಪ್ರಾಯ ಪಟ್ಟರು.  

ಬನಶಂಕರಿದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕಡೆ ಶುಕ್ರವಾರ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು  ಪ್ರತಿ ಮನೆ ಮನೇಯಲ್ಲೂ ಮುಂಬಾಗಿಲಿನ ಮುಂದೆ ರಂಗೋಲಿ ಹಾಕಿ ದ್ವೀಪ ಹಚ್ಚುವುದು ಹಿಂದೂ ಸಂಪ್ರದಾಯವಾಗಿದೆ. ಅದರಂತೆ ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ನೂರಾರು ಮಹಿಳೆಯರು ಪ್ರತಿ ಶುಕ್ರವಾರ ಇಲ್ಲಿ ಬಂದು ಆರತಿ ದ್ವೀಪ ಸೇವೆ ಮಾಡಿ ತಾಯಿ ಬನಶಂಕರಿದೇವಿ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಅಲ್ಲದೆ ಇತ್ತಿತ್ತಲಾಗಿ ಹೆಚ್ಚುತ್ತಿರುವ ವಿದೇಶಿ ಸಂಸ್ಕೃತಿಯನ್ನು ಮೆರೆತು ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸುವಲ್ಲಿ ಎಲ್ಲ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.   

ಪಲ್ಲಕ್ಕಿ ಸೇವೆ : ದೇವಿ ಆರಾಧನೆಗೆ ಭಕ್ತರು ಪಲ್ಲಕ್ಕಿ ಸೇವೆಯನ್ನು ಕರಡಿ ಮಂಗಲವಾದ್ಯ ಮತ್ತು ಆರತಿಯೊಂದಿಗೆ ಗರ್ಭಗುಡಿ ಪ್ರದಕ್ಷಿಣೆ ಹಾಕಿ ಬನಶಂಕರಿದೇವಿಗೆ ಭಕ್ತಿ ಪೂರ್ವಕ ಪೂಜೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಹಟಗಾರ ಸಮಾಜದ ಹಿರಿಯರಾದ  ಡಾ ಬಿ ಡಿ ಸೊರಗಾಂವಿ. ಪ್ರಭು ಬೆಳಗಲಿ, ಶ್ರೀಶೈಲ ಬಾಡನವರ, ಸಿದಗಿರೇಪ್ಪ ಕಾಗಿ, ಅಲ್ಲಪ್ಪ ಹುನ್ನೂರ, ಮಹಾದೇವ ಟಿರ್ಕಿ, ಜಿ ಎಸ್ ಗೊಂಬಿ, ಶ್ರೀಶೈಲ ಕಿರಗಟಗಿ, ಸಿದ್ದಗಿರೆಪ್ಪ ಕಾಗಿ, ಗುರುಪಾದ ಅಂಬಿ, ವರದಾನೆಪ್ಪ ಭಾವಿಕಟ್ಟಿ, ಬಿ ಸಿ ಪೂಜಾರಿ, ಶಂಕರ ಅಂಬಿ, ಶಂಕರೆಪ್ಪ ಹಣಗಂಡಿ, ನಾರಾಯಣ ಕಿರಗಿ, ಶಿವಾನಂದ ಕಿತ್ತೂರು, ಸಂಜಯ ಜಮಖಂಡಿ, ಬಸವರಾಜ ಹುಲ್ಯಾಳ, ಸುಭಾಸ ಭಾವಿಕಟ್ಟಿ, ಈಶ್ವರ ವಂದಾಲ,ಸಂಜಯ ಮುರಗೋಡ, ಅಶೋಕ ಬಾಣಕಾರ, ಚೇತನ ಹುಲ್ಲೂರು, ಪ್ರಕಾಶ ಬಾಡನವರ, ಬಸವರಾಜ ಜೋರಿ, ಈಶ್ವರ ಮುರುಗೋಡ, ರಾಚಪ್ಪ ದಡೂತಿ ಸೇರಿ ಹಲವರು ಇದ್ದರು. ಮಹಾಮಂಗಳಾರತಿಯೊಂದಿಗೆ ಮಹಾಪ್ರಸಾದ ಜರುಗಿತು. 


ಸುದ್ದಿ ಓದಿ