ಮಹಲಿಂಗಪುರ

ಯೋಧರ ಮನೆಯಲ್ಲಿ ದೀಪಾವಳಿ

ಯೋಧರ ಮನೆಯಲ್ಲಿ ದೀಪಾವಳಿ

ಮಹಾಲಿಂಗಪುರ06:  ಬಿಜೆಪಿ ಯುವ ಮೋರ್ಚಾ ವತಿಯಿಂದ ಶಾಸಕ ಸಿದ್ದು ಸವದಿ ಅವರ ನೇತೃತ್ವದಲ್ಲಿ ಸ್ಥಳೀಯ 16 ನೇ ವಾರ್ಡಿನ ಯೋಧರ ಮನೆಗಳಿಗೆ ತೆರಳಿ ಅವರ ಹೆತ್ತವರನ್ನು ಸನ್ಮಾನಿಸಿ, ಸಿಹಿ ತಿನ್ನಿಸಿ ದೀಪಾವಳಿ ಆಚರಿಸಲಾಯಿತು.  

ಯೋಧರಾದ ಸಿದ್ದು ಧಡೂತಿ, ಮಹಾಂತೇಶ ಬಂಡಿ, ಮಂಜು ಆಡಿನ, ಪವನ ಕಲಕೇರಿ ಅವರ ಪಾಲಕ, ಪೋಷಕರನ್ನು ಸನ್ಮಾನಿಸಿ ಗೌರವಿಸುವಲ್ಲಿ ಪುರಸಭಾ ಸದಸ್ಯ ಚನ್ನಬಸು ಯರಗಟ್ಟಿ, ಡಾ.ಅಶೋಕ್ ದಿನ್ನಿಮನಿ, ಸಂಜು ರಾಥೋಡ ಇವರು ಶಾಸಕರಿಗೆ ಸಹಕರಿಸಿದರು.  

ಈ ಸಂದರ್ಭದಲ್ಲಿ ಗುರುಪಾದ ಅಂಬಿ, ಸದಾಶಿವ ಜಿಡ್ಡಿಮನಿ, ಆನಂದ ಘಟ್ನಟ್ಟಿ, ಅಂಬರೀಶ ಕನ್ನಾಳ, ಗುರುಸಿದ್ಧ ಅಂಬಿ, ಶಿವಾನಂದ ಹುಣಶ್ಯಾಳ, ಮುತ್ತಣ್ಣ ಕೊಪ್ಪದ, ಈರಣ್ಣ ಕೊಪ್ಪದ, ಸಂಗಮೇಶ ಅಂಬಿ, ಸಿದ್ದರಾಯ ಅಂಬಿ, ಬಸವರಾಜ ಮಠದ, ವಿಶ್ವನಾಥ ರಾವಳ, ಅಪ್ಪಯ್ಯ ಕಟಬಂದಿ, ಸುರೇಶ ಬಡಿಗೇರ, ಸಾಗರ ಪಾತ್ರೋಟ, ಪ್ರಶಾಂತ ನಡುವಿನಮನಿ ಇತರರು ಇದ್ದರು. 


ಸುದ್ದಿ ಓದಿ