ಸಚಿವ ಸತೀಶ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ ಮೀಟಿಂಗ್ : ಸಿಎಂ, ಸಚಿವರು, ಶಾಸಕರು ಭಾಗಿ
ಬೆಳಗಾವಿ : ಇತ್ತ ಅಧಿವೇಶನ ಕೊನೆ ಹಂತದಲ್ಲಿ ಇರುವಾಗ ಅತ್ತ ರಾಜ್ಯ ರಾಜಕೀಯದ ಚಟುವಟಿಕೆಗಳು ಜೋರಾಗಿದ್ದು, ಅಧಿವೇಶನ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಬಣದ ಆಪ್ತ ಸಚಿವರು ಮತ್ತು ಶಾಸಕರು ಅಲರ್ಟ್ ಆಗಿ ಪಿಲ್ಡಗೆ ಇಳಿಯುತ್ತಿದ್ದಾರೆ.
ಸಚಿವ ಸತೀಶ ಜಾರಕಿಹೊಳಿ ಅವರು ಸಿಎಂ ಸಿದ್ದರಾಮಯ್ಯ ಸೇರಿದಂತೆ ಆಪ್ತರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಈ ಔತಣಕೂಟದಲ್ಲಿ ರಾಜಕೀಯ ವಿದ್ಯಮಾನಗಳ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಳಗಾವಿಯ ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಹಿಂದಾ ಸಚಿವರು, ಶಾಸಕರಿಗೆ ಔತಣಕೂಟ ಆಯೋಜಿಸಿದ್ದಾರೆ.
ಈ ಔತಣಕೂಟದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಾ. ಜಿ. ಪರಮೇಶ್ವರ, ಮಹಾದೇವಪ್ಪ. ಕೆ.ಜೆ. ಜಾರ್ಜ್, ಶಾಸಕ ಕೆ.ಎನ್. ರಾಜಣ್ಣ ಸೇರಿ 15 ನಾಯಕರಿಗೆ ಔತನಕೂಟ ಆಯೋಜನೆ ಮಾಡಲಾಗಿದೆ. ಅಹಿಂದಾ ನಾಯಕರಿಗೆ ವಿಶೇಷ ಭೋಜನೆ ರೆಡಿ ಮಾಡಿಸಿರುವ ಸತೀಶ್ ಜಾರಕಿಹೊಳಿ 30 ಕ್ಕೂ ಅಧಿಕ ತರಹೇವಾರಿ ಖಾದ್ಯ ಸಿದ್ದ ಮಾಡಿಸಿದ್ದಾರೆ.
ಅನಾರೋಗ್ಯ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಸಸ್ಯಾಹಾರ ಊಟ ಮಾಡಿಸಿದ್ದು, ಅಧಿವೇಶನ ಬಳಿಕ ಸಿಎಂ ಹಾಗೂ ಡಿಸಿಎಂಗೆ ಹೈಕಮಾಂಡ್ ಬುಲಾವ್ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ನಾಯಕತ್ವ ಬದಲಾವಣೆ ವಿಚಾರವಾಗಿ ಚರ್ಚಿಸಲು ಹೈಕಮಾಂಡ್‌ನಿಂದ ಬುಲಾವ್ ಬರಬಹುದು, ದೆಹಲಿ ಭೇಟಿಗೂ ಮೊದಲೇ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಬಣ ರಣತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.
ಯಾವುದೇ ಕಾರಣಕ್ಕೂ ಸಿಎಂ ಹುದ್ದೆ ಬಿಟ್ಟು ಕೊಡದಂತೆ ಸಿದ್ದರಾಮಯ್ಯ ಮೇಲೆ ಒತ್ತಡ ಸಾಧ್ಯತೆ ಇದೆ. ಸಚಿವ ಸತೀಶ ಜಾರಕಿಹೊಳಿ ಮನೆಯಲ್ಲಿ ಆಪ್ತರಿಗೆ ಔತಣಕೂಟ ವಿಚಾರ ಕುವೆಂಪು ನಗರದಲ್ಲಿರುವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಎಚ್ ಸಿ ಮಹಾದೇವಪ್ಪ, ಜಮೀರ್ ಅಹಮ್ಮದ್ ಖಾನ್, ಎಂ.ಸಿ ಸುಧಾಕರ್ ಆಗಮಿಸಿದ್ದಾರೆ.
ಗೃಹ ಸಚಿವ ಜಿ ಪರಮೇಶ್ವರ ಜೊತೆಗೆ ನಿವಾಸಕ್ಕೆ ಆಗಮಿಸಿದ ಸತೀಶ್ ಜಾರಕಿಹೊಳಿ. ಡಿನ್ನರ್ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ವಾಪಸ್ ಆಗಿದ್ದಾರೆ.