ರಾಯಚೂರಿನಿಂದ ಹೊರಟ ದಿಂಡಿ ಯಾತ್ರೆಯ
ರಾಯಚೂರಿನಿಂದ ಹೊರಟ ದಿಂಡಿ ಯಾತ್ರೆಯ
ರಾಯಚೂರ 06 : ಮಾನ್ಯರೇ,ಇಂದು 06.07.25 ರವಿವಾರದಂದು ಕ್ಷೇತ್ರ ಕರ್ಕಿಹಳ್ಳಿಯ ಮೃತ್ಯುಂಜಯೇಶ್ವರನ ಜಾತ್ರೆಯ ಅಂಗವಾಗಿ ರಾಯಚೂರಿನಿಂದ ಶ್ಯಾಮಾಚಾರ ಜೋಶಿ ಹಾಗೂ ರಾಮಾಚಾರ್ ಜೋಶಿ ಇವರ ನೇತೃತ್ವದಲ್ಲಿ ದಿನಾಂಕ 01.07.2025 ರಂದು ರಾಯಚೂರಿನಿಂದ ಹೊರಟ ದಿಂಡಿ ಯಾತ್ರೆಯ ಯಾತ್ರಾರ್ಥಿಗಳನ್ನು ಮರಳಿ ಗ್ರಾಮದ ವಿಪ್ರ ಬಾಂಧವರು ಸ್ವಾಗತಿಸಿ ಗ್ರಾಮದ ರಮೇಶ್ ಕುಲಕರ್ಣಿ ಅವರ ಮನೆಗೆ ಕರೆದುಕೊಂಡು ಕೊಂಡು ಹೋದರು.ದಿಂಡಿ ಯಾತ್ರಾರ್ಥಿಗಳನ್ನು ಕುಲಕರ್ಣಿ ದಂಪತಿಗಳು ತಮ್ಮ ಮನೆಗೆ ಸ್ವಾಗತಿಸಿ ಅವರ ಭಜನೆ ಹಾಗೂ ಉಪನ್ಯಾಸಕ್ಕೆ ಎಲ್ಲಾ ವ್ಯವಸ್ಥೆಯನ್ನು ಒದಗಿಸಿಕೊಟ್ಟರು.ದಿಂಡಿ ಯಾತ್ರೆಯ ಉದ್ದೇಶವನ್ನು ಶ್ಯಾಮಾಚಾರ್ ಜೋಶಿ ಅವರು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.ಗಿರಿಧರ, ಲಕ್ಷ್ಮೀ, ಶೇಷಗಿರಿ, ಗಿರಿಜಾ, ದಿವ್ಯಾ, ರಮಾ ಕಾತರಕಿ, ರಂಜನಾ ಅಳವಂಡಿ, ಪವಿತ್ರ, ಸೀತಾ, ತಾರಾಬಾಯಿ ಅವರುಗಳು ಪಾಲ್ಗೊಂಡು ದಿಂಡಿ ಯಾತ್ರೆಗೆ ಶೋಭೆ ತಂದರು.ತಮ್ಮ ವಿಶ್ವಾಸಿ ರಮೇಶ್ ಕುಲಕರ್ಣಿ ಮರಳಿ (ಈ ವರದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.)