ಬಳ್ಳಾರಿ

ಹದಗೆಟ್ಟ ರಸ್ತೆಗಳು: ಕಸ, ಹೊಲಸಿನಿಂದ ತುಂಬಿ ತುಳುಕುತ್ತಿರುವ ಖಾಲಿ ನಿವೇಶನಗಳು

ಹದಗೆಟ್ಟ ರಸ್ತೆಗಳು: ಕಸ, ಹೊಲಸಿನಿಂದ ತುಂಬಿ ತುಳುಕುತ್ತಿರುವ ಖಾಲಿ ನಿವೇಶನಗಳು

ವರದಿ: ವೇಣುಗೋಪಾಲ, ಕೊಟ್ಟೂರು 

ಕೊಟ್ಟೂರು: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಾಲ್ಲೂಕು ಎಂದರೆ ಅದು ಕೊಟ್ಟೂರು ಶ್ರೀಕ್ಷೇತ್ರ ಹಾಗೂ ಪುಣ್ಯಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿದೆ, ಅದರೆ ಅಭವೃದ್ದಿಯಲ್ಲಿ ಬಹಳ, ಬಹಳ ಹಿಂದುಳಿದಿದೆ ಎಂದರೆ ತಪ್ಪಾಗಲಾರದು. ಕರ್ನಾಟಕದಲ್ಲೇ ಕೊಟ್ಟೂರು ಒಂದು ದೊಡ್ಡ ವಿಧಾನಸಭಾ ಕ್ಷೇತ್ರಕ್ಕೇ ಒಳಪಟ್ಟಿದೆ ಮೊದಲು ಕೊಟ್ಟೂರು ವಿಧಾನಸಭಾ ಕ್ಷೇತ್ರ ಇತ್ತು ಈಗ ಕೊಟ್ಟೂರು ತಾಲ್ಲೂಕು ಹಾಗೂ ಹಗರಿಬೊಮ್ಮನಹಳ್ಳಿ ಎರಡು  ಸೇರಿ ಒಂದೇ ವಿಧಾನಸಭಾ ಕ್ಷೇತ್ರದಲ್ಲಿದ್ದು, ಅತ್ಯಂತ ದೊಡ್ಡದಾದ ಕ್ಷೇತ್ರ, ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಹೊಸಪೇಟೆ ಕೊನೆ ಭಾಗದವರೆಗೂ ಕೈ ಚಾಚಿದೆ. ಕೊಟ್ಟೂರಿನಲ್ಲಿ ಸೈಟ್ ಗಳು ಹೊಲಗಳ ದರ ಕೇಳಿದರೇ ಒಂದು ಕ್ಷಣ ಹೌರಾವುದು ಅಂಥೂ ಗ್ಯಾರಂಟಿ. ಜಿಲ್ಲಾ ಮಟ್ಟದ ರೇಟ್‌ಗಳಿದ್ದು. ಸುಮಾರು ಸುತ್ತ ಮುತ್ತಲಿನ ಅನೇಕ ಹಳ್ಳಿಗಳೂ ಸೇರಿದಂತೆ ಅನೇಕ ತಾಲ್ಲೂಕುಗಳ ಜನರು ಸಹ ಕೊಟ್ಟೂರು ಶ್ರೀಕ್ಷೇತ್ರನಾಥ ಗುರುಕೊಟ್ಟೂರೇಶ್ವರ ಸನ್ನಧಿಯಲ್ಲಿ ಮನೆ ಕಟ್ಟಬೇಕು, ಸೈಟು ಹೊಲ ಮಾಡುಬೇಕೆಂಬ ಅಭಿಲಾಷೆ ಹೊಂದಿ ಹಾತೊರಿಯುತ್ತಿದ್ದಾರೆ ಇದೆನ್ನೇಲ್ಲಾ ಮನಗಂಡೇ ಇಲ್ಲಿನ ಧರವು ಸಹ ಜಿಲ್ಲಾ ಮಟ್ಟದಾಗಿದೆ. ನಾವು ಹೇಳ ಹೊರಟಿರುವುದು ಇಲ್ಲಿನ ಸೈಟ್, ಹೊಲ, ಮನೆಗಳ ಧರ ಒಟ್ಟತ್ತಿಗಿರಲಿ, ಅಭಿವೃದ್ಧಿಯಲ್ಲಿ ಬಹಳ, ಬಹಳ ಹಿಂದುಳಿದಿದೆ, ಇಲ್ಲಿ ಅನೇಕ ಒಳ ರಸ್ತೆಗಳು ಹದೆಗೆಟ್ಟು ಓಡಾಡಲು ತೀರ್ವ ತೊಂದರೆಯಾಗಿದ್ದು ಇವು ತಾಲೂಕು ಮಟ್ಟದ ರಸ್ತೆಗಳೇ ಎಂಬ ಚಿಂತೆ ಜನತೆಯದಾಗಿದೆ. 

ಹದೆಗೆಟ್ಟಿರುವ ನಗರದ ಒಳ ರಸ್ತೆಗಳು ಹಾಗೂ ಪ್ರಮುಖ ರಸ್ತೆಗಳ ದುರಸ್ತಿಗೆ ಇಲ್ಲಿನ ಸ್ಥಳೀಯ ಪ.ಪಂ. ಅಧಿಕಾರಿ ವರ್ಗದವರು ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ, ಅನೇಕ ಪ್ರಮುಖ ರಸ್ತೆಗಳ ಚಿತ್ರ ಸಮೇತ ವರದಿ ಮಾಡುತ್ತಿದ್ದೇವೆ. ಸ್ವಲ್ಪ ಮಳೆ ಬಂದರೂ ಸಹ ಗುಂಡಿಗಳಾಗಿ ಪರಿವರ್ತನೆಯಾಗುತ್ತಿವೆ, ಈಗಾಗಲೇ ಬೆಂಗಳೂರು ರಸ್ತೆ ಬಗ್ಗೆ ವರದಿ ಮಾಡಿದ್ದೇವು. ಕಾಟಚಾರಕ್ಕೆ ಅಧಿಕಾರಿಗಳು ಓದಿ ಕೈ ಬಿಟ್ಟರು, ನಾವು ಬರೆಯುವುದು ಅವರಿಗೆ ಸಂಭಧವಿಲ್ಲವೇನೋ ಅನ್ನುವ ರೀತಿಯಲ್ಲಿ ಅಧಿಕಾರಿಗಳು ವರ್ತನೆ ಮಾಡುತ್ತಿದ್ದಾರೆ.  ಈಗ ಮಾಡುತ್ತಿರುವುದು, ಕೊಟ್ಟೂರಿನ ಪ್ರಮುಖ ಜಂಕ್ಷನ್ ರಸ್ತೆಯೆಂದರೆ ತಪ್ಪಾಗಲಾರದು , ಏಕೆಂದರೆ ಈ ರಸ್ತೆಯಲ್ಲಿ ಅನೇಕ  ಇಲಾಖೆಗಳು ಬರುತ್ತವೆ, ಅಲ್ಲದೇ ಬನಶಂಕರಿ ದೇವಸ್ಥಾನ, ಹಾಗೂ ಇನ್ನಿತರ ಪ್ರಮುಖ ರಸ್ತೆಗಳಿಗೆ  ಕೂಡು ರಸ್ತೆ ಇದಾಗಿದೆ. ಮೈದೂರು ಶಿವಣ್ಣನವರ ಮನೆ ಮುಂದೆ ಗುಂಡಿ ಬಿದ್ದು, ಈಗಾಗಲೇ ವರ್ಷವಾಯಿತು. ನಾವು ಯಾಕೆ ವರದಿ ಮಾಡುತ್ತಿದ್ದೇವೆ ಅಂದರೆ, ಈ ರಸ್ತೆಯ ಮೂಲಕವೇ ಸರ್ಕಾರಿ ಅಸ್ಪತ್ರೆಗೇ, ಸಾರ್ವಜನಿಕ ಗ್ರಂಥಾಲಯಕ್ಕೆ, ಶ್ರೀಗುರು ಮರಿ ಕೊಟ್ಟೂರೇಶ್ವರ ದೇವಸ್ಥಾನಕ್ಕೆ, ಹರಪನಹಳ್ಳಿ ರಸ್ತೆಗೇ, ಹೋಗುವ ಪ್ರಮುಖ ಮಾರ್ಗವಾದರೂ ಸಹ ಇದರ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ.  ನಗರದ ಒಳ ರಸ್ತೆಗಳು ಸಹ ತೀವ್ರ ಹದಗೆಟ್ಟದ್ದು, ಸುಗಮ ಸಂಚಾರಕ್ಕೇ ಅಡ್ಡಿಯುಂಟು ಮಾಡುತ್ತಿವೆ, ಬನಶಂಕರಿ ದೇವಸ್ಥಾನದ ರಸ್ತೆ, ಮಾಜಿ ಸಾರಿಗೆ ಸಚಿವರಾಗಿದ್ದ ದಿವಂಗತ ಎಂ.ಎಂ.ಜೆ. ಸದ್ಯೋಜಾತಪ್ಪರ ಮನೆಗೆ ಹೋಗುವ ರಸ್ತೆಗಳು, ಜವಳಿಸರ್ಕಲ್ ಎಡಭಾಗದ ರಸ್ತೆಗಳು ತೀರ್ವ ಹದಗೆಟ್ಟು ವಾಹನ ಸವಾರರು ಸಂಕಟಪಟ್ಟು ಭಯದಲ್ಲಿ ಓಡಾಡುವಂತಾಗಿದೆ. 

ದಿನ ದಿನಕ್ಕೇ ಕೊಟ್ಟೂರು ನಗರ ಹಳೇ ಬಳ್ಳಾರಿಜಿಲ್ಲೆ ಹಾಗೂ ನೂತನ ವಿಜಯನಗರ ಜಿಲ್ಲೆಯಲ್ಲಿ ಅತೀ ವೇಗವಾಗಿ ಬೆಳೆಯುತಿದೆ ಇಲ್ಲಿಗೆ ಶಾಸಕರಾದ ನೇಮಿರಾಜನಾಯ್ಕ ಎರಡು ಪಟ್ಟು ಅನುದಾನ ತಂದರೂ ಸಾಲದು. 

ನಗರದ ಕೆಲ ಪ್ರಮುಖ ರಸ್ತೆಗಳು ಸೇರಿದಂತೆ ಒಳ ರಸ್ತೆಗಳಲ್ಲಿ, ಅದರಲ್ಲೇ ಸ್ವಲ್ಪ ಚೆನ್ನಾಗಿರುವ ರಸ್ತೆಗಳನ್ನು ಹುಡುಕಿ ವಾಹನ ಸವಾರರು ಸಂಚಾರ ಮಾಡಬೇಕಾದ ಪರಸ್ಥಿತಿ ಇದೆ. ರಸ್ತೆ ಹಾಳಾಗಿ ವರ್ಷಗಳೇ ಕಳೆದರೂ ದುರಸ್ತಿಗೆ ಪಟ್ಟಣ ಪಂಚಾಯಿತಿ ಹಾಗೂ ಸಂಭಂಧಪಟ್ಟ ಇಲಾಖೆ ಇನ್ನೂ ಮನಸ್ಸು ಮಾಡದಿರುವುದು ಜನತೆಯಲ್ಲಿ ಅಶ್ಚರ್ಯ ತಂದಿದೆ, ಇಲ್ಲಿನ ಶಾಸಕರಾದ ನೇಮೀರಾಜನಾಯ್ಕ ನಗರ ಸಂಚಾರ ಮಾಡಿ ವೀಕ್ಷಣೆ ಮಾಡುವ ಗೋಜಿಗೆ ಹೋಗಿಲ್ಲ,ವೀಕ್ಷಣೆ ಮಾಡಿ ಅಧಿಕಾರಿಗಳಿಗೆ ಆದೇಶ ಮಾಡಬೇಕೆಂಬುದು ಅನೇಕರ ನೀರೀಕ್ಷೆ,  ಹೀಗಾಗಿ ರಸ್ತೆ ಮಧ್ಯೆ ದೊಡ್ಡ, ದೊಡ್ಡ ಗುಂಡಿಗಳು ನಿರ್ಮಾಣವಾಗಿ ಸಂಚಾರಕ್ಕೆ ಓಡಾಡಲು ಅಸಾಧ್ಯದ ಪರಿಸ್ಥಿತಿ ತಂದೊಡ್ಡಿವೆ. ನೀರು ಹರಿದುಹೋಗಲು ಜಾಗವಿಲ್ಲದೇ ಸ್ವಲ್ಪ ಮಳೆ ಬಂದರೂ ಸಹ ರಸ್ತೇಯಲ್ಲೇ ನೀರು ನಿಲ್ಲುತ್ತಿದ್ದು ಬದಲೀ ಮಾರ್ಗ ವಿಲ್ಲದೇ, ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. 

ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ: ಕಳೆದ ಎಂ.ಎಲ್‌.ಎ. ಚುನಾವಣೆ ಸಂಧರ್ಭದಲ್ಲಿ ತುರಾತುರಿ ಯಲ್ಲಿ 24ಥ7 ನೀರಿಗಾಗಿ ಹಗೆದಿದ್ದ ಒಳ ರಸ್ತೆಗಳಲ್ಲಿ  ಕೆಲವು ವಾರ್ಡಗಳಲ್ಲಿ ಸರಿಪಡಿಸಿದ್ದು ಬಿಟ್ಟರೇ ಉಳಿದ ಅನೇಕ ವಾರ್ಡಗಳಲ್ಲಿ ರಸ್ತೆಗಳು ಅದೇ ಅಯೋಮಯ ಪರಿಸ್ಥಿತಿಯಲಿ ಇವೆ ,ಹಾಗೇಯೇ ಉಳಿದ್ದಿದ್ದರೂ ಸಹ ಸ್ಥಳೀಯ ಆಡಳಿತದ ಕಣ್ಣಿಗೆ ಬಿದ್ದಿಲ್ಲ, ರಸ್ತೆ ದುರಸ್ಥಿ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದು, ಅವರೂ ಸಹ ಇದೇ ಮಾರ್ಗಗಳಲ್ಲಿ ಸಂಚರಿಸುತ್ತಿದ್ದರೂ ಸಹ ಸರಿಪಡಿಸಬೇಕೆಂಬ ಮನಸ್ಸು ಬಾರದೇ ಇರುವುದು ದುರಂತ. ಕೆಲವು ಅಧಿಕಾರಿಗಳನ್ನು ಸಂರಿ​‍್ಕಸಿದರೂ ಸಹ ನಮ್ಮ ಪತ್ರಿಕಗೆ ಪ್ರತಿಕ್ರಿಯೆ ಕೊಡುವ ಮನಸ್ಸು ಮಾಡುತ್ತಿಲ್ಲ. 

ಇನ್ನೂ ರಸ್ತೆಗಳ ಕಥೆ ಅದರೆ ಇಲ್ಲಿರುವ ಸುಮಾರು ಸಾವಿರಗಟ್ಟಲೇ ಖಾಲಿ ನಿವೇಶನಗಳಲ್ಲಿ ಕಸ ಹೊಲಸು ತುಂಬಿ ತುಳುಕಿತ್ತಿದ್ದು, ಕಸ ತುಂಬವ ಗಾಡಿಗಳಲ್ಲಿ ದಿನಪ್ರತಿ ಮೈಕ್ ಮೂಲಕ ಖಾಲಿ ನಿವೇಶನಗಳ ಮಾಲೀಕರಿಗೆ ಎಚ್ಚರಿಕೆ ಕೊಡುತ್ತಿದ್ದರೂ ಸಹ ಮಾಲೀಕರು ಕ್ಯಾರೇ ಅನ್ನುತ್ತಿಲ್ಲ, (ಚಿತ್ರದಲ್ಲಿ ನೋಡುತ್ತಿರುವಂತೆ ಇದು ಒಂದು ಬರೀ ಸ್ಯಾಂಪಲ್ ಚಿತ್ರ ಮಾತ್ರ)  ಇದು ಕೊಟ್ಟೂರು ಪ್ರತಿಷ್ಟಿತ ಬಡಾವಣೆ ಬಸವೇಶ್ವರ ನಗರದ ದೃಶ್ಯ ಅಲದ ಮರದ ಹಿಂಭಾಗ ರಸ್ತೆ ಯ ಎಡಭಾಗದ ಚಿತ್ರ, ಇಲ್ಲಿ ಅನೇಕ ನಾಗರೀಕರು ಗಬ್ಬು ವಾಸನೆ ಹಾಗೂ ವಿಪರೀತಾ ಸೊಳ್ಳೆಗಳ ಜೊತೆ, ರೋಗಗಳ ಅಹ್ವಾನದೊಂದಿಗೆ ವಾಸ ಮಾಡುತ್ತಿದ್ದರೂ ಸಹ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತರದೇ ಹೋಗಿರುವುದೇ ದುರಂತ, ನಮಗೆ ಯಾಕೆ ಬೇಕೆಂಬ ರಾಜಿ ಸೂತ್ರದೊಂದಿಗೆ ಇದೇ ವಾತವರಣದಲ್ಲೇ ಜೀವನ ಕಳೆಯುತ್ತಿದ್ದಾರೆ. 

ಈಗಾಲಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿ ಸರಿ ಮಾಡುತ್ತಾರೆಂಬ ನೀರೀಕ್ಷೆಯಲ್ಲಿದ್ದಾರೆ. 


ಸುದ್ದಿ ಓದಿ