ಮಹಲಿಂಗಪುರ

ಮೆ.ಧ್ಯಾನ್‌ಚಂದ್ ಅವರ ದೇಶಪ್ರೇಮ ಅನುಕರಣನೀಯ : ನಾರನಗೌಡ ಉತ್ತಂಗಿ.

ಮೆ.ಧ್ಯಾನ್‌ಚಂದ್ ಅವರ ದೇಶಪ್ರೇಮ ಅನುಕರಣನೀಯ : ನಾರನಗೌಡ ಉತ್ತಂಗಿ.

ಮಹಾಲಿಂಗಪುರ 30: ಸರ್ವಾಧಿಕಾರಿ ಹಿಟ್ಲರ್ ಒಡ್ಡಿದ ಪ್ರಭಾವಿ ಹುದ್ದೆಯ ಹಾಗೂ ಹಣದ ಆಮಿಷವನ್ನು ತಿರಸ್ಕರಿಸಿ ದೇಶಾಭಿಮಾನ ಮೆರೆದ ಹಾಕಿ ಮಾಂತ್ರಿಕ ಮೆ.ಧ್ಯಾನ್‌ಚಂದ್ ಇಂದಿನ ಯುವ ಪೀಳಿಗೆಗೆ ಮೇಲ್ಪಂಕ್ತಿ ಎಂದು ಪತ್ರಕರ್ತ ನಾರನಗೌಡ ಉತ್ತಂಗಿ ಹೇಳಿದರು. 

ಸ್ಥಳೀಯ ಜೆಸಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ತ್ರೀಯ ಕ್ರೀಡಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮೇಜರ್ ಧ್ಯಾನಚಂದ್ ಸೈನಿಕರಾಗಿ  ಹಾಗೂ  ಒಬ್ಬ ಹಾಕಿ ಪಟುವಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಜಗತ್ತು ಅವರನ್ನು ಒಬ್ಬ ಮಾಂತ್ರಿಕನೆಂದು ಮತ್ತು ಅವರ ಕೈಯಲ್ಲಿದ್ದ ಹಾಕಿ ದಂಡವನ್ನು ಮಂತ್ರದಂಡವೆಂದು ಭಾವಿಸುವಷ್ಟು ಚತುರತೆ ಮೆರೆದು ಜಗತ್ತಿನೆಲ್ಲೆಡೆ ಭಾರತಾಂಬೆಯ ಕಿರ್ತಿಪತಾಕೆ ಹಾರಿಸಿದವರು, ಇವರ ಆಟವನ್ನು ಕಂಡ ಜರ್ಮನಿ ದೇಶದ ಸರ್ವಾಧಿಕಾರಿ ಹಿಟ್ಲರ್ ಇವರನ್ನು ತಮ್ಮ ದೇಶದ ಪರ ಆಡುವಂತೆ ಕೋರಿ ಅದಕ್ಕಾಗಿ ದೇಶದ ಉನ್ನತ ಹುದ್ದೆಗಳನ್ನು ಹಾಗೂ ಸಾಕಷ್ಟು ಸಿರಿಸಂಪತ್ತನ್ನು ನೀಡುವ ಆಮಿಷವನ್ನು ತಿರಸ್ಕರಿಸಿ ಕೊನೆಯವರೆಗೂ ಭಾರತಕ್ಕಾಗಿ ಆಡಿದ ಅವರ ದೇಶಪ್ರೇಮ ಅನುಕರಣನೀಯ ಎಂದರು. 

ಮೆ.ಧ್ಯಾನ್‌ಚಂದ್‌ಅವರ ಭಾವಚಿತ್ರವನ್ನು  ರಾಷ್ಟ್ರ ಧ್ವಜ ಮತ್ತು ಕ್ರೀಡಾ ಧ್ವಜಗಳಿಂದ ಅಲಂಕರಿಸಿ ಗೌರವ ಸಲ್ಲಿಸಲಾಯಿತು. ಕ್ರೀಡಾ ದಿನಾಚರಣೆ ಪ್ರಯುಕ್ತ ದೈಹಿಕ ಶಿಕ್ಷಕ ಆರ್‌.ಜಿ.ಹುದ್ದಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕ ಎನ್‌.ಎಮ್‌.ನಾಢಗೌಡ ಮತ್ತು ವಿದ್ಯಾರ್ಥಿಗಳು ಮಾತನಾಡಿದರು, ಮುಖ್ಯೋಪಾಧ್ಯಾಯ ಎಸ್,ಜಿ.ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು.  

ಕು. ಮೇಘಾ ಬೆಳಕೂಡ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾಲಕ್ಷ್ಮಿ ಗುಳದಳ್ಳಿ ಪ್ರಾರ್ಥಿಸಿ, ಪಲ್ಲವಿ ಸಿಂಗಾಡಿ ಸ್ವಾಗತಿಸಿ, ಭಾಗ್ಯ ನಿಂಗನೂರ ನಿರೂಪಿಸಿ, ಕು. ಸವಿತಾ ಹುದ್ದಾರ ವಂದಿಸಿದರು. 


ಸುದ್ದಿ ಓದಿ