ಬಿಜೆಪಿ ಪಕ್ಷದ ಸಂಘಟನೆಗೆ ದುಂಡಿಗೌಡ್ರ ಚಾಲನೆ

ಬಿಜೆಪಿ ಪಕ್ಷದ ಸಂಘಟನೆಗೆ ದುಂಡಿಗೌಡ್ರ ಚಾಲನೆ

ಲೋಕದರ್ಶನ ವರದಿ 

ಬಿಜೆಪಿ ಪಕ್ಷದ ಸಂಘಟನೆಗೆ ದುಂಡಿಗೌಡ್ರ ಚಾಲನೆ  

ಲೋಕದರ್ಶನ ವರದಿ 

ಶಿಗ್ಗಾವಿ 07: ಬೊಮ್ಮಾಯಿಯವರ ನೇತೃತ್ವದಲ್ಲಿ ಉಪಚುನಾವಣೆಯನ್ನು ಎದುರಿಸಲು ಶ್ರಾವಣ ಮಾಸದ ಮೊದಲ ಸೋಮವಾರದಿಂದ ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೆ ಭೆೇಟಿ ಮಾಡುವ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ಸಂಘಟನೆಗೆ ಇಂದು ಚಾಲನೆ ನೀಡಲಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಭಾರತ ಸೇವಾ ಸಂಸ್ಥೆ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. 

ಪಟ್ಟಣದ ಹಳೆಪೇಟೆ ಓಣಿಯ ಗಜಾನನ ದೇವಸ್ಥಾನದಲ್ಲಿ ವಿವಿಧ ಬಿಜೆಪಿ ಮುಖಂಡರು ಹಾಗೂ ಬೆಂಬಲಿಗರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಪಕ್ಷದ ಸಂಘಟನಾ ಬೇಟಿಗೆ ಚಾಲನೆ ನೀಡಿ ಸುದ್ದಿಗಾರರೋಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿಯ ಅಭಿವೃದ್ದಿ ಮತ್ತು ಕ್ಷೇತ್ರದ ರಕ್ಷಣೆಯನ್ನು ಮುಂದುವರೆಸಲು ಈಗ ಪ್ರತಿಯೊಂದು ಹಳ್ಳಿಗಳಿಗೆ ನಮ್ಮ ಮುಖಂಡರೊಂದಿಗೆ ಬೇಟಿ ನೀಡುತ್ತಿದ್ದೇನೆ, ಕ್ಷೇತ್ರದ ಅಭಿವೃದ್ದಿ ಕಾರ್ಯಗಳು ನಿರಂತರವಾಗಿರಲು ಬಿಜೆಪಿಯ ಹಲವಾರು ಹಿರಿಯರನ್ನ, ಕಾರ್ಯಕರ್ತರನ್ನ, ಬೂತ ಮಟ್ಟದ ಅದ್ಯಕ್ಷರು ಹಾಗೂ ಪದಾಧಿಕಾರಿಗಳನ್ನ ಬೇಟಿ ಮಾಡಿ ಸಮಾಲೋಚನೆ ಮಾಡಲಾಗುವುದು ಎಂದ ಅವರು ಬೊಮ್ಮಾಯಿಯವರ ಹಾಗೂ ಜೋಷಿಯವರ ಕಾರ್ಯಗಳನ್ನ ಜನರ ಎದುರು ಇಟ್ಟು ಸಂಘಟನೆ ರೂಪರೇಷಗಳನ್ನು ಹಾಕಿ ಈ ಅನೀರೀಕ್ಷಿತ ಉಪಚುನಾವಣೆಯಲ್ಲಿ ಗೆಲ್ಲಲು ಸರ್ವ ಸನ್ನಧ್ದವಾಗಿದ್ದೇವೆ ಎಂದರು. 

ನಾನೋಬ್ಬ ಬಿಜೆಪಿ ಪಕ್ಷದ ಪ್ರಭಲ ಟಿಕೆಟ್ ಆಕಾಂಕ್ಷಿ, ಪಕ್ಷದಲ್ಲಿ ಹಲವಾರು ಜನರೂ ಆಕಾಂಕ್ಷಿಗಳಾಗಿದ್ದಾರೆ ಜೊತೆಗೆ ಸ್ಥಳೀಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯವನ್ನೂ ಮಾಡಿದ್ದಾರೆ, ಅದನ್ನ ನಾನು ಸ್ವಾಗತಿಸುತ್ತೇನೆ, ತಾಲೂಕಿನಲ್ಲಿ ಪಕ್ಷ ಸಂಘಟನೆಯ ಜೊತೆಗೆ ಹಲವಾರು ಸಾಮಾಜಿಕ ರಂಗದಲ್ಲಿ ನನ್ನದೇ ಆದ ಸಾಮಾಜಿಕ ಸೇವೆ ಮಾಡಿದ ಸಂತೃತ್ಪಿ ನನಗೆ ಇದೆ, ಬೊಮ್ಮಾಯಿಯವರು ನಮಗೆ ಕೃಷ್ಣ ಇದ್ದ ಹಾಗೆ, ಅವರ ನೇತೃತ್ವದಲ್ಲಿ ಉಪಚುನಾವಣೆೆ ಎದುರಿಸುತ್ತೇವೆ, ಬಿಜೆಪಿ ಪಕ್ಷ ಇದೊಂದು ಶಿಸ್ತಿನ ಪಾಂಡವರ ಪಕ್ಷ, ಕೌರವರನ್ನ ನಾವು ದ್ವಂಸ ಮಾಡಬೇಕಿದೆ, ತಾಲೂಕಿನ ಅಭಿವೃದ್ದಿ ಮುಂದುವರೆಸಬೇಕಿದೆ ಎಂದರು. 

ಸಿ. ವಿ. ಮತ್ತಿಗಟ್ಟಿ, ಎಂ. ಎನ್‌. ವೆಂಕೋಜಿ, ದಯಾನಂದ ಅಕ್ಕಿ, ಹನುಮರೆಡ್ಡಿ ನಡುವಿನಮನಿ, ಭರಮಜ್ಜ ನವಲಗುಂದ, ಗಂಗಣ್ಣ ಕುನ್ನೂರ, ರಮೇಶ ಸಾತಣ್ಣವರ, ಶಂಕರಗೌಡ ಪಾಟೀಲ, ರಮೇಶ ವನಹಳ್ಳಿ, ಶೇಖಣ್ಣ ಹಾದಿಮನಿ, ಬಸವರಾಜ ನಾರಾಯಣಪೂರ, ಮುತ್ತು ಯಲಿಗಾರ, ಶಿವಣ್ಣ ಗಂಜೀಗಟ್ಟಿ, ಶಿವಾನಂದ ಹೊಸಮನಿ, ರಘವೇಂದ್ರ ದೇಶಪಾಂಡೆ, ಬಸವರಾಜ ಹಾವೇರಿ, ಮಾಲತೇಶ ಯಲಿಗಾರ, ಸುರೇಶ ಹರಿಗೊಂಡ, ಮಹಾಲಿಂಗಪ್ಪ ಹಡಪದ ಸೇರಿದಂತೆ ಮುಖಂಡರು ಇದ್ದರು. 


ಸುದ್ದಿ ಓದಿ