ಶಿಗ್ಗಾವ್

ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಡಿ.16 ವರೆಗೆ ಧರ್ಮಸಭೆ

ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ  ಡಿ.16 ವರೆಗೆ ಧರ್ಮಸಭೆ

ಶಿಗ್ಗಾವಿ 11: ತಾಲೂಕಿನ ಬಿಸನಳ್ಳಿ ಗ್ರಾಮದ ಜ.ಪಂ.ವೆ.ಆ.ಸಂ.ಸಂ.ಯೋಗ ಪಾಠಶಾಲೆಯ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಜ.ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಇಷ್ಟಲಿಂಗ ಮಹಾಪೂಜೆ, ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಸೇರಿದಂತೆ ಜ.ಡಾ.ಚಂದ್ರಶೇಖರ ಶಿವಾಚಾರ್ಯರ ಜನ್ಮ ಅಮೃತ ಮಹೋತ್ಸವ ಕಾರ್ಯಕ್ರಮ ನಾಡಿನ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಡಿ.11 ರವಿವಾರ ದಿಂದ ಡಿ.16 ಶುಕ್ರವಾರದ ವರೆಗೆ ನಡೆಯಲಿದೆ. 

ಡಿ.11 ರವಿವಾರ ಸಂಜೆ 6 ಗಂಟೆಗೆ ಜ.ಪಂ.ದ್ವಜಾರೋಹಣದೋಂದಿಗೆ ಐದು ದಿನಗಳ ನಿರಂತರ ನಡೆಯಲಿರುವ ಧರ್ಮಸಭೆ, ಸಿದ್ಧಾಂತ ಶಿಖಾಮಣಿ, ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ನಂತರ ಐದು ದಿನಗಳಕಾಲ ನಡೆಯಲಿರುವ ಧರ್ಮಸಭೆಯ ಧಿವ್ಯ ಸಾನಿಧ್ಯವನ್ನು ಡಾ.ಚಂದ್ರಶೇಖರ ಶಿವಾಚಾರ್ಯರು ವಹಿಸುವರು. ಬಂಕಾಪುರ ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಗುಳೇದಗುಡ್ಡದ ಶ್ರೀ ಡಾ,ನೀಲಕಂಠ ಶಿವಾಚಾರ್ಯರು ಪ್ರಾಸ್ವಾವಿಕ ನುಡಿನಮನ ಸಲ್ಲಿಸುವರು. ಮಾಜಿ ಸಚಿವ ಕೆ.ಎಸ್‌.ಈಶ್ವರ​‍್ಪ ಉದ್ಘಾಟಿಸುವರು. ಡಿ.12 ಸೋಮವಾರ ಬೆಳಿಗ್ಗೆ 7 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಸಂಜೆ 6 ಗಂಟೆಗೆ ನಡೆಯಲಿರುವ ಧರ್ಮಸಭೆ ಅಧ್ಯಕ್ಷತೆಯನ್ನು ಶಂಬಣ್ಣ ಮಾ.ಪ.ಶೆಟ್ಟರ ವಹಿಸುವರು. ಹಿರೇಮಣಿಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯರು, ರಾಣೆಬೆನ್ನೂರ ಶಿವಯೋಗಿ ಶಿವಾಚಾರ್ಯರು ಆಗಮಿಸುವರು. ಡಿ.13 ಮಂಗಳವಾರ ಸಂಜೆ ನಡೆಯಲಿರುವ ಧರ್ಮಸಭೆಯ ಸಾನಿಧ್ಯವನ್ನು ಕಾಶಿ ಜಂಗಮವಾಡಿಮಠದ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ವಹಿಸುವರು. ಹಾವೇರಿ ಗೌರಿಮಠದ ಶಿವಯೋಗಿ ಶಿವಾಚಾರ್ಯರು, ಮಹರಾಷ್ಟ್ರ ಹಿರೇಮಠದ ರೇಣುಕ ಶಿವಾಚಾರ್ಯರು ಆಗಮಿಸುವರು. ಡಿ.14 ಬುಧವಾರ ಸಂಜೆ 6 ಗಂಟೆಗೆ ನಡೆಯಲಿರುವ ಧರ್ಮಸಭೆ ಸಾನಿಧ್ಯವನ್ನು ಉಜ್ಜಯನಿ ಜ.ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರು ವಹಿಸುವರು.

ನೇತೃತ್ವವನ್ನು ಬೆಂಗಳೂರ ವಿಭೂತಿಮಠದ ಡಾ. ಮಹಾಂತಲಿಂಗ ಶಿವಾಚಾರ್ಯರು ವಹಿಸುವರು. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾವೇರಿ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಸಂಸದ ಶಿವಕುಮಾರ ಉದಾಸಿ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ನೆಹರೂ ಓಲೆಕಾರ ಆಗಮಿಸುವರು. ಡಿ.15 ಗುರುವಾರ ಸಂಜೆ 6 ಗಂಟೆಗೆ ನಡೆಯಲಿರುವ ಧರ್ಮಸಭೆಯ ಮುಖ್ಯ ಅತಿಥಿಗಳಾಗಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ, ಕೇಂದ್ರ ಮಾಜಿ ಸಚಿವ ಬಸವಗೌಡ ಪಾಟೀಲ ಯತ್ನಾಳ, ಹುಬ್ಬಳ್ಳಿ ಶಾಸಕ ಅರವಿಂದ ಬೆಲ್ಲದ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಯಡಿಯೂರ​‍್ಪ, ಮಾಜಿ ಸಚಿವ ವಿನಯ ಕುಲಕರ್ಣಿ, ರಾಣೆಬೆನ್ನಾಉರ ಶಾಸಕ ಅರುಣಕುಮಾರ ಪುಜಾರ ವಿಶೇಶ ಉಪನ್ಯಾಸಕರಾಗಿ ಚಕ್ರವರ್ತಿ ಸೂಲಿಬೆಲೆ ಆಗಮಿಸುವರು. ಡಿ.16 ಶುಕ್ರವಾರ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ, ಬೆಳಗಾವಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯ ವೀರಶೈವ,ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್‌.ಪರಶಿವಯ್ಯ ಸೇರಿದಂತೆ ಮತ್ತಿತರ ಗಣ್ಯಮಾನ್ಯರು ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ. 


ಸುದ್ದಿ ಓದಿ