ಮಹಲಿಂಗಪುರ

ಪತ್ರಕರ್ತರನ್ನು ಗೌರವಿಸಿದ ಢಪಳಾಪುರ ಕಾರ್ಯ ಶ್ಲಾಘನೀಯ: ಮನ್ನಯ್ಯನವರಮಠ

ಪತ್ರಕರ್ತರನ್ನು ಗೌರವಿಸಿದ ಢಪಳಾಪುರ ಕಾರ್ಯ ಶ್ಲಾಘನೀಯ: ಮನ್ನಯ್ಯನವರಮಠ

ಮಹಾಲಿಂಗಪುರ 29: ತಮ್ಮ ಸಂಸ್ಥೆಯ ವತಿಯಿಂದ ಪತ್ರಿಕಾ ದಿನಾಚರಣೆ ಆಚರಿಸಿ, ಸರ್ವ ಪತ್ರಕರ್ತರನ್ನು ಗೌರವಿಸಿದ ಢಪಳಾಪುರ ಶಾಲೆಯ ಸಂಸ್ಥಾಪಕ ವಿವೇಕ ಢಪಳಾಪುರ ಕಾರ್ಯ ಶ್ಲಾಘನೀಯ ಎಂದು ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಹೇಳಿದರು. 

ಸಮೀಪದ ರನ್ನಬೆಳಗಲಿಯ ಢಪಳಾಪುರ ವಿದ್ಯಾವಿಹಾರ ಸಿಬಿಎಸ್‌ಇ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ದಿನಾಚರಣೆಯಲ್ಲಿ ಮಾತನಾಡಿದರು. 

ಪತ್ರಕರ್ತ ನಾರನಗೌಡ ಉತ್ತಂಗಿ ಮಾತನಾಡಿ, ಶಾಸಕಾಂಗ, ನ್ಯಾಯಾಂಗ, ಕಾರ್ಯಂಗಗಗಳನ್ನು ಸದಾ ಸರಿ ದಾರಿಯಲ್ಲಿ ನಡೆಸುವ ಮಾಧ್ಯಮಗಳು ಸಂವಿಧಾನದ ಸಾರಥಿಯಿದ್ದಂತೆ, ಮಾಧ್ಯಮಗಳು ಸಂವಿಧಾನದ ಆಧಾರ ಸ್ಥಂಭ.ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಕಲೆ, ಸಾಹಿತ್ಯ ಹೀಗೆ ಹತ್ತಾರು ಮುಖಗಳಲ್ಲಿ ಜ್ಞಾನ ಒದಗಿಸುತ್ತಾ ಸಾಮಾಜಿಕ ಮತ್ತು ರಾಷ್ಟ್ರದ ಸ್ವಾಸ್ಥ್ಯ ಕಾಪಾಡುತ್ತಾ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಪತ್ರಿಕಾ ರಂಗದ ಪಾತ್ರ ಅಗ್ರಗಣ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಜ್ಞಾನಾರ್ಜನೆಗಾಗಿ ತಪ್ಪದೇ ನಿತ್ಯ ದಿನ ಪತ್ರಕೆಗಳನ್ನು ಓದುತ್ತಾ ಜ್ಙಾನವಂತರಾಗಿ ಸಮೃದ್ಧ ರಾಷ್ಟ್ರ ನಿರ್ಮಾಣದಲ್ಲಿ ಭಾಗಿಯಾಗಬೇಕು ಎಂದರು. 

ಪತ್ರಕರ್ತ ಚಂದ್ರಶೇಖರ ಮೋರೆ ಮಾತನಾಡಿ, ಮಕ್ಕಳು ಮೊಬೈಲ್ ಗೀಳಿಗೆ ಬಲಿಯಾಗದೇ ನಿತ್ಯ ಪತ್ರಿಕೆಗಳನ್ನು ಓದುವುದರಿಂದ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು. 

ಪತ್ರಕರ್ತ ಲಕ್ಷ್ಮಣ ಕಿಶೋರಿ ಮಾತನಾಡಿದರು. ಸರ್ವ ಪತ್ರಕರ್ತರನ್ನು ಸನ್ಮಾನಿಸಲಾಯಿತು. 

ಸಂಸ್ಥೆಯ ಸಂಸ್ಥಾಪಕ ವಿವೇಕ ಢಪಳಾಪುರ ಅಧ್ಯಕ್ಷತೆ ವಹಿಸಿ, ಕಾನಿಪ ಜಿಲ್ಲಾ ಘಟಕದ ಸದಸ್ಯ ಎಸ್‌.ಎಸ್‌.ಈಶ್ವರ​‍್ಪಗೋಳ, ಪ್ರಾಂಶುಪಾಲ ಲೂಯೀಸ್ ಬ್ಯಾರೆಟ್ಟೋ ಹಾಗೂ ಪತ್ರಕರ್ತರಾದ ಶಿವಲಿಂಗ ಸಿದ್ನಾಳ, ಮೀರಾ ತಟಗಾರ, ಇಲಾಹಿ ಜಮಖಂಡಿ, ಶಿಕ್ಷಕರಾದ ರಾಚಯ್ಯ ಹಿರೇಮಠ, ರೇಷ್ಮಾ ಲಿಗಾಡೆ, ರಾಜೇಶ್ವರಿ ಹಿರೇಮಠ, ಸೂಕ್ತ ಕೋಳಿ, ಮಂಜುಳಾ ಗುಂಡೆ, ಮಾನಸ, ರಾಜಪ್ಪ, ಪ್ರಸಾದ ಬುರಕಲೆ, ಸರೋಜಿನಿ ಕುಳ್ಳೊಳ್ಳಿ ಇತರರಿದ್ದರು, ಅನುಷ್ಕಾ ಬಡಿಗೇರ ಮತ್ತು ಸಂಗಡಿಗರು ಪ್ರಾರ್ಥಿಸಿ, ವರ್ಷಾ ಪಾಟೀಲ ಮತ್ತು ಪ್ರೇಮಾ ಪಾಟೀಲ ನಿರೂಪಿಸಿದರು. 


ಸುದ್ದಿ ಓದಿ