ಗುಡ್ಡಾಪುರ ದಾನಮ್ಮ ದೇವಿ ಕಾರ್ತಿಕ ಉತ್ಸವಕ್ಕೆ ಭಕ್ತರಿಂದ ಪಾದಯಾತ್ರೆ
ಮಹಾಲಿಂಗಪುರ 09: ಡಿಸೆಂಬರ್ 12ರಂದು ಜರುಗುವ ಗುಡ್ಡಾಪುರ ದಾನಮ್ಮ ದೇವಿ ಕಾರ್ತಿಕ ಉತ್ಸವಕ್ಕೆ ಪಟ್ಟಣದಿಂದ ನೂರಾರು ಸದ್ಭಕ್ತರು ಶನಿವಾರ ಪಾದಯಾತ್ರೆ ಕೈಗೊಂಡರು. ಈ ಪಾದಯಾತ್ರೆಗೆ ಪುರಸಭೆ ಸದಸ್ಯ ಯಲ್ಲನ್ನಗೌಡ ಪಾಟೀಲ್ ಚಾಲನೆ ನೀಡಿದರು. ಆಹಾರ ಪದಾರ್ಥಗಳ ಹೊತ್ತು ಸಾಗುವ ವಾಹನಕ್ಕೆ ಮಹಾಲಿಂಗೇಶ್ವರ ಮಠದ ಸ್ವಾಮೀಜಿ ಪೂಜೆ ನೆರವೇರಿಸಿದರು.
ಪಾದಯಾತ್ರಾ ಮಾರ್ಗ: ಮಹಾಲಿಂಗಪುರ ಶ್ರೀ ಗುರು ಮಹಾಲಿಂಗೇಶ್ವರ ದೇವಸ್ಥಾನದಿಂದ ಕೃಷ್ಣಾ ನದಿ (ರಬಕವಿ) ಮಾರ್ಗವಾಗಿ ಮಹಿಷವಾಡಗಿ, ಸವದಿ, ಬಹವಾಡ, ಕೊಕಟನೂರ, ಐಗಳಿ (ಊಟ ಮತ್ತು ವಸತಿ), ಕುರುದಡ್ಡಿ, ಕಕಮರಿ, ಕೊಟ್ಟಲಗಿ, ಮುಚ್ಚಂಡಿ (ವಸತಿ), ಧರೆಕೊಣ್ಣೂರ, ಸೊರಡಿ ಮೂಲಕವಾಗಿ ನೇರ ಸುಕ್ಷೇತ್ರ ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನಕ್ಕೆ. ವಿಸೂ : ಪಾದಯಾತ್ರೆಗಳು ಗುಡ್ಡಾಪುರಕ್ಕೆ ತೆರಳಿದ ನಂತರ ಮಹಾಲಿಂಗಪುರದ ಛತ್ರದಲ್ಲಿಯೇ ಉಳಿದುಕೊಳ್ಳಲು ಸಮಿತಿಯವರು ಈ ಮೂಲಕ ಕೋರಿದ್ದಾರೆ. ಮಂಡಳಿ ಕಾರ್ಯಕ್ರಮ: ಎರಡೂ ದಿವಸ ಮುಂಜಾನೆ ಉಪಹಾರ ವ್ಯವಸ್ಥೆ ಮತ್ತು ಮಂಗಳವಾರ ದಿವಸ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ತದ ನಂತರ ಮಹಾ ಪ್ರಸಾದ. ಎಲ್ಲ ಪಾದಯಾತ್ರಿಕರು ಛತ್ರದಲ್ಲಿ ವೇಳೆಗೆ ಸರಿಯಾಗಿ ಹಾಜರಿರಬೇಕು.
ಪಾದಯಾತ್ರಾರ್ಥಿಗಳನ್ನು ಬೀಳ್ಕೊಡಲು ಆಗಮಿಸಿದ ಪುರ ಪ್ರಮುಖರಾದ ಯಲ್ಲನ್ನಗೌಡ ಪಾಟೀಲ್, ಅಶೋಕ ಅಂಗಡಿ, ಲಕ್ಕಪ್ಪ ಚಮಕೇರಿ, ಕಲ್ಲಪ್ಪ ಚಿಂಚಲಿ, ಬಸವರಾಜ ಪಾಶ್ಚಾಪೂರ, ಪ್ರಕಾಶ ಅರಳಿಕಟ್ಟಿ, ಸಿದ್ದು ಬೆನ್ನೂರ, ಕಲ್ಲಪ್ಪ ಹೆಬ್ಬಾಳ, ಪಟ್ಟೆದ, ಮಲ್ಲಪ್ಪ ದಲಾಲ, ಶಂಕರ ಸಾಲಮನಿ ಇನ್ನೂ ಮುಂತಾದವರಿದ್ದರು. ಹೆಚ್ಚಿನ ಮಾಹಿತಿಗಾಗಿ ಸಂಜು ಅಂಗಡಿ - 9980030857, ಶೇಖರ ಬಂಡಿ - 9591456156, ಅಶೋಕ ನುಚ್ಚಿ - 9535618078, ಹೇಮಂತ ನಾಶಿ 9008311523, ಉದಯ ಮುಂಡಗನೂರ - 9740879301, ರಮೇಶ ಹುಲಕುಂದ -9900971171 ಸಂಪರ್ಕಿಸಲು ಕೋರಲಾಗಿದೆ.