ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ನಿರ್ದೇಶಕರಾಗಿ ದೇವಿಪ್ರಸಾದ್ ಆಯ್ಕೆ
ಹಗರಿಬೊಮ್ಮನಹಳ್ಳಿ 14: ಪಿಕಾರ್ಡ್ ಬ್ಯಾಂಕ್ ತಂಬ್ರಹಳ್ಳಿ ಕ್ಷೇತ್ರದ ನಿರ್ದೇಶಕರಾಗಿ ತಂಬ್ರಹಳ್ಳಿಯ ಗುತ್ತಿಗೆದಾರರಾದ ಬಿ. ದೇವಿಪ್ರಸಾದ್ ನೂತನವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ತಾಲೂಕಿನ ಕಿತ್ನೂರು ಗ್ರಾಮದ ನಿರ್ದೇಶಕ ಮಹೇಂದ್ರ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವುಗೊಂಡ ಸ್ಥಾನಕ್ಕೆ, ಆಡಳಿತ ಮಂಡಳಿಯಲ್ಲಿ ಕೋಅಪ್ ಮೂಲಕ ಆಯ್ಕೆ ಮಾಡಲಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಹಗರಿಬೊಮ್ಮನಹಳ್ಳಿಯ ಪಿಕಾರ್ಡ್ ಬ್ಯಾಂಕ್‌ನ ಅಧ್ಯಕ್ಷ ಬಿ.ಗಂಗಾಧರ, ಜಿ.ಪಂ.ಮಾಜಿ ಸದಸ್ಯ ಅಕ್ಕಿತೋಟೇಶ್, ಹೆಗ್ಡಾಳ್ ರಾಮಣ್ಣ, ರೈತರ ಬ್ಯಾಂಕ್ ಮಾಜಿ ಅಧ್ಯಕ್ಷ ಹುಡೇದ್ ಗುರುಬಸವರಾಜ, ಪಿಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪಟ್ಟಣಶೆಟ್ಟಿ ಸುರೇಶ್, ದೇವೇಂದ್ರ್ಪ, ಪಿ.ಕೊಟ್ರೇಶ, ಪತ್ರೇಶ್ ಹಿರೇಮಠ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಮೈಲಾರ ಶಿವಕುಮಾರ್‌ಗೌಡ, ಗೌರಜ್ಜನವರ ಗೀರೀಶ್, ಪರ್ವತಪ್ಪ, ಗದ್ದಿಕೇರಿ ಸುರೇಶ, ಕೊಟಿಗಿ ಪ್ರಸನ್ನ, ಶಿವಕುಮಾರಸ್ವಾಮಿ, ಸುರೇಶನಾಯ್ಕ ಇನ್ನಿತರರಿದ್ದರು.