ಸಾರ್ವಜನಿಕ ಸುಗಮ ಸಂಚಾರಕ್ಕೆ ರಸ್ತೆಗಳ ಅಭಿವೃದ್ಧಿ-ಪ್ರಕಾಶ ಹುಕ್ಕೇರಿ
ಶಿರಗಾಂವಾಡಿ-ಭೋಜ, ಪಾಂಗೇರಿ-ಮನೋಚವಾಡಿ ರಸ್ತೆಗೆ ಚಾಲನೆ
ಚಿಕ್ಕೋಡಿ: ಸಾರ್ವಜನಿಕರ ಸುಗಮ ಸಂಚಾರಕ್ಕೆ ಚಿಕ್ಕೋಡಿ-ಸದಲಗಾ ವಿಧಾನಸಭೆ ಮತಕ್ಷೇತ್ರದಲ್ಲಿ ಹೈಟಿಕ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು.
ಚಿಕ್ಕೋಡಿ-ಸದಲಗಾ ವಿಧಾನಸಭೆ ಮತಕ್ಷೇತ್ರದಲ್ಲಿ ಬರುವ ಚಿಕ್ಕೋಡಿ ತಾಲೂಕಿನ ಶಿರಗಾಂವವಾಡಿ-ಭೋಜ ಮತ್ತು ಪಾಂಗೇರಿ-ಮನೋಚವಾಡಿ ರಸ್ತೆ ಮಂಜೂರಾದ 2 ಕೋಟಿ ರೂ ಕಾಮಗಾರಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಶಾಸಕ ಗಣೇಶ ಹುಕ್ಕೇರಿ ಸತತ ಪ್ರಯತ್ನ ಮಾಡುತ್ತಿದ್ದು, ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕೆಂದು ಎರಡು ಗ್ರಾಮಗಳ ಗ್ರಾಮಸ್ಥರು ಮನವಿ ಮೇರೆಗೆ ಶಾಸಕ ಗಣೇಶ ಹುಕ್ಕೇರಿ ಅವರು ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಮಂಜೂರು ಮಾಡಿ ನಾಗರಿಕರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು.
ತಾಲೂಕಿನ ಶಿರಗಾಂವಾಡಿ ಗ್ರಾಮದಿಂದ ಭೋಜ ಕ್ರಾಸ ವರೆಗೆ 2.40 ಕಿ.ಮೀ ರಸ್ತೆ ಕಾಮಗಾರಿಗೆ 1 ಕೋಟಿ ರೂ ಅನುದಾನ ಮಂಜೂರಾಗಿದೆ. ತಾಲೂಕಿನ ಪಾಂಗೇರಿ-ಎ ಗ್ರಾಮದಿಂದ ಮನೋಚವಾಡಿ ಖಡಕಲಾಟ ರಸ್ತೆಗೆ ಕೂಡುವ ರಸ್ತೆ ಕಾಮಗಾರಿಗೆ 1 ಕೋಟಿ ರೂ ಅನುದಾನ ಮಂಜೂರು ಆಗಿದೆ. ಈ ಕಾಮಗಾರಿ ನಿರ್ವಹಿಸಲು ಕೆಆರ್‌ಐಡಿಎಲ್ ವಿಭಾಗಕ್ಕೆ ಕೊಡಲಾಗಿದೆ. ಗುಣಮಟ್ಟ ರಸ್ತೆ ಕಾಮಗಾರಿ ಕೈಗೊಂಡು ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಈಗಾಗಲೇ ಬೇಸಿಗೆ ಆರಂಭವಾಗಿದೆ. ಕ್ಷೇತ್ರದಲ್ಲಿ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಆಗದಂತೆ ಸೂಕ್ತ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕ್ಷೇತ್ರದಲ್ಲಿ ರಸ್ತೆ, ಚರಂಡಿ, ಶಾಲಾ ಕೊಠಡಿ, ಸುಸಜ್ಜಿತ ಮೈದಾನ ನಿರ್ಮಾಣ ಹೀಗೆ ಗ್ರಾಮೀಣ ಪ್ರದೇಶದ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಣ್ಣಾ ಪಾಟೀಲ, ಸುಂದರ ಪಾಟೀಲ, ವಿಪುಲ ಪಾಟೀಲ, ವಿನೋಧ ಕಾಗೆ, ರಾವಸಾಹೇಬ ಮಗದುಮ್ಮ, ಕಲಗೌಡ ಪಾಟೀಲ, ವಿಪುಲ ಗುರವ, ಮಹಾದೇವ ಶಿತೋಳೆ, ಮಾಣಿಕ ಪಾಟೀಲ, ವಿಜಯ ಪಾಟೀಲ, ಶಶಿಕಾಂತ ನೇಸರೆ, ಸೂರಜ ಕುಂಬಾರ, ಕೆಆರ್‌ಐಡಿಎಲ್ ಸಹಾಯಕ ಅಭಿಯಂತರಾದ ರೇಣುಕಾಜ್ಯೋತಿ ನಾರಾಯಣಕರ ಮುಂತಾದವರು ಇದ್ದರು.