ಮಹಲಿಂಗಪುರ

ಪಾರದರ್ಶಕತೆಯಿಂದ ಮಾತ್ರ ಆರ್ಥಿಕ ಸಂಸ್ಥೆಗಳ ಅಭಿವೃದ್ಧಿ : ಅಮರೇಶ್ವರ ಸ್ವಾಮಿಜಿ

ಪಾರದರ್ಶಕತೆಯಿಂದ ಮಾತ್ರ ಆರ್ಥಿಕ ಸಂಸ್ಥೆಗಳ ಅಭಿವೃದ್ಧಿ : ಅಮರೇಶ್ವರ ಸ್ವಾಮಿಜಿ

ಕನಕದಾಸ ಸೊಸೈಟಿ ನೂತನ ಕಟ್ಟಡ ಉದ್ಘಾಟನೆ

ಮಹಾಲಿಂಗಪುರ: ಪಾರದರ್ಶಕತೆ ಮತ್ತು ನಿಸ್ವಾರ್ಥ ಸೇವೆಯಿಂದ ಮಾತ್ರ ಸಹಕಾರಿ ವಲಯದಲ್ಲಿನ ಸೊಸೈಟಿ, ಬ್ಯಾಂಕುಗಳು ಸೇರಿದಂತೆ ಆಥರ್ಿಕ ಸಂಸ್ಥೆಗಳ ಅಭಿವೃದ್ದಿ ಸಾಧ್ಯ ಎಂದು ಕವಲಗುಡ್ಡ ಸಿದ್ದಗಿರಿ ಸಿದ್ದಾಶ್ರಮದ ಸಿದ್ದಯೋಗಿ ಅಮರೇಶ್ವರ ಮಹಾಸ್ವಾಮಿಜಿ ಹೇಳಿದರು.

ಸೋಮವಾರ ಜರುಗಿದ ಕನಕದಾಸ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು ಕಳೆದ 20 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಿ ಇಂದು ಸ್ವಂತ ಕಟ್ಟಡ ಹೊಂದಿದ್ದು ಸಂತೋಷದ ಸಂಗತಿ. ಆಡಳಿತ ಮಂಡಳಿ ಮತ್ತು ಸಿಬ್ಬಂದಿಯು ಪಾರದರ್ಶಕತೆ ವ್ಯವಹಾರದ ಮೂಲಕ ಸಂಸ್ಥೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದೇ ಸಮಾಜದ ಅಭಿವೃದ್ದಿಗಾಗಿ ಬೆಳೆಸಬೇಕು. ಸಾಲ ಪಡೆದ ಗ್ರಾಹಕರು ಸಕಾಲಕ್ಕೆ ಮರುಪಾವತಿ ಮಾಡಿದಾಗ ಮಾತ್ರ ಸೊಸೈಟಿಯ ಅಭಿವೃದ್ದಿ ಸಾಧ್ಯ. ನೂತನ ಕಟ್ಟಡ ಹೊಂದಿದ ಕನಕದಾಸ ಸೊಸೈಟಿಯು ಭವಿಷ್ಯದಲ್ಲಿ ಉತ್ತರೋತ್ತರವಾಗಿ ಬೆಳೆದು ಬೇರೆ ಊರುಗಳಲ್ಲಿಯೂ ಇದರ ಶಾಖೆಗಳು ಪ್ರಾರಂಭವಾಗಲಿ ಎಂದು ಶುಭ ಹಾರೈಸಿದರು.

ಮುಖ್ಯಕಾರ್ಯನಿರ್ವಹಕರ ಕಚೇರಿ ಉದ್ಘಾಟಿಸಿದ ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ ಗ್ರಾಹಕರ ಹಿತರಕ್ಷಣೆ ಆಥರ್ಿಕ ಸಂಸ್ಥೆಗಳ ಮೊದಲ ಆದ್ಯತೆಯಾಗಿರಬೇಕು. ಕಳೆದ 20 ವರ್ಷಗಳಿಂದ ಸೊಸೈಟಿಯು ಅಭಿವೃದ್ದಿ ಪಥದಲ್ಲಿ ಸಾಗಿದ್ದು ಆಡಳಿತ ಮಂಡಳಿಯ ಮತ್ತು ಸಿಬ್ಬಂದಿಯ ದಕ್ಷತೆ ಮತ್ತು ವಿಶ್ವಾಸರ್ಹತೆಗೆ ಸಾಕ್ಷಿಯಾಗಿದೆ ಎಂದರು.

ಕೆಎಂಎಎಫ್ ಮಾಜಿ ಅಧ್ಯಕ್ಷ ರಂಗನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರೂರ ಕನಕ ಬ್ರಹ್ಮವಿದ್ಯಾಶ್ರಮದ ಚಿನ್ಮಯಾನಂದ ಮಹಾಸ್ವಾಮಿಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. 

ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರಮಹಾಸ್ವಾಮಿಜಿ ಕನಕದಾಸ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿದರು.ಬಿಡಿಸಿಸಿ ಬ್ಯಾಂಕಿನ ಸದಸ್ಯ ಪ್ರಕಾಶ ತಪಶೆಟ್ಟಿ ಅವರು ಸಹಕಾರ ಧ್ವಜಾರೋಹನ ನೇರವೇರಿಸಿದರು.

ಮೆಟಗುಡ್ಡ ಲಕ್ಕಪ್ಪ ಮಹಾರಾಜರು, ಆಲಬಾಳದ ಅಮಸಿದ್ದ ಮಹಾರಾಜರು ಸಾನಿಧ್ಯವಹಿಸಿದ್ದರು. ಸೊಸೈಟಿ ಅಧ್ಯಕ್ಷ ಮಹಾಲಿಂಗಪ್ಪ ಜಕ್ಕನ್ನವರ ಅಧ್ಯಕ್ಷತೆವಹಿಸಿದ್ದರು. 

ಮಹಾಂತೇಶ ಹಿಟ್ಟಿನಮಠ, ಬಸನಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಹಣಮಂತ ಕೊಣ್ಣೂರ, ಭೀಮಪ್ಪ ಸಂಶಿ, ಶ್ರೀಶೈಲ ಕಳ್ಯಾಗೋಳ, ವೈ.ವೈ.ಕೊಕ್ಕನವರ, ಶಿವಗೊಂಡ ಸನದಿ, ರವಿ ಜವಳಗಿ, ಭೀಮಪ್ಪ ತಿಮ್ಮಾಪೂರ, ಮಹಾಲಿಂಗಪ್ಪ ಸನದಿ, ಮಲ್ಲಪ್ಪ ಮಳಲಿ, ಮಲ್ಲಪ್ಪ ಸಿಂಗಾಡಿ, ವಿಠ್ಠಲ ಬನಾಜ, ರೇಣುಕಾ ಹಾದಿಮನಿ, ಸುರೇಖಾ ಲೋಕುರಿ, ಜಯಶ್ರೀ ಸನ್ನಟ್ಟಿ, ಗಣಪತಿ ಮಡ್ಡೆನ್ನವರ, ಮೌನೇಶ ಬಡಿಗೇರ, ಪ್ರಭು ಹುಬ್ಬಳ್ಳಿ, ಮಹಾಲಿಂಗ ಹುಬ್ಬಳ್ಳಿ, ಚಂದ್ರಶೇಖರ ಸಂಶಿ, ಶಂಕರ ಮೇಟಿ ಇದ್ದರು. 

ಚಂದ್ರಶೇಖರ ಮೋರೆ ಸ್ವಾಗತಿಸಿದರು. ಯಶವಂತ ಕೊಕ್ಕನವರ ನಿರೂಪಿಸಿದರು. ಪಿ.ಕೆ.ಹುಬ್ಬಳ್ಳಿ ವಂದಿಸಿದರು.


ಸುದ್ದಿ ಓದಿ