ಕಳ್ಳಕಾಕರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಬೆಳಗಾವಿ ಪೊಲೀಸ ಕುಟುಂಬದ ಸದಸ್ಯೆ, ಪತ್ತೆದಾರಿ ಪೂಜಾ ಇನ್ನಿಲ್ಲ
ಬೆಳಗಾವಿ : ಕಳ್ಳಕಾಕರಿಗೆ ಸಿಂಹ ಸ್ವಲ್ಪವಾಗಿ ದ್ದ ಬೆಳಗಾವಿ ಜಿಲ್ಲಾ ಪೊಲೀಸ ಕುಟುಂಬದ ಸದಸ್ಯೆಯಾಗಿ ಕಾರ್ಯ ಮಾಡುತ್ತಿದ್ದ ಶ್ವಾನ ಪೂಜಾ ಇಂದು ವಿಧಿವಶವಾಗಿದೆ.
ಬೆಳಗಾವಿಯ ಕೆ-9 ಘಟಕದ ಸದಸ್ಯೆ ಪೂಜಾ ಇಂದು ನಿಧನರಾಗಿದ್ದು, ಅಪರಾಧ ಪತ್ತೆಯಲ್ಲಿ ತರಬೇತಿ ಪಡೆದಿರುವ ಶ್ವಾನ ಪೂಜಾ ಸುಮಾರು 178 ಪ್ರಕರಣಗಳಲ್ಲಿ ಭಾಗವಹಿಸಿತ್ತು.
ಎರಡು ಬಾರಿ ರೇಂಜ್ ಲೆವೆಲ್ ಡ್ಯೂಟಿ ಮೀಟ್‌ನಲ್ಲಿ ಪ್ರಥಮ ಸ್ಥಾನವನ್ನೂ ಪಡೆದಿತ್ತು. ಈ ಜಿಲ್ಲೆಗೆ ಅವಳ ಸೇವೆಯನ್ನು ಬಹಳ ಅನನ್ಯ ಹಾಗೂ ಪ್ರಮುಖವಾಗಿತ್ತು.
ಪೊಲೀಸ ಕುಟುಂಬದ ಈ ಶ್ವಾನ ಪೂಜಾ ಅವಳ ನಿಧನಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ ಕುಟುಂಬಕ್ಕೆ ದುಃಖ ಉಂಟು ಮಾಡಿದೆ.