ಮಹಲಿಂಗಪುರ

ತಿಪ್ಪೆಗುಂಡಿಯಲ್ಲಿ ಮೃತ ಅವಸ್ಥೆಯಲ್ಲಿ ನವಜಾತ ಶಿಶು ಪತ್ತೆ

ತಿಪ್ಪೆಗುಂಡಿಯಲ್ಲಿ ಮೃತ ಅವಸ್ಥೆಯಲ್ಲಿ ನವಜಾತ ಶಿಶು ಪತ್ತೆ


ಮಹಾಲಿಂಗಪುರ : ರಬಕವಿ- ಬನಹಟ್ಟಿ ತಾಲೂಕಿನ ಸಮೀಪದ ಕೆಸರಗೊಪ್ಪ ಗ್ರಾಮದ ತೋಟವೊಂದರಲ್ಲಿ ಮೃತ ಅವಸ್ಥೆಯಲ್ಲಿ ನವಜಾತ ಶಿಶು ದೊರಕಿದ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಫೆಬ್ರುವರಿ 26 ರಂದು ಮಧ್ಯಾಹ್ನ ಗ್ರಾಮದ ಶ್ರೀಶೈಲಪ್ಪ. ಪರ​‍್ಪ. ಚಿನಗುಂಡಿ ಎಂಬುವರ ತೋಟದ ದಂಡೆಯಲ್ಲಿರುವ ತಿಪ್ಪೆ ಗುಂಡಿಯಲ್ಲಿ ದೊರೆತಿರುವ ಒಂದು ದಿವಸದ ಸುರದ್ರೂಪಿ ಗಂಡು ಹಸುಗೂಸು ಇದಾಗಿದೆ. ಸ್ಥಳೀಯ ಮಹಿಳೆಯರಾದಿಯಾಗಿ ಎಲ್ಲರೂ ನಡೆದಿರುವ ಕೃತ್ಯವನ್ನು ಖಂಡಿಸುತ್ತಾ ಮಮ್ಮಲ ಮರುಗಿದ್ದಾರೆ.  

ತಮ್ಮ ಅನೈತಿಕ ವ್ಯವಹಾರವನ್ನು ಬಚ್ಚಿಡುವ ಸಲುವಾಗಿ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ರಮೇಶ. ಶಿಖರೆಪ್ಪ. ಉಳ್ಳಾಗಡ್ಡಿ ನೀಡಿದ ದೂರಿನ ಅನ್ವಯ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಶೋಧ ನಡೆಸುತ್ತಿದ್ದಾರೆ. 


ಸುದ್ದಿ ಓದಿ