ದೇಶಭಕ್ತ ರಾಯಣ್ಣನ ಪ್ರತಿಮೆಗೆ ಮುಸುಕಿನಿಂದ ಮುಕ್ತಿ ಯಾವಾಗ : ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕೆಗೆ ಅವಮಾನ

ದೇಶಭಕ್ತ ರಾಯಣ್ಣನ ಪ್ರತಿಮೆಗೆ ಮುಸುಕಿನಿಂದ ಮುಕ್ತಿ ಯಾವಾಗ : ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕೆಗೆ ಅವಮಾನ

ಸಂಕೇಶ್ವರ : ಪಟ್ಟಣದ ಪ್ರಮುಖ ಹಳೆ ಪಿಬಿ ರಸ್ತೆಯಲ್ಲಿ ರಾಷ್ಟ್ರ ಭಕ್ತ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಪ್ರತಿಷ್ಟಾಪನೆ ಮಾಡಲು ನಿಯೋಜಿಸಲಾಗಿದ್ದು, ಇಲ್ಲಿ ಕಳೆದ ಕೆಲವು ತಿಂಗಳುಗಳಿಂದ ರಾಯಣ್ಣನ ಪ್ರತಿಮೆಗೆ ಪ್ಲ್ಯಾಸ್ಟಿಕ್ ನಿಂದ ಮುಸುಕು ಹಾಕಿ ನಡುರಸ್ತೆಯಲ್ಲಿ ನಿಲ್ಲಿಸಲಾಗಿರುವದು ರಾಷ್ಟ್ರ ಸಂತನಿಗೆ ಅವಮಾನ ಮಾಡಲಾಗಿದೆ ಎನ್ನುವ ಮಾತು ಈಗ ಸಾರ್ವಜನಿಕರ ಚರ್ಚೆಗೆ ಗ್ರಾಸ್ ವಾಗಿದೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಮುಖಂಡರ ವಿರುದ್ದ ಕೆಲವರು ಹಿಡಿಶಾಪ ಹಾಕುಂತಾಗಿದೆ.

     ಸಂಕೇಶ್ವರ ಪಟ್ಟಣದ ಹಳೆ ಪಿಬಿ ಪ್ರಮುಖ ರಸ್ತೆಯಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡುವ ಹಿನ್ನೆಲೆಯಲ್ಲಿ ಪ್ರತಿಮೆಯನ್ನು ತಂದು ನಿಲ್ಲಿಸಲಾಗಿದೆ. ಆದರೆ ಈ ದೇಶಭಕ್ತನ ಪ್ರತಿಮೆಯನ್ನು ಕಳೆದ ಕೆಲವು ತಿಂಗಳುಗಳಿಂದ ಪ್ಲ್ಯಾಸ್ಟಿಕ್ ಕಾಗದದ ಮೂಲಕ ಮುಚ್ವಿ ಹಾಕಲಾಗಿದೆ.

    ಈ ಪ್ಲಾಸ್ಟಿಕ್ ಮುಚ್ವಿ ಹಲವಾರು ತಿಂಗಳುಗಳು ಕಳೆದರೂ ಈ ಮುಸುಕಿನಿಂದ ದೇಶಭಕ್ತ ರಾಯಣ್ಣನಿಗೆ ಮುಕ್ತಿ ನೀಡದೆ, ಆ ಪ್ರತಿಮೆಯನ್ನು ಲೋಕಾರ್ಪಣೆ ಮಾಡದೆ ರಾಷ್ಟ್ರ ಸಂತನಿಗೆ ಅವಮಾನ ಮಾಡಲಾಗುತ್ತಿದೆ ಎನ್ನುವ ಮಾತು ಪಟ್ಟಣದ ನಾಗರಿಕರಿಂದ ಕೇಳಿ ಬರುತ್ತಿದೆ. 

   ಅಲ್ಲದೆ ಈ ದೇಶ ಭಕ್ತ ಹಾಗೂ ಸ್ವಾತಂತ್ರ್ಯದ ಬೆಳ್ಳಿಚುಕ್ಕೆಯಾಗಿರುವ ರಾಯಣ್ಣನನ್ನು ಒಂದು ಜಾತಿ ಸಿಮಿತ ಮಾಡುವಂತೆ ಈ ಪ್ರತಿಮೆ ಪ್ರತಿಷ್ಠಾಪನೆ ಮಾಡುತ್ತಿದ್ದು, ಈ ವಿಷಯವು ಕನ್ನಡ ಹೋರಾಟಗಾರರಲ್ಲಿ ಆಕ್ರೋಶವನ್ನು ಉಂಟು ಮಾಡಿದೆ.

   ಈ ದೇಶಭಕ್ತನ ಪ್ರತಿಮೆಯು ಮಳೆ, ಧೂಳು ತಿನ್ನುತ್ತ ಹಲವಾರು ತಿಂಗಳುಗಳಿಂದ ಪ್ಲ್ಯಾಸ್ಟಿಕ್ ಮುಸುಕಿನಲ್ಲಿ ಇರಿಸಲಾಗಿದ್ದರು ಈ ಪ್ರತಿಮೆ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳದೆ ಇರುವದು ದುರಂತ ಎನ್ನಲಾಗುತ್ತಿದೆ.

ಸುದ್ದಿ ಓದಿ