ಕಿತ್ತೂರು ಚನ್ನಮ್ಮ, ರಾಯಣ್ಣ, ಮಲ್ಲಮ್ಮನ ವಿರುದ್ಧ ಅವಹೇಳನಕಾರಿ ಹೇಳಿಕೆ : ನಾಡದ್ರೋಹಿಯ ವಿರುದ್ದ ಕನ್ನಡಿಗರು ಕೆಂಡಾಮಂಡಲ
ಬೆಳಗಾವಿ : ಕನ್ನಡಿಗರ ಆರಾಧ್ಯ ದೈವರಾಗಿರುವ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕೆಯಾಗಿರುವ ವೀರರಾಣಿ ಕಿತ್ತೂರ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಹಾಗೂ ಬೆಳವಡಿಯ ಮಲ್ಲಮ್ಮನ ವಿರುದ್ದ ಅಪಹಾಸ್ಯ ಮಾಡಿ ಅವಹೇಳನಕಾರಿ ಹೇಳಿಕೆ ನೀಡಿರುವ ನಾಡದ್ರೋಹಿ ವಿರುದ್ದ ಕನ್ನಡ ಸಂಘಟನೆ ಗಳು ಕೆಂಡಾಮಂಡಲವಾಗಿದ್ದು ಆತನ ವಿರುದ್ದ ಕ್ರಮಕ್ಕೆ ಒತ್ತಾಯ ಮಾಡಿವೆ.
ಕಿತ್ತೂರು ಚಮ್ಮಮ್ಮ ಮತ್ತು ಸಂಗೊಳ್ಳಿ ರಾಯಣ್ಣ, ಬೆಳವಡಿಯ ಮಲ್ಲಮ್ಮ ಎಂದಾಕ್ಷಣ ನಮಗೆ ನೆನಪಾಗುವದು ಸ್ವಾತಂತ್ರ್ಯ ಸಂಗ್ರಾಮ. ಇಂತಹ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ ರ ವಿರುದ್ದ ಎದೆತಟ್ಟಿ, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿರುವ ಮಹಾ ಪುರುಷರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ ಎಂದು ಹೇಳುವ ಮೂಲಕ ಈ ಮೂವರು ದೇಶ ಭಕ್ತರಿಗೆ ಅವಮಾನ ಮಾಡು ರೀತಿ ಹೇಳಿಕೆ ನೀಡಿರುವ ಗೌರಾನ ಗಿಂಜಿ ಎಂವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸರಕಾರ ಮತ್ತು ಪೊಲೀಸ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ತಾನೊಬ್ಬ ಹಿಂದು ಸಂಘಟನೆಯ ಮುಖಂಡ ಎಂದು ಹೇಳಿಕೊಂಡು ತಿರುಗುವ ಗೌರಾನಾ ಗಿಂಜಿ ಎನ್ನುವ ವ್ಯಕ್ತಿ ಪದೇ ಪದೇ ಇಂತಹ ಮಾಹಾನ ಪುರುಷರ ವಿರುದ್ದ ಅವಮಾನಕಾರಕ ಹೇಳಿಕೆಯನ್ನು ನೀಡುತ್ತಿದ್ದಾನೆ. ಕನ್ನಡ ಮತ್ತು ಮರಾಠಿ ಭಾಸಿಕರ ನಡುವೆ ವಿಷ ಬೀಜ ಬಿತ್ತುವ ಕಾರ್ಯ ಈತ ಮಾಡುತ್ತಿದ್ದಾನೆ.
ಸರಕಾರ ಮತ್ತು ಪೊಲೀಸ ಇಲಾಖೆ ಈತನ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಈತನನ್ನು ಗುಂಡಾ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡಬೇಕು. ಆತ ಬೆಳಗಾವಿ ನಗರದಲ್ಲಿ ಇರುವದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾನೆ.
ಒಂದು ವೇಳೆ ಸರಕಾರ ಅಥವಾ ಇಲಾಖೆ ಈತನ ವಿರುದ್ದ ಕ್ರಮಕೈಗೊಳ್ಳದೆ ಇದ್ದಲ್ಲಿ ರಕ್ಷಣಾ ವೇದಿಕೆ ಅವನಿಗೆ ತಕ್ಕ ಪಾಠ ಕಲಿಸಲು ಸಿದ್ದವಾಗಿದೆ ಎಂದು ಕರ್ನಾಟಕ ರಕ್ಷಣಾ ವೃದಿಕೆ ಅಧ್ಯಕ್ಷ ದೀಪಕ ಗುಡಗನಟ್ಟಿ ತಿಳಿಸಿದ್ದಾರೆ.