ಖರ್ಗೆ, ಖಂಡ್ರೆ ವಿರುದ್ದ ಅವಹೇಳನಕಾರಿ ಹೇಳಿಕೆ : ಶಾಸಕ ಅರಗ ಜ್ಞಾನೇಂದ್ರ ವಿರುದ್ದ ದಲಿತರ, ಕಾಂಗ್ರೆಸಿಗರ ಪ್ರತಿಭಟನೆ, ಭಾವಚಿತ್ರಕ್ಕೆ ಬೆಂಕಿ
ಸಂಕೇಶ್ವರ : ಎಐಸಿಸಿ ಅಧ್ಯಕ್ಷ ಹಾಗೂ ಸಂಸತನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಈಶ್ಬರ ಖಂಡ್ರೆ ಅವರ ಚರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಅರಗ್ ಜ್ಞಾನೇಂದ್ರ ಅವರ ವಿರುದ್ದ ದಲಿತ ಸಂಘಟನೆ ಮತ್ತು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸುವ ಮೂಲಕ ಜ್ಞಾನೇಂದ್ರ ಭಾವಚಿತ್ರಕ್ಕೆ ಬೆಂಕಿ ಹಚ್ವಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಮುಂಜಾನೆ ನಗರದ ಶಿವಾಜಿ ವೃತ್ತದಲ್ಲಿ ಜಮಾವಣೆಗೊಂಡ ದಲಿತ ಸಂಘಟನೆ ಪದಾಧಿಕಾರಿಗಳು ಮತ್ತು ಕೆಲ ಕಾಂಗ್ರೆಸ್ ಪದಾಧಿಕಾರಿಗಳು ಸಂಕೇಶ್ವರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಂತೋಷ ಮುಡಸಿ ಅವರ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರಲ್ಲದೆ ಶಾಸಕ ಅರಗ್ ಜ್ಞಾನೇಂದ್ರ ವಿರುದ್ದ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ದಿಲೀಪ ಹೊಸಮನಿ, ಅವಿನಾಶ ನಲವಡೆ, ಮಹೇಶ ಹಟ್ಟಿಹೊಳಿ, ಬಸವರಾಜ ಕೋಳಿ, ಚಿದಾನಂದ ಕರ್ದನ್ನವರ, ವಿನಾಯಕ ಕೋಳಿ, ಕುಮಾರ ಕಬ್ಬೂರಿ, ಮುಭಾರಕ್ ಕಮತೆ, ರಿಯಾಜ್ ಫನಿಬಂಧ, ಪ್ರವೀಣ ನೇಸರಿ, ಮಹಾದೇವ ಕೇಸರಕರ್, ಸುಭಾಶ ಕಾಸಾರ, ಗಣೇಶ ಪಾಟೀಲ, ಶಾಂತು, ರಾಹುಲ್ ಜಯಕರ್, ಶಂಕರ ಭೋಸಲೆ ಸೇರಿದಂತೆ ಅನೇಕರು ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.