ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ನಿಪ್ಪಾಣಿಯ ಉಪ ತಹಶಿಲ್ದಾರ, ಗ್ರಾಮ‌ಲೆಕ್ಕಾಧಿಕಾರಿ : 5 ಸಾವಿರ ಲಂಚ ಪಡೆಯುವಾಗ ದಾಳಿ

ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ನಿಪ್ಪಾಣಿಯ ಉಪ ತಹಶಿಲ್ದಾರ, ಗ್ರಾಮ‌ಲೆಕ್ಕಾಧಿಕಾರಿ : 5 ಸಾವಿರ ಲಂಚ ಪಡೆಯುವಾಗ ದಾಳಿ

ಬೆಳಗಾವಿ : 5000 ಸಾವಿರ ಲಂಚದ ಹಣ ಪಡೆಯುವಾಗ ಉಪ ತಹಶಿಲ್ದಾರ ಹಾಗೂ ವಿಲೇಜ್ ಅಕೌಂಟೆಂಟ್ ಲೋಕಾಯುಕ್ತ ಅಧಿಕಾರಿಗಳ ಬಲೆ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯ ನಿಪ್ಪಾಣಿಯಲ್ಲಿ ಇಂದು ನಡೆದಿದೆ. 

   ನಿಪ್ಪಾಣಿ ಉಪ ತಹಶಿಲ್ದಾರ ಅಭಿಜೀತ್ ಬೋಂಗಾಳೆ ಹಾಗೂ ಉಪ ತಹಶಿಲ್ದಾರ ಜೊತೆ ಗ್ರಾಮ ಲೆಕ್ಕಾಧಿಲಾರಿ ಪಾರೀಸ ಸತ್ತಿ ಕೂಡ ಬಲೆಗೆ ಬಿದ್ದಿದ್ದಾರೆ. ಇವರಿಬ್ಬರೂ ತಲಾ 5 ಸಾವಿರ ಹಣ ಪಡೆಯುವಾಗ ದಾಳಿ ನಡೆಸಿದ ಲೋಕಾಯುಕ್ತ ತಂಡ ಈ ಇಬ್ಬರನ್ನು ಖೇಡ್ಡಾಗೆ ಬಿಳಿಸಿದೆ.

  ಇವರಿಬ್ಬರು ಆಸ್ತಿಯ ಹೆಸರು ಬದಲಾವಣೆ ಮಾಡಲು ನಿಪ್ಪಾಣಿಯ ರಾಜಕುಮಾರ ತುಕಾರಾಮ್ ಶಿಂಧೆ ಅವರಿಂದ 5000 ಹಣದ ಬೇಡಿಕೆ ಇಟ್ಟಿದ್ದರು. ಈ‌ ಕುರಿತು ರಾಜಕುಮಾರ ಶಿಂಧೆ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.

ಸುದ್ದಿ ಓದಿ