ಪ್ರೀತಿ ನಿರಾಕರಣೆ: ಸಮುದಾಯದವರಿಂದ ಪ್ರತಿಭಟನೆ, ಅಂಜಲಿ ಕುಟುಂಬದ ಸಹಾಯಕ್ಕೆ ಸರಕಾರ ಮುಂದಾಗಬೇಕು
ರಾಣೇಬೆನ್ನೂರು 26: ಹುಬ್ಬಳ್ಳಿಯಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಅಂಬಿಗರ ಸಮಾಜದ ಯುವತಿಯ ಕೊಲೆ ನಡೆದಿದೆ. ನಗರದ ವೀರಾಪುರ ಓಣಿ ನಿವಾಸಿಯಾದ ಅಂಜಲಿ ಅಂಬಿಗೇರ ಎಂಬಾಕೆಯೇ ಸಾವೀಗೀಡಾದ ಯುವತಿಯಾಗಿದ್ದಾಳೆ. ಈಕೆಗೆ ಅದೇ ಏರಿಯಾದ ಯುವಕ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ. ಆ ಯುವಕ ಕಳೆದ ಹಲವಾರು ದಿನಗಳಿಂದ ಅಂಜಲಿ ನನ್ನನ್ನು ಪ್ರೀತಿಸು ಎಂದು ಪೀಡಿಸುತ್ತಿದ್ದನು. ಆದರೆ ಅಂಜಲಿ ಪ್ರೀತಿ ನಿರಾಕರಿಸಿದಕ್ಕೆ ಬುಧವಾರ ಬೆಳಿಗ್ಗೆ ಓಣಿಯಲ್ಲಿ ಅಂಜಲಿ ನಿವಾಸಕ್ಕೆ ನುಗ್ಗಿದ್ದಾನೆ. ಮನೆಯ ಬಾಗಿಲು ಬಡಿದು ಏಕಾಏಕಿ ಅಂಜಲಿ ಹೊಟ್ಟೆಗೆ ಚಾಕು ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ ಯುವಕನನ್ನು ಪೋಲಿಸರು ಬಂಧಿಸಿದ್ದಾರೆ. ಅವನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ತಾಲೂಕಾ ಗಂಗಾಮತ ಸಂಘಟನೆಯ ಅಧ್ಯಕ್ಷ ರಾಜು ಜಡಮಲಿ ಹೇಳಿದರು.
ನಗರದ ತಾಲೂಕು ದಂಡಾಧಿಕಾರಿ ಕಚೇರಿ ಎದುರಿಗೆ ಗಂಗಾಮತಸ್ಥ ಸಮುದಾಯದವರು ಪ್ರತಿಭಟನೆ ಮಾಡಿ ಉಪ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು., ಈ ಕೃತ್ಯದಿಂದ ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವಂತಾಗಿದೆ, ಅಷ್ಟೆ ಅಲ್ಲದೆ ತಂದೆ ತಾಯಿಯನ್ನು ಕಳೆದುಕೊಂಡಿದ್ದ ಅಂಜಲಿ ಅಜ್ಜಿಯ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಳು. ಅಂಜಲಿಗೆ ಇಬ್ಬರು ಸಹೋದರಿಯರು ಇದ್ದು ಅಂಬಲಿಯೇ ಕುಟುಂಬ ನಡೆಸುತ್ತಿದ್ದಳು. ಅವಳ ಹತ್ಯೆಯಿಂದ ಅವಳ ಕುಟುಂಬ ಬೀದಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಪ್ರೀತಿ ನಿರಾಕರಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಕೃತ್ಯವನ್ನು ತಡೆಗಟ್ಟಿ ಹೆಣ್ಣುಮಕ್ಕಳಿಗೆ ರಕ್ಷಣೆ ಒದಗಿಸಬೇಕಾಗಿದೆ. ರಾಜ್ಯದಲ್ಲಿ ಮಹಿಳೆಯರ ಹತ್ಯೆ ದಿನದಿಂದ ದಿನಕ್ಕೆ ಇಂತಹ ಘಟನೆಗಳು ಹೆಚ್ಚುತ್ತಿರುವುದರಿಂದ ರಾಜ್ಯದಲ್ಲಿ ಎನ್ ಕೌಂಟರ್ ಕಾಯ್ದೆಯನ್ನು ಜಾರಿಗೆ ತಂದರೆ ನಾಡಿನ ಹೆಣ್ಣು ಮಕ್ಕಳಿಗೆ ರಕ್ಷಣೆ ದೊರಕುವ ಸಾದ್ಯತೆ ಆಗಬಹುದು. ಆದ್ದರಿಂದ ಎನ್ ಕೌಂಟರ್ ಕಾಯ್ದೆಯನ್ನು ತುರ್ತಾಗಿ ಕಾರ್ಯರೂಪಕ್ಕೆ ತರಬೇಕೆಂದು ಒತ್ತಾಯಿಸಿದರು.
ಸಮಾಜದ ಮುಖಂಡ ಕೋಟ್ರೆಶಪ್ಪ ಕುದರಿಹಾಳ ಮಾತನಾಡಿ, ಅಂಜಲಿ ಹತ್ಯೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು. ಆ ಶಿಕ್ಷೆ ಮುಂದೆ ಇಂತಹ ಹತ್ಯೆ ಮಾಡುವವರಿಗೆ ಪಾಠವಾಗಬೇಕು. ಹತ್ಯೆ ಯಾಗಿರುವ ಯುವತಿಯರಲ್ಲಿ ಅಂಜಲಿ ಕುಟುಂಬ ಬೀದಿಗೆ ಬಂದಿರುವುದರಿಂದ ಆ ಕುಟುಂಬಕ್ಕೆ ಮನೆ,ಸೂರು ಹಾಗೂ 50 ಲಕ್ಷ ಪರಿಹಾರ ಮತ್ತು ಅಂಜಲಿ ಸಹೋದರಿಗೆ ಸರ್ಕಾರಿ ಹುದ್ದೆ ನೀಡಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಗಂಗಾಮತ ಸಮಾಜದ ಅಧ್ಯಕ್ಷ ಮಂಜುನಾಥ ಭೋವಿ, ರಾಮಚಂದ್ರ್ಪ ಐರಣಿ, ಹೊನ್ನಪ್ಪ ತಿಮ್ಮೇನಹಳ್ಳಿ, ಅಜಯ ಮಠದ, ಗೀತಾ ಸುಣಗಾರ, ಲೀಲಾ ಸುಣಗಾರ, ಪುಷ್ಪಾ ಅಬ್ಬಿಗೇರಿ, ನಂದಾ ಸುಣಗಾರ, ಅಂಬರೀಷ ಹಳ್ಳಳ್ಳಿ, ಬಸವರಾಜ ಹಳ್ಳೆರ ಮತ್ತಿತರರಿದ್ದರು. ಪಾಲ್ಗೊಂಡಿದ್ದರು.