ರಾಣೆಬೆನ್ನೂರು ಇಂದ ಸಂಚರಿಸುವ ರಾಜ್ಯ ಸಾರಿಗೆ ಸಂಸ್ಥೆ ಬಸ್ ಮಾಕನೂರು ಕ್ರಾಸ್ಸ್ ಗೆ ನಿಲ್ಲಿಸಲು ಆಗ್ರಹ
ರಾಣೇಬೆನ್ನೂರು 10: ತಾಲೂಕಿನ ಮಾಕನೂರ್ ಕ್ರಾಸ್ ವರೆಗೆ ಪೇಜ್ ಪಾಯಿಂಟ್ ಮಾಡಿ ಬಸ್ ನಿಲ್ಲುಗಳಿಗೆ ಮುಂದಾಗಬೇಕು ಎಂದು ಸ್ವಾಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ ಅಗ್ರಹಿಸಿದರು. ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ ಬಸ್ ನಿಲುಗಡೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಘಟಕದ ಮುಖಂಡರು ಶಾಸಕ ಪ್ರಕಾಶ್ ಕೋಳಿವಾಡ ಅವರ ಗ್ರಹಕಚೇರಿಯಲ್ಲಿ ಮಹೇಶ್ ರೆಡ್ಡಿ ಅವರಿಗೆ ತಮ್ಮ ಮನವಿ ಸಲ್ಲಿಸಿ ಓತ್ತಾಯಿಸಿದರು. ಇದೇ ಸಂದರ್ಭದಲ್ಲಿ ತಾಲೂಕ ಆಡಳಿತದ ತಹಶೀಲ್ದಾರ್ ಕಚೇರಿಗೆ ತೆರಳಿ ತಾಲೂಕ ಆಡಳಿತದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇಲ್ಲಿಯವರೆಗೂ ಹರಿಹರ ಕ್ಕೆ ಹೋಗುವ ಕೆಲವು ಬಸ್ಗಳು ಕುಮಾರ ಪಟ್ಟಣ ಹೊರತುಪಡಿಸಿ, ಮಾಕನೂರು ಕ್ರಾಸ್ ಮೂಲಕವೇ ಬಸ್ಸು ಹೊರಟಿದ್ದರು. ಮಾಕ್ನೂರ್ ಕ್ರಾಸ್ ಗೆ ಬಸ್ಸಿನಲ್ಲಿ ಇದರಿಂದ ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ತುಂಬಾ ಅನಾನುಕೂಲವಾಗುತ್ತದೆ ಎಂದು ಸಲ್ಲಿಸಿರುವ ಮನವಿಯಲ್ಲಿ ವಿವರಿಸಿದ್ದಾರೆ. ತಕ್ಷಣವೇ ಶಾಸಕರು ಸಂಬಂಧಿಸಿದ ವ್ಯವಸ್ಥಾಪಕರಿಗೆ ಆದೇಶ ನೀಡಿ ಇಂದಿನಿಂದಲೇ ಮಾಕನೂರ್ ಕ್ರಾಸ್ ನಲ್ಲಿ ಬಸ್ಸು ನಿಲ್ಲಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿ. ಇತ್ತೀಚಿಗಷ್ಟೇ ರಾಣೆಬೆನ್ನೂರು ನಿಂದ ಹೊರಟಿದ್ದ ಹತ್ತು ಜನ ಮಹಿಳೆಯರು, ನಿರ್ವಾಹಕರಲ್ಲಿ ವಿನಂತಿಸಿದರು ಸಹ, ಬಸ್ ನಿಲುಗಡೆಗೊಳಿಸದೆ ಉದ್ದಟತನ ಮೆರೆದು ಮಹಿಳೆಯರ ಮೇಲೆ ದರ್ ತೋರಿದ್ದಾರೆ. ಸ
ರ್ಕಾರ ಮಹಿಳೆಯರಿಗೆ ಸಂಚರಿಸಲು ಗ್ಯಾರೆಂಟಿ ಯೋಜನೆಯಲ್ಲಿ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಇದು ರಾಜ್ಯ ಸರ್ಕಾರದ ಹೆಮ್ಮೆ. ಕೆಲವೆ ಕೆಲವರು , ಮಾಡುವ ಈ ದರ್ ಮತ್ತು ಉದ್ಧ ಟತನಕ್ಕೆ ಮಹಿಳೆಯರು ಮಾನಸಿಕವಾಗಿ ನೋವು ಅನುಭವಿಸುವಂತಾಗಿದೆ. ಎಂದು ಮನವಿಯಲ್ಲಿ ಅಂದು ನಡೆದ ಘಟನೆಯನ್ನು ಉಲ್ಲೇಖಿಸಿದ್ದಾರೆ. ಮನವಿಸಲಿಕ್ಕೆ ಮುಂಚೂಣಿಯಲ್ಲಿ ಸಂಘಟನೆಯ ತಾಲೂಕ ಅಧ್ಯಕ್ಷ ಚಂದ್ರ್ಪ ಬಣಕಾರ್, ರಾಜ್ಯ ಉಪಾಧ್ಯಕ್ಷ ಸಿದ್ಧಾರೂಢ ಗುರುಮ್, ಮರಡೆಪ್ಪ ಚಳಗೇರಿ, ಆನಂದ ಲಮಾಣಿ, ರಾಜು ಲಮಾಣಿ, ಸೇರಿದಂತೆ ಸಂಘಟನೆಯ ಮತ್ತಿತರ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.