ಹೂವಿನ ಹಡಗಲಿ

ವಿಧಾನ ಪರಿಷತ್ ನಾಮನಿರ್ದೇಶನದಲ್ಲಿ ಜೈನ ಸಮುದಾಯಕ್ಕೆ ಆದ್ಯತೆ ನೀಡುವಂತೆ ಒತ್ತಾಯ

ವಿಧಾನ ಪರಿಷತ್ ನಾಮನಿರ್ದೇಶನದಲ್ಲಿ ಜೈನ ಸಮುದಾಯಕ್ಕೆ ಆದ್ಯತೆ ನೀಡುವಂತೆ ಒತ್ತಾಯ

  

ಹೂವಿನಹಡಗಲಿ 07:  ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಜೈನ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂದು ರಾಜ್ಯ ಜೈನ್ ಅಸೋಸಿಯೇಷನ್ ಸದಸ್ಯ ಸಂತೋಷ್ ಜೈನ್ ಒತ್ತಾಯಿಸಿದ್ದಾರೆ.  

ಈ ಕುರಿತು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವ ಅವರು, ಮಾಜಿ ಸಚಿವ ಡಿ. ಸುಧಾಕರ್ ಅವರ ನಿಧನದ ಬಳಿಕ ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಜೈನ ಸಮುದಾಯದ ಪ್ರತಿನಿಧಿತ್ವ ಇಲ್ಲದಂತಾಗಿದೆ ಎಂದು ತಿಳಿಸಿದ್ದಾರೆ.  

ಜೈನ ಸಮುದಾಯದ ಹಿರಿಯ ಮುಖಂಡ ಅಭಯಚಂದ್ರ ಜೈನ್ ಅವರನ್ನು ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಿ, ಸಮುದಾಯಕ್ಕೆ ರಾಜಕೀಯ ಪ್ರತಿನಿಧಿತ್ವ ಕಲ್ಪಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. 


ಸುದ್ದಿ ಓದಿ