ವಿದ್ಯುತ್ ದರ ಏರಿಕೆಯನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿ ಮನವಿ
ಸಿರುಗುಪ್ಪ: ರಾಜ್ಯ ಸರ್ಕಾರ ವಿದ್ಯುತ್ ಬಿಲ್ ಅನ್ನು ಶೇಕಡ 40ರಷ್ಟು ಹೆಚ್ಚು ಮಾಡಿದೆ ಇದರಿಂದ ರೈಸ್ ಮಿಲ್ ಗಳನ್ನು ನಡೆಸುವುದು ಕಷ್ಟ ವಿದ್ಯುತ್ ದರ ಕಡಿಮೆ ಮಾಡಬೇಕು ವಿದ್ಯುತ್ ದರ ಏರಿಕೆಯಿಂದ ಮಧ್ಯಮ ವರ್ಗ ಜನಸಾಮಾನ್ಯರ ಕೈಗಾರಿಕೆ ವಾಣಿಜ್ಯೋದ್ಯಮಿಗಳ ವರ್ತಕರ ಜನರಿಗೆ ಆರ್ಥಿಕ ಹೊರೆ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚುವ ಸಾಧ್ಯತೆ ಕೆಲಸ ಮಾಡುವ ಕೂಲಿ ಕಾರ್ಮಿಕರು ನಿರುದ್ಯೋಗಿಗಳಾಗುವ ಸಂಭವವಿದೆ ಅಕ್ಕಿ ಗಿರಣಿ ನಂಬಿಕೊಂಡು ಬದುಕುತ್ತಿರುವ ಸಾವಿರಾರು ಕುಟುಂಬಗಳು ಬೀದಿಗೆ ಬರಲಿವೆ ಕೂಡಲೇ ಸರ್ಕಾರ ವಿದ್ಯುತ್ ದರ ಬಿಲ್ ಕಡಿಮೆ ಮಾಡಬೇಕು ಎಂದು ತಾಲೂಕು ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ನಾಗಲಾಪುರ ಬಸವರಾಜಪ್ಪ ಅವರು ಹೇಳಿದರು ತಾಲೂಕು ಅಕ್ಕಿ ಗಿರಣಿಗಳ ಮಾಲೀಕರ ಸಂಘದ ಸದಸ್ಯರಾದ ಬಿ ಮುತ್ಯಾಲಯ ಶೆಟ್ಟಿ, ಮಂಜುನಾಥ ಸ್ವಾಮಿ, ಕೆ ಮಾಣಿಕ್ಯ ರೆಡ್ಡಿ, ಎಂ ಬದ್ರಿನಾಥ, ಅಯ್ಯಪ್ಪ, ಪಳನಿಶಾ,ಮೂರ್ತಿ, ಡಿ ವಿಶ್ವನಾಥ, ಚಾಗಿ ರಾಘವೇಂದ್ರ, ಶೇಷಯ್ಯ, ಗಂಗಾಧರ, ಚಾಗಿ ಸುಬ್ಬಯ್ಯ, ಕೊಲ್ಮೀ ಸಲಾಂ ಹೊಳಗುಂದ, ಗಂಗಾಧರ ,ಶ್ರೀಧರ ರೆಡ್ಡಿ, ರವಿಕುಮಾರ್, ಹಾಜಿ ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ರಫಿ, ಮಹಮ್ಮದ್ ನೌಶಾದ್ ಅಲಿ ನೂರಾರು ವಾಣಿಜ್ಯೋದ್ಯಮಿ ವರ್ತಕರ ಸಮ್ಮುಖದಲ್ಲಿ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದರು