ಕಾರವಾರ

ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹ

ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹ

ಲೋಕದರ್ಶನ ವರದಿ 

  ದಾಂಡೇಲಿ 11 : ಹಳೇ ದಾಂಡೇಲಿಯಿಂದ  ಪಟೇಲ ನಗರಕ್ಕೆ ಹೋಗುವ ಮುಖ್ಯ ರಸ್ತೆ ಕಳೆದ 5 ವರ್ಷಗಳಿಂದ ಹದಗೆಟ್ಟಿದ್ದು ಜನ ವಾಹನ ಸಂಚಾರಕ್ಕೆ ಅಡೆತಡೆಯಾಗಿರುವದನ್ನು ಸ್ಥಳೀಯರು ಸೋಮವಾರ ರಸ್ತಾ ರೋಕೊ ನಡೆಸಿ, ಪ್ರತಿಭಟಿಸಿದರು.  ವಿವಿಧ ಯೋಜನೆಗಾಗಿ ರಸ್ತೆ ಗಳನ್ನು ಅಗೆದು ಅವುಗಳನ್ನು ದುರಸ್ತಿ ಮಾಡದೆ ಹಾಗೆಯೆ ಬಿಟ್ಟು ಹೋಗಿರುವದರಿಂದ ರಸ್ತೆ ತುಂಬಾ ಬ್ರಹತ್ ಗುಂಡಿಗಳ ನಿರ್ಮಾಣವಾಗಿದೆ. ಕಳೆದ  ನಾಲಕೈದು ವರ್ಷಗಳಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಹೊಸದಾಗಿ ರಸ್ತೆ ನಿರ್ಮಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ನಗರಸಭೆ ಪೌರಾಯುಕ್ತ ವಿವೇಕ್ ಬನ್ನೆ ಭೇಟಿ ನೀಡಿ ಈಗಾಗಲೇ ರಸ್ತೆ ನಿರ್ಮಾಣಕ್ಕಾಗಿ  81 ಲಕ್ಷ ರೂಪಾಯಿ ವೆಚ್ಚದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡುವದಾಗಿ ಹೇಳಿದರು. 


ಸುದ್ದಿ ಓದಿ