ಅಂಜಲಿ ಹಂತಕನನ್ನು ಪೋಲಿಸ್ ಏನ್ ಕೌಂಟ್ರಗೆ ಆಗ್ರಹಿಸಿ ಮನವಿ
ಸಿಂದಗಿ 18; ಪ್ರೀತಿಸಲೊಪ್ಪದ ಯುವತಿ ಅಂಜಲಿ ಅಂಬಿಗೆರ ಇವಳಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಆರೋಪಿಗೆ ಪೋಲಿಸ್ ಏನ್ ಕೌಂಟ್ರ ಮಾಡಿ ಯುವತಿ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ವಿಜಯಪೂರ ಜಿಲ್ಲಾ ತಳವಾರ ಪರಿವಾರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ವಿಜಯಪೂರ ಜಿಲ್ಲಾ ತಳವಾರ ಪರಿವಾರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಶಿವಾಜಿ ರೇ, ಮೇಟಗಾರ ಮಾತನಾಡಿ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಈ ಹಿಂದೆ ನೇಹಾ ಹಿರೇಮಠ ಪ್ರೀತಿಸಲು ನೀರಾಕರಿಸಿದ್ದಕ್ಕೆ ಪಾಗಲ ಪ್ರೇಮಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಮಾಸುವ ಮುನ್ನವೆ ಮತ್ತೊಂದು ಹುಬ್ಬಳ್ಳಿಯ ಪೀರಾಪೂರದಲ್ಲಿ ಮೇ. 15 ರಂದು ಬೆಳಗಿನ ಜಾವ ಅಂಜಲಿ ಅಂಬಿಗೇರ ಯುವತಿ ಅಮಾನವಿಯ ಘಟನೆ ಬರ್ಬರ ಕೃತ್ಯವನ್ನು ಬೈಕ ಕಳ್ಳತನದ ಆರೋಪಿ ವಿಶ್ವ ಅಲಿಯಾಸ್ ಗೀರಿಶ ಎಂಬಾತ ಕೊಲೆ ಮಾಡಿದ್ದಾನೆ. ಅಂಜಲಿ ಹಿಂದೆ ಬಿದ್ದಿದ್ದ ಆರೋಪಿ ಗೀರೀಶ ದಿನಾಲು ಆಕೆಗೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕಾಡಿಸುತ್ತಿದ್ದ ನನ್ನನ್ನು ಪ್ರೀತಿಸದಿದ್ದರೆ ಈ ಹಿಂದೆ ನೇಹ ಕೊಲೆ ಆಗಿತ್ತಲ್ಲಾ ಹಾಗೆ ಮಾಡುತ್ತೇನೆ ಎಂದು ಅಂಜಲಿಗೆ ಹೆದುರಿಸುತ್ತಿದ್ದ ಎನ್ನುವ ವಿಷಯವನ್ನು ತನ್ನ ಅಜ್ಜಿಗೆ ತಿಳಿಸಿದ್ದಾಳೆ ಹಾಗೂ ಹುಬ್ಬಳ್ಳಿಯ ಬೆಂಡಿಗೇರಿಯ ಪೋಲಿಸ್ ಠಾಣೆಗೆ ತೆರಳಿ ದೂರು ನೀಡಿದರೂ ಪೋಲಿಸರು ಆತನ ಹೆಸರು ಬರೆಯಿಸಿ ಹೋಗ್ರಿ ಅಂತಾ ಹೇಳಿ ಕಳಿಸಿದ್ದಾರೆ.
ಮಾರನೆ ದಿನವೆ ವಿಕೃತ್ ಕಾಮಿ ಗೀರೀಶನು ಅಂಜಲಿ ಮನೆಗೆ ನುಗ್ಗಿ ಮಲಗಿದವಳನ್ನು ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ. ಅಂದೆ ಪೋಲಿಸರು ಆರೋಪಿ ಗೀರೀಶನನ್ನು ಬಂಧಿಸಿದ್ದರೆ ಈ ಕೃತ್ಯ ನಡೆಯುತ್ತಿರಲಿಲ್ಲಾ ಇದಕ್ಕೆ ಪೊಲೀಸ ನಿರ್ಲಕ್ಷ್ಯವೆ ಕಾರಣವಾಗಿದೆ. ಕೊಲೆ ಮಾಡಿದ ಆರೋಪಿಗೆ ಪೋಲಿಸ್ ಏನ್ ಕೌಂಟರ್ ಮಾಡಬೇಕು ಮೃತ ಅಂಜಲಿ ಕುಟುಂಬಕ್ಕೆ ಸರಕಾರ 50 ಲಕ್ಷ ಪರಿಹಾರ ನೀಡಬೇಕೆಂದು ಸಮೂದಾಯದ ಓಕ್ಕೂರಿಲಿನ ಆಗ್ರಹವಾಗಿದೆ. ಮತ್ತೆ ಇಂತಹ ಘಟನೆಗಳು ರಾಜ್ಯದಲ್ಲಿ ಮರಕಳಿಸದಂತೆ ಸರಕಾರ ಪೋಲಿಸ್ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕು. ಇಲ್ಲದೆ ಹೋದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪುರಸಭೆ ಸದಸ್ಯರಾದ ಹಣಮಂತ ಸುಣಗಾರ, ಗೋಲ್ಲಾಳ ನಿಂ ಬಂಕಲಗಿ, ಬಸವರಾಜ್ ಯರನಾಳ ಮುಖಂಡರಾದ ಪರಶುರಾಮ ಕೋಟಾರಗಸ್ತಿ, ಮಡಿವಾಳಪ್ಪ ನಾಯ್ಕೋಡಿ, ಕಂಟೇಪ್ಪ ಚೋರಗಸ್ತಿ, ಮಾಂತೇಶ ನಾಯ್ಕೋಡಿ, ಮಲ್ಲು ಹೇರಲಾಗಿ, ಸಂತೋಷ ಹರನಾಳ, ಅನಿಲ ಕಡಕೋಳ, ರಾಜು ಮ ನಾಯ್ಕೊಡಿ, ವಿಜಯ ಯಾಳವಾರ ಸೇರಿದಂತೆ ಅನೇಕರಿದ್ದರು.