ಬ್ಯಾಡ್ಗಿ

ನಗರದಿಂದ ರೈಲು ನಿಲ್ದಾಣ, ಆಸ್ಪತ್ರೆಗಳಿಗೆ ಬಸ್ ಸೇವೆ ಕಲ್ಪಿಸಲು ಆಗ್ರಹ

ನಗರದಿಂದ ರೈಲು ನಿಲ್ದಾಣ, ಆಸ್ಪತ್ರೆಗಳಿಗೆ ಬಸ್ ಸೇವೆ ಕಲ್ಪಿಸಲು ಆಗ್ರಹ

ಲೋಕದರ್ಶನ ವರದಿ 

ಬ್ಯಾಡಗಿ  28: ಪಟ್ಟಣದಲ್ಲಿ   ನಗರ ಸಂಚಾರಿ ಬಸ್ಸನ್ನು ನಗರದಿಂದ ನಗರಕ್ಕೆ ಹಾಗೂ ರೈಲ್ವೆ ಸ್ಟೇಷನ್ ತಾಲೂಕು ಆಸ್ಪತ್ರೆ ವಿವಿಧ ಸರಕಾರಿ ಇಲಾಖೆ ಗಳಿಗೆ ಸಾರ್ವಜನಿಕರು ಸಂಚರಿಸಲು ನಗರ ಸಂಚಾರಿ ಬಸ್ಸುಗಳನ್ನು ಪ್ರಾರಂಭಿಸಲು ಆಗ್ರಹಿಸಿ ಕೆಇಬಿ ವಿದ್ಯುತ್ ನಗರ ಸಲಹಾ ಸಮಿತಿ ಸದಸ್ಯರು ಇಂದು ತಾಲೂಕು ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ನಿಗಮ ಸಂಸ್ಥೆ ಹಾವೇರಿ ವಿಭಾಗ ಬ್ಯಾಡಗಿ ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ನೀಡುವ ಮೂಲಕ ಮಾತನಾಡಿದವರು. ಈ ವೇಳೆ ಸದಸ್ಯ ಹೈದರಲಿ ಬೆಂಗಳೂರಿ ಮಾತನಾಡಿ ಪಟ್ಟಣದಲ್ಲಿ ಸುಮಾರು 40 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದು ಮತ್ತು ಪಟ್ಟಣದಲ್ಲಿ ಮುಖ್ಯ ರಸ್ತೆಯ ಅಗಲೀಕರಣ ಪ್ರಾರಂಭವಾಗಿದ್ದು ಮತ್ತು ಪರ ಸ್ಥಳದ ಜನರು ಪಟ್ಟಣಕ್ಕೆ ಆಗಮಿಸುತ್ತಿರುವುದರಿಂದ ಮತ್ತು ವಯಸ್ಸಾದ ಜೀವಿಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಅನಾರೋಗ್ಯ ಹೊಂದಿರುವ ಜನಗಳ ಹಿತದೃಷ್ಟಿಯಿಂದ ನಗರದಿಂದ ನಗರಕ್ಕೆ ಸಂಚಾರಿ ಬಸನ್ನು ಬಿಡುವಂತೆ ಆಗ್ರಹಿಸಿ ಮನವಿ ಪತ್ರವನ್ನು ನೀಡಿದರು.ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಮಂಜುನಾಥ ಹಂಜಗಿ. ಮಾಲತೇಶ್ ಆಡಿನವರ. ಮಾಲತೇಶ್ ಶಿಡ್ಲನ್ನವರ್‌. ಹಾಗೂ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರು ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ