ಪ್ರತೇಕ ಉತ್ತರ ಕರ್ನಾಟಕ ರಾಜ್ಯ ಬೇಡಿಕೆ : ಕತ್ತಿ ಬಳಿಕ ಕಾಗೆ ಕೂಗು : ಬೆಳಗಾವಿ ಅಧಿವೇಶನಕ್ಕೆ ಪ್ರತ್ಯೇಕತೆಯ ಬಿಸಿ
ಪಾರೇಶ ಭೋಸಲೆ
ಬೆಳಗಾವಿ : ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಸಮೀಸುತ್ತಿದ್ದಂತೆ ಮತ್ತೆ ಉತ್ತರ ಕರ್ನಾಟಕದ ಕೂಗು ತೀವ್ರಗೊಂಡಿದ್ದು, ದಿವಂಗತ, ಸಚಿವ ಉಮೇಶ ಕತ್ತಿ ಅವರ ಅಗಲಿಕೆಯ ಬಳಿಕ ಮೊದಲ ಬಾರಿಗೆ ಆಡಳಿತ ಪಕ್ಷದ ಶಾಸಕ ರಾಜು ಕಾಗೆ ಪ್ರತ್ಯೇಕ ಉ. ಕರ್ನಾಟಕ ರಾಜ್ಯವನ್ನಾಗಿ ಘೋಷಣೆ ಮಾಡಬೇಕು ಎಂದು ಪ್ರತಿಪಾದಿಸುವ ಮೂಲಕ ತಮ್ಮದೆ ಸರಕಾರವನ್ನು ಪೇಚಿಗೆ ಸಿಲುಕಿಸುವಂತೆ ಮಾಡಿದ್ದಾರೆ.
ಹೌದು ಓದುಗರೇ... ಉತ್ತರ ಕರ್ನಾಟಕವು ಅಭಿವೃದ್ದಿಯಲ್ಲಿ ಹಿಂದೆ ಬಿಳುತ್ತಿದ್ದು, ಈ ಭಾಗದಲ್ಲಿ ಉದ್ಯಮಗಳು ಸೇರಿದಂತೆ ಯಾವದೇ ಸಂಸ್ಥೆಗಳು ಇತ್ತ ಕಡೆಗೆ ಬರಲು ಹಿಂದೇಟು ಹಾಕುತ್ತವೆ, ಈ ದೃಷ್ಠಿಯಿಂದ ನಮಗೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯವನ್ನಾಗಿ ಮಾಡಬೇಕು ಎಂದು ಮೊದಲಿನಿಂದಲೂ ಧ್ವನಿ ಎತ್ತಿದ್ದ ದಿವಂಗತ ಸಚಿವ ಉಮೇಶ ಕತ್ತಿ ಅವರ ಬಳಿಕ ಕಾಗವಾಡ ಶಾಸಕ ರಾಜು ಕಾಗೆ ಧ್ವನಿ ಎತ್ತಿದ್ದಾರೆ. ಮತ್ತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸುವ ಮೂಲಕ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟ ಕಾಂಗ್ರೆಸ್ ಶಾಸಕ ಕಾಗೆ ಉತ್ತರ ಕರ್ನಾಟಕ ರಾಜ್ಯವನ್ನಾಗಿಸಿ ಎಂದು ರಾಷ್ಟöçಪತಿ ದ್ರೌಪದಿ ಮರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಒಂದನ್ನು ಬರೆದಿದ್ದಾರೆ.
ಬೆಂಗಳೂರು ಹಾಗೂ ಬೆಳಗಾವಿಯ ಅಧಿವೇಶನಗಳಲ್ಲಿ ಪ್ರತೇಕ ಉತ್ತರ ಕರ್ನಾಟಕದ ಬೇಡಿಕೆ ಇಡುತ್ತಿದ್ದ ದಿವಂಗತ, ಸಚಿವ ಉಮೇಶ ಕತ್ತಿ ಅವರು ತಮ್ಮ ಆಡಳಿತ ಅಥವಾ ವಿರೋಧಿ ಬಣದ ಯಾವದೇ ಸರಕಾರ ಇದ್ದರೂ ಉತ್ತರ ಕರ್ನಾಟಕ ಭಾಗಕ್ಕೆ ಬೇಕಾದ ಸೌಲಭ್ಯಗಳನ್ನು ನೀಡಿ, ಅಭಿವೃದ್ದ ಮಾಡಿ ಇಲ್ಲ ಉತ್ತರ ಕರ್ನಾಟಕ ಪ್ರತೇಕ ರಾಜ್ಯವನ್ನು ಮಾಡಿ ಎಂದು ಸರಕಾರವನ್ನು ಒತ್ತಾಯಿಸುತ್ತಾ ಬರುತ್ತಿದ್ದರು. ಅವರ ನಿಧನ ಬಳಿಕ ಉತ್ತರ ಕರ್ನಾಟಕದ ಕೂಗು ಅಡಗಿ ಹೋಗಿತ್ತು. ಆ ಪ್ರತ್ಯೇಕತೆ ಕೂಗಿಗೆ ಕಾಗವಾಡ ಮತ ಕ್ಷೇತ್ರದ ಶಾಸಕ ರಾಜು ಕಾಗೆ ಅವರು ಧ್ವನಿಗೂಡಿಸಿದ್ದು, ಈ ಭಾಗದ ಅಭಿವೃದ್ದಿಗಾಗಿ ದಿವಂಗತ ಉಮೇಶ ಕತ್ತಿ ಅವರ ಹಾದಿ ತುಳಿದಿದ್ದಾರೆ.
ಕಾಂಗ್ರೇಸ್‌ನ ಸ್ವಪಕ್ಷದ ಶಾಸಕನಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಈ ಭಾಗದ 15 ಜಿಲ್ಲೆಗಳನ್ನೊಳಗೊಂಡAತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಿಸುವಂತೆ ಕೋರಿಕೆ ಇಟ್ಟಿದ್ದಾರೆ. ಉತ್ತರ ಕರ್ನಾಟಕದ ಮೇಲೆ ಅನ್ಯಾಯ, ಮಲತಾಯಿ ಧೋರಣೆ ತಾರತಮ್ಯ ಆಗುತ್ತಿದೆ ಎಂದು ರಾಷ್ಟçಪತಿಗಳಿಗೆ ಹಾಗೂ ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಬೀದರ, ಕಲಬುರಗಿ, ವಿಜಯಪುರ, ಬೆಳಗಾವಿ ಧಾರವಾಡ, ಗದಗ, ಕೊಪ್ಪಳ, ರಾಯಚೂರು ಸೇರಿ 15 ಜಿಲ್ಲೆಗಳನ್ನು ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಸೇರಿಸುವಂತೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಈ ಬಗ್ಗೆ ಉತ್ತರ ಕರ್ನಾಟಕ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಬೆಂಬಲವನ್ನು ಶಾಸಕ ರಾಜು ಕಾಗೆ ವ್ಯಕ್ತಪಡಿಸಿದ್ದಾರೆ. ಶಾಸಕ ಕಾಗೆ ಸೇರಿ ಈ ಭಾಗದ ಅನೇಕ ಶಾಸಕ, ಮಾಜಿ ಶಾಸಕರಿಂದಲೂ ಬೆಂಬಲ ದೊರೆಯುವ ಸಾಧ್ಯತೆ ಇದ್ದು, ಉತ್ತರ ಕರ್ನಾಟಕ ಹೋರಾಟ ಸಮಿತಿಯಿಂದ ಸಹಿ ಸಂಗ್ರಹ ಅಭಿಯಾಬ ಮಾಡಲಾಗಿದೆ. 1.10 ಕೋಟಿ ಜನ ಪ್ರತ್ಯೇಕ ರಾಜ್ಯಕ್ಕಾಗಿ ಸಹಿ ಮಾಡಿದ ಜನರಿದ್ದು, ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಧ್ವನಿ ಎಬ್ಬಿಸಲು ತಯಾರಿ ನಡೆಸಿದ್ದಾರೆ.
ಆದರೆ ಆಡಳಿತ ಪಕ್ಷದ ಶಾಸಕರಾಗಿರುವ ರಾಜು ಕಾಗೆ ಅವರ ಧ್ವನಿಯನ್ನು ರಾಜ್ಯದ ಆಡಳಿತ ಪಕ್ಷ ಕಾಗ್ರೇಸ್ ಅಡಗಿಸುತ್ತಾ ಎನ್ನುವದನ್ನು ಇಲ್ಲಿ ಕಾದು ನೋಡಬೇಕಿದೆ. ಒಂದುಬ ವೇಳೆ ಕಾಗೆ ಅವರ ಪ್ರೆö್ಯÃಕ ರಾಜ್ಯದ ಧ್ವನಿಗೆ ಉತ್ತರ ಕರ್ನಾಟಕದ ಶಾಸಕರು, ಪ್ರತಿನಿಧಿಗಳು ಬೆಂಬಲ ನೀಡಿದ್ದಲ್ಲಿ ಮತ್ತೆ ಪ್ರತ್ಯೇಕತೆಯ ಕೂಗು ಹೆಚ್ಚಾಗುವದರಲ್ಲಿ ಯಾವದೇ ಸಂದೇಹ ಇಲ್ಲ ಎನ್ನುವದನ್ನು ಇಲ್ಲಿ ಅಲ್ಲಗಳಿಯುವಂತಿಲ್ಲ
ಉ. ಕರ್ನಾಟಕಕ್ಕೆ ಅನ್ಯಾಯವಾಗಲು ಯಾರು ಕಾರಣ, ಚರ್ಚೆ ಆಗಲಿ : ಚಂದರಗಿ
ಕೇವಲ ಪ್ರಚಾರಕ್ಕಾಗಿ, ರಾಜಕೀಯ ಕಾರಣಕ್ಕಾಗಿ ಇಂಥ ಬೇಡಿಕೆಗಳು ಕಳೆದ ಅನೇಕ ದಶಕಗಳಿಂದ ಬೇರೆ ಬೇರೆ ನಾಯಕರಿಂದ ಬರುತ್ತಲೇ ಇವೆ. ಮೊದಲು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲು ಯಾರು ಕಾರಣ ಎಂಬ ಬಗ್ಗೆ ಚರ್ಚೆ ನಡೆಯಲಿ. ಉತ್ತರ ಕರ್ನಾಟಕದ 14 ಜಿಲ್ಲೆಗಳ 96 ಶಾಸಕರು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಶ್ರಮ ವಹಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಹೇಳಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ನಾವು ನಮ್ಮ ಕಾಲುಗಳ ಮೇಲೆ ನಿಲ್ಲಲು ಸಾಧ್ಯವೇ? ನಮ್ಮ ಆದಾಯ ಮೂಲಗಳೇನು? ಉತ್ತರ ಕರ್ನಾಟಕದಲ್ಲಿ ಆದಾಯ ಮೂಲಗಳನ್ನು ಸ್ರಷ್ಟಿಸಲು ನಮ್ಮ ಶಾಸಕರು ಮಾಡಿದ್ದೇನು? ಕಾಗೆ ಅವರು ಮೊದಲು ತಮ್ಮ ನಿಲುವನ್ನು ಬೆಂಬಲಿಸುವ ಕನಿಷ್ಠ 10 ಶಾಸಕರನ್ನೂ ಕಲೆ ಹಾಕಿ ಇದೇ ವಿಷಯದ ಮೇಲೆ ಚುನಾವಣೆಗೆ ಸ್ಪರ್ಧೆಸಲಿ. ಬೆಳಗಾವಿಯಿಂದ ಬೀದರವರೆಗೆ
ಪ್ರವಾಸ ಮಾಡಲಿ. ಸುಮ್ಮನೆ ಪ್ರಚಾರಕ್ಕಾಗಿ ಈ ರೀತಿ ಸಿ ಎಂ ಗೆ ಪತ್ರ ಬರೆದು ಕೂಡುವದು ಬೇಡ. ಹೋರಾಟದ ಹಾದಿಯೇ ಬೇರೆ, ರಾಜಕೀಯವೇ ಬೇರೆ. ಆಂಧ್ರದಿನಿಂದ ತೆಲಂಗಾಣ ಪ್ರತ್ಯೇಕ ರಾಜ್ಯವಾಗಬೇಕಾದರೆ ಏನೆಲ್ಲಾ ಆಯಿತು ಎಂಬುದನ್ನು ಕಾಗೆ ಅವರು ಮೊದಲು ಅಭ್ಯಾಸ ಮಾಡಲಿ ಎಂದು ಚಂದರಗಿ ಹೇಳಿದ್ದಾರೆ.