ಶಿಗ್ಗಾವ್

ಮನೆ ಬಿದ್ದ ಸಂತ್ರಸ್ತರಿಗೆ 5ಲಕ್ಷ ಪರಿಹಾರಕ್ಕೆಆಗ್ರಹ : ಶ್ರೀಕಾಂತ ದುಂಡಿಗೌಡ್ರ

ಮನೆ ಬಿದ್ದ ಸಂತ್ರಸ್ತರಿಗೆ 5ಲಕ್ಷ ಪರಿಹಾರಕ್ಕೆಆಗ್ರಹ : ಶ್ರೀಕಾಂತ ದುಂಡಿಗೌಡ್ರ

ಶಿಗ್ಗಾವಿ,26: ಕಳೆದ 15 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ 150ಕ್ಕೂ ಹೆಚ್ಚಿನ ಮನೆಗಳು ನೆಲ ಸಮಗೊಂಡಿದ್ದು, ತಕ್ಷಣ ಮನೆ ಬಿದ್ದ ಸಂತ್ರಸ್ತರಿಗೆ 5ಲಕ್ಷಕ್ಕೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಶ್ರೀಕಾಂತ ದುಂಡಿಗೌಡ್ರ ಆಗ್ರಹಿಸಿದರು. 

 ಪಟ್ಟಣದಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೆ ಬಿಜೆಪಿ ಸರಕಾರ ಆಡಳಿತದಲ್ಲಿ ಇರುವಾಗ ಮನೆ ಬಿದ್ದ ಸಾವಿರಾರು ಸಂತ್ರಸ್ತರಿಗೆ ತಲಾ 5ಲಕ್ಷ ಪರಿಹಾರ ನೀಡಿದೆ. 

ಅದರಿಂದ ಮನೆ ಬಿದ್ದಿರುವ ಸಂತ್ರಸ್ತರು ತಕ್ಷಣ ಮನೆ ಕಟ್ಟಿಕೊಂಡ ವಾಸಿಸಲು ಅನುಕೂಲವಾಗಿದೆ. ಸೂರು ಇಲ್ಲದ ಬಡಜನತೆಗೆ ನೆರವಾಗುವುದು ಮುಖ್ಯವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಸಂತ್ರತಸ್ತರಿಗೆ ನೆರವಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಅತಿಯಾದ ಮಳೆಯಿಂದ ಸಂಪೂರ್ಣ ಮನೆ ಬಿದ್ದ ಸಂತ್ರಸ್ತರಿಗೆ ಕಾಂಗ್ರೆಸ್ ಸರ್ಕಾರ ಬರಿ 1.20ಲಕ್ಷ  ಪರಿಹಾರದ ಹಣ ನೀಡುತ್ತಿದೆ. ಇಂದಿನ ದುಬಾರಿಕಾಲದಲ್ಲಿ ಈ ಹಣಯಾವುದಕ್ಕೂ ಸಾಲದಂತಾಗಿದೆ. ಸೂರು ಕಟ್ಟಿಕೊಳ್ಳಲು ಸಾಧ್ಯವಾಗದೆ. ಸಂತ್ರಸ್ತರಾಗಿ ಉಳಿಯುವಂತಾಗಿದೆ. ಶಾಲೆ, ಅಂಗನವಾಡಿ ಅಥವಾ ಸಮುದಾಯ ಭವನಗಳಲ್ಲಿ ಆಶ್ರಯ ಪಡೆದು ಬದುಕು ಸಾಗಿಸುವಂತಾಗಿದೆ. ಸಂತ್ರಸ್ತರ ಸಮಸ್ಯೆಗೆ ಸಕರ್ ಣಟಿಜಜಜಿಟಿಜಜರ ಸ್ಪಂದಿಸಬೇಕು. ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ಸೂರ ಕಟ್ಟಿಕೊಳ್ಳಲು ಅನುಕೂಲ ಮಾಡಬೇಕು ಎಂದು ಆಗ್ರಹಿಸಿದರು. 

ತಾಲೂಕಿನ ಚಿಕ್ಕಮಲ್ಲೂರ ಒಂದೇ ಗ್ರಾಮದಲ್ಲಿ ಸುಮಾರು 23ಮನೆಗಳು ಬಿದ್ದು ಸಂತ್ರಸ್ತರು ಬಿದಿಗೆ ಬಂದಿದ್ದಾರೆ. ಮನೆಯಿಲ್ಲದೆ ಇಡೀ ಕುಟುಂಬ ವಾಸಕ್ಕಾಗಿ ಪರದಾಡುವಂತಾಗಿದೆ. ಮನೆಯಲ್ಲಿನ ಬಳಕೆ ಮಾಡುವ ಹಾಸಿಗೆ, ಆಹಾರ ಧಾನ್ಯಗಳು ಸೇರಿದಂತೆ ಎಲ್ಲ ಸಾಮಗ್ರಿಗಳು ನೀರು ಪಾಲಾಗಿವೆ. ಹೀಗಾಗಿ ಬಳಷ್ಟು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ತಕ್ಷಣ ಪರಿಹಾರಧನ ನೀಡಬೇಕು. ಸಾವೀರಾರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗಳಿಗೆ ಮಳೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ತಕ್ಷಣ ಪರೀಶೀಲನೆ ಕಾರ್ಯ ಕೈಗೊಳ್ಳಬೇಕು ಮತ್ತು ಪರಿಹಾರಧನ ವಿತರಿಸಬೇಕು ಎಂದು ಒತ್ತಾಯಿಸಿದರು. 

ಮುಖಂಡರಾದ ಎಂ.ಎನ್‌.ವೆಂಕೋಜಿ,   ವೀರನಗೌಡ್ರ ಗೋಣಿ ಗೌಡ್ರ, ಗೋವಿಂದಪ್ಪ ವಾಲ್ಮೀಕಿ, ವೀರಭದ್ರ​‍್ಪ ಕಬ್ಬೂರ, ಮಹಾದೇವಪ್ಪ  ಗಂಜಿಗಟ್ಟಿ, ಶಿವಾನಂದ ಗಂಜಿಗಟ್ಟಿ, ಮಂಜು ಈ ಗನಗೌಡ್ರ, ಆನಂದ ಸುಭೆದಾರ, ಮುತ್ತು ಹಿರೇಮಠ ಸೇರಿದಂತೆ ಅನೇಕ ಮುಖಂಡರು ಇದ್ದರು. 


ಸುದ್ದಿ ಓದಿ