ಶಿಗ್ಗಾವ್

ಸರ್ಕಾರವನ್ನು ಉದ್ದೇಶಪೂರ್ವಕ ಅಸ್ಥಿರಗೊಳಿಸುವ ಹುನ್ನಾರ: ನೀರಲಗಿ

ಸರ್ಕಾರವನ್ನು ಉದ್ದೇಶಪೂರ್ವಕ ಅಸ್ಥಿರಗೊಳಿಸುವ ಹುನ್ನಾರ: ನೀರಲಗಿ

ಶಿಗ್ಗಾವಿ 07: ಕೇಂದ್ರ ಸರ್ಕಾರದ ನಡೆ ಹಾಗೂ ರಾಜ್ಯ ಬಿಜೆಪಿಯ ಪಾದಯಾತ್ರೆ ಜನಪರ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಉದ್ದೇಶಪೂರ್ವಕ ಅಸ್ಥಿರಗೊಳಿಸುವ ಹುನ್ನಾರವಾಗಿದೆ ಎಂದು ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ತೀವ್ರವಾಗಿ ಖಂಡಿಸಿದರು. 

ಹಾವೇರಿಯ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜರುಗಿದ  ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ರಾಜ್ಯದ ರಾಜ್ಯಪಾಲರ ಸಂವಿಧಾನ ವಿರೋಧ ನೀತಿ ಖಂಡಿಸಿ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾದ ವಿವಿಧ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು ಜಿಲ್ಲಾ ಕೇಂದ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂವಿಧಾನ ವಿರೋಧಿ ನೋಟಿಸ್ ನೀಡಿರುವುದನ್ನು ಖಂಡಿಸಿ ಉದ್ದೇಶಿಸಿ ಮಾತನಾಡಿದ ಅವರು ದೇವರ ದಯೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಉತ್ತಮ ಮಳೆಯಾಗಿದ್ದು ಹಲವು ಕಡೆ ಹೆಚ್ಚಿಗೆ ಮಳೆಯಾಗಿ ಜನರು  ತೊಂದರೆ ಅನುಭವಿಸುತ್ತಿದ್ದಾರೆ. ಜನರಿಗೆ ಸ್ಪಂದಿಸುವ ಕೆಲಸ ಸರಕಾರ ಮಾಡುತ್ತಿದ್ದಾರೆ ಬಿಜೆಪಿಯವರು ಪಾದಯಾತ್ರೆ ಮಾಡಿ ಜನರಿಗೆ ದ್ರೋಹ ಮಾಡುತ್ತಿದ್ದಾರೆ ಇದಕ್ಕೆ ಪೂರಕ ರಾಜ್ಯಪಾಲರು ದುರುದ್ದೇಶಪೂರ್ವಕ ಮೂಡ ಪ್ರಕರಣ ಇಟ್ಟುಕೊಂಡು ಯಾವುದೇ ಕಾನೂನು ಸಲಹೆ ಪಡೆಯದೆ ದುರುದ್ದೇಶ ಪೂರ್ವಕ ನಮ್ಮ ಮುಖ್ಯಮಂತ್ರಿಗಳ ನೋಟಿಸ್ ನೀಡಿದ್ದು ಎಷ್ಟು ಸರಿ ಇದು ಹಿಂಗೇ ಮುಂದೆ ರಾಜ್ಯದ ಜನ ಬಿಜೆಪಿ ಮತ್ತು ಬಿಜೆಪಿ ನಾಯಕರಿಗೆ ಚುಮಾರಿ  ಹಾಕುವುದರಲ್ಲಿ ಸಂದೇಹವಿಲ್ಲ ಎಂದು ತೀವ್ರ ಆಕ್ರೋಶ ಹೊರಹಾಕಿದರು ಮಾನ್ಯ ರಾಜಪಾಲರು ನೋಟಿಸ್ ವಾಪಸ್ ಪಡೆಯಬೇಕು ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಜೆಡಿಎಸ್ ಕುಮಾರಸ್ವಾಮಿ ನಿಮ್ಮ ಪಾದಯಾತ್ರೆಯನ್ನು ಮೊಟಕು ಗೊಳಿಸಿ ಜನತೆಯ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. 

ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ನೇತೃತ್ವದಲ್ಲಿ ಜರುಗಿದ ಪಾದಯಾತ್ರೆಯಲ್ಲಿ  ಮುಖಂಡರುಗಳಾದ ಯಾಸಿರ ಅಹ್ಮದಖಾನ್ ಪಠಾಣ, ಅಜ್ಜಂಪಿರ್ ಖಾದ್ರಿ, ಪ್ರೇಮಾ ಪಾಟೀಲ, ಆರ್ ಶಂಕರ,  ಮಂಜುನಾಥ ಮಣ್ಣಣ್ಣವರ, ತಹಮದ್ ಖಾಜಿ, ನವೀನ ಬಂಡಿವಡ್ಡರ, ಹನುಮಂತಪ್ಪ ಬಂಡಿವಡ್ಡರ, ಬಿಸಿ ಪಾಟೀಲ, ಎಂ ಜೆ ಮುಲ್ಲಾ, ಶಂಭುಲಿಂಗಪ್ಪ ಆಜೂರ, ಮುಜಾಹಿದ್ ದಿವಾನವರ, ಆರ್ ಜಿ ಪಾಟೀಲ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ