ದೆಹಲಿ ಚುನಾವಣೆ; ಮತ ಚಲಾಯಿಸಿದ ತಾಪ್ಸಿ ಪನ್ನು
ನವದೆಹಲಿ, ಫೆ 8, ಬಾಲಿವುಡ್ ನಟಿ ತಾಪ್ಸಿ ಪನ್ನು ಶನಿವಾರ ತನ್ನ ಕುಟುಂಬ ಸದಸ್ಯರೊಂದಿಗೆ ದೆಹಲಿ ವಿಧಾನಸಭಾ ಚುನಾವಣೆಗೆ ಮತ ಚಲಾಯಿಸಿದರು. ಮುಂಬೈನಿಂದ ದೆಹಲಿಗೆ ಬಂದಿದ್ದ ತಾಪ್ಸಿ, ತನ್ನ ಸಹೋದರಿ ಶಗುನ್ ಹಾಗೂ ಪೋಷಕರೊಂದಿಗೆ ಮತ ಚಲಾಯಿಸಿದರು. ನಂತರ ತಮ್ಮ ಕುಟುಂಬ ಸದಸ್ಯೊರೊಂದಿಗಿನ ಚಿತ್ರವನ್ನು ಅಪ್ ಲೋಡ್ ಮಾಡಿದ ಅವರು, 'ನೀವು ಮತಚಲಾಯಿಸಿದ್ದೀರೇನು?' ಎಂದು ಪ್ರಶ್ನಿಸಿದರು. ಶನಿವಾರ 11 ಗಂಟೆವರೆಗೆ ಶೇ. 6.43 ಮತದಾನ ದಾಖಲಾಗಿತ್ತು. 70 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು 672 ಅಭ್ಯರ್ಥಿಗಳು ಕಣದಲ್ಲಿದ್ದಾರೆ.