ರಾಷ್ಟ್ರೀಯ

ದೆಹಲಿ ವಿಧಾನಸಭಾ ಚುನಾವಣೆ; ಎಎಪಿ 55 ಸ್ಥಾನಗಳಲ್ಲಿ ಮುನ್ನಡೆ

ದೆಹಲಿ ವಿಧಾನಸಭಾ ಚುನಾವಣೆ; ಎಎಪಿ 55 ಸ್ಥಾನಗಳಲ್ಲಿ ಮುನ್ನಡೆ

ನವದೆಹಲಿ, ಫೆ 11   ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 55 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಗೆಲುವಿನ ನಗೆ ಬೀರುತ್ತಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ, ಎಎಪಿ 55 ಹಾಗೂ ಬಿಜೆಪಿ 15 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ನವದೆಹಲಿ ಕ್ಷೇತ್ರದಿಂದ ಬಿಜೆಪಿಯ ಸುನೀಲ್ ಕುಮಾರ್ ಯಾದವ್ ವಿರುದ್ಧ 4387 ಮತಗಳಿಂದ ಮುಂದಿದ್ದಾರೆ. ಉಪಮುಖ್ಯಮಂತ್ರಿ ಹಾಗೂ ಎಎಪಿ ನಾಯಕ  ಮನೀಶ್ ಸಿಸೋಡಿಯಾ ಕೂಡ ಪತ್ಪರ್ಗಂಜ್ ನಿಂದ ಅಲ್ಪಮತದ ಮುನ್ನಡೆ ಸಾಧಿಸಿದ್ದಾರೆ. 


ಸುದ್ದಿ ಓದಿ