ಆಟದಲ್ಲಿ ಸೋಲು-ಗೆಲುವು ಮುಖ್ಯವಲ್ಲ, ನಿಯಮಾನುಸಾರ ಹಾಗೂ ಶಿಸ್ತುಬದ್ಧ ಆಟ ಕ್ರೀಡೆಯಲ್ಲಿ ಪ್ರಗತಿ ಹೊಂದಲು ಸಾಧ್ಯ- ಬೆಳಗಲಿ
ಮಹಾಲಿಂಗಪುರ : ಆಟದಲ್ಲಿ ಸೋಲು-ಗೆಲುವು ಮುಖ್ಯವಲ್ಲ, ನಿಯಮಾನುಸಾರ ಹಾಗೂ ಶಿಸ್ತುಬದ್ಧ ಆಟ ಕ್ರೀಡೆಯಲ್ಲಿ ಪ್ರಗತಿ ಹೊಂದಲು ಸಾಧ್ಯ. ಆಗ ಅದಕ್ಕೊಂದು ಅರ್ಥವಿರುತ್ತದೆ ಎಂದು ನಗರದ ಖ್ಯಾತ ವೈದ್ಯರಾದ ಡಾ. ಎ ಆರ್ ಬೆಳಗಲಿ ಅಭಿಪ್ರಾಯಪಟ್ಟರು.ಪ್ರಥಮ ಬಾರಿಗೆ ಕೆಎಲ್ಇ ಪಕ್ಕದ ಅಂಗಡಿಯವರ ಮೈದಾನದಲ್ಲಿ ಸುಪ್ರಭಾತ ಹಾಗೂ ಬಿ.ಆರ್ ಬಾಯ್ಸ್ ಇವರ ಸಹಯೋಗದಲ್ಲಿ ನಡೆದ ಹಾಪ್ ಪಿಚ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಕ್ರೀಡೆಗಳಲ್ಲಿ ಮೈಗೂಡಿಸಿಕೊಳ್ಳುವ ಆದರ್ಶ ಗುಣಗಳು ತಮ್ಮ ಭವಿμÀ್ಯವನ್ನು ರೂಪಿಸುತ್ತವೆ ಎಂದು ಜೀವನದುದ್ದಕ್ಕೂ ಒಳ್ಳೆಯ ನಡತೆಯನ್ನು ಮೈಗೂಡಿಸಿಕೊಳ್ಳಲು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪು.ಸ ಮಾಜಿ ಅಧ್ಯಕ್ಷ ಬಸವರಾಜ ರಾಯರ ಮಾತನಾಡಿ ಯುವಕರು ಕೆಟ್ಟ ಚಟಗಳಿಗೆ ಬಲಿಯಾಗದೆ ಜೀವನದಲ್ಲಿ ಕ್ರೀಡಾ ಉತ್ಸಾಹವನ್ನು ಬೆಳೆಸಿಕೊಂಡು ಕ್ರೀಡೆಯಲ್ಲಿ ಹೆಚ್ಚೆಚ್ಚು ಭಾಗವಹಿಸಿ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಊರಿನ ಹೆಸರು ತರಬೇಕು ಎಂದರು.
ನಗರದ ಕಾರ್ಯನಿರತ ಪತ್ರಕರ್ತರ ಸಂಘದ, ಅಧ್ಯಕ್ಷ ಎಸ್ ಎಸ್ ಈಶ್ವರಪ್ಪಗೋಳ, ಮಹೇಶ್ ಆರಿ, ಶಿವಲಿಂಗ ಸಿದ್ನಾಳ, ಚಂದ್ರಶೇಖರ್ ಮೋರೆ ಮಾತನಾಡಿ ಕೊರೋನಾ ಮಹಾಮಾರಿಯಿಂದ ದೇಶ, ರಾಜ್ಯದಲ್ಲಿ ಕ್ರೀಡೆ ಕುಂಠಿತಗೊಂಡಿತ್ತು. ಈಗ ಅಲ್ಲಲ್ಲಿ ಕ್ರೀಡೆಗಳು ಏರ್ಪಡುತ್ತಿರುವುದರಿಂದ ಕ್ರೀಡಾಸಕ್ತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದರಲ್ಲದೆ ತಮ್ಮ ಸಾಧನೆ ನಗರಕ್ಕೆ ಸೀಮಿತವಾಗದೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿ ಎಂದು ಹಾರೈಸಿದರು.
ಈ ಪಂದ್ಯಾವಳಿಯಲ್ಲಿ 26 ತಂಡಗಳು ಭಾಗವಹಿಸಿ ಅಂತಿಮ ಹಂತದಲ್ಲಿ ಡಿ.ಎಕ್ಸ ಬನಹಟ್ಟಿ ತಂಡ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನಕ್ಕೆ ಮಾಜಿ ಸಚಿವೆ ಉಮಾಶ್ರೀ ಅವರು ನೀಡಿದ ನಗದು 15 ಸಾವಿರ ರೂ.ಗಳು ಹಾಗೂ ಟ್ರೋಫಿಯನ್ನು ತಂಡ ಪಡೆಯಿತು. ತರುವಾಯ ದ್ವಿತೀಯ ಸ್ಥಾನದ ಬಸವರಾಜ ರಾಯರ ನೀಡಿದ 10 ಸಾವಿರ ರೂ.ಗಳು ಹಾಗೂ ಟ್ರೋಫಿಯನ್ನು ಮಹಾಲಿಂಗಪುರ ಆರ್ ಕೆ ಬಾಯ್ಸ್ ತಂಡ ಪಡೆದುಕೊಂಡಿತು. ನಗರದ ಇನ್ನೆರಡು ತಂಡಗಳಾದ ರೆಡ್ಬ್ಯಾಕ್ ಹಾಗೂ ಅಪ್ಪಾಜಿ ಕ್ರಿಕೆಟ್ ಕ್ಲಬ್ ತಂಡಗಳು 3 ಹಾಗೂ 4ನೇ ಸ್ಥಾನಗಳನ್ನು ಪಡೆದುಕೊಂಡವು.ಹ್ಯಾಟ್ರಿಕ್ ಸಿಕ್ಸ್ ಇರ್ಫಾನ್ ಬನಹಟ್ಟಿ, ಹ್ಯಾಟ್ರಿಕ್ ಫೆÇೀರ್ ರವಿ, ಬೆಸ್ಟ್ ಬ್ಯಾಟ್ಸ್ಮ್ಯಾನ್ ಸಮೀರ್ ಸಿಂದಗಿ, ಬೆಸ್ಟ್ ಬೌಲರ್ ಆಫ್ರಿದಿ ಪಕಾಲಿ, ಬೆಸ್ಟ್ ವಿಕೆಟ್ ಕೀಪರ್ ಮಹೇಶ್ ಕೊಣ್ಣೂರ್, ಹ್ಯಾಟ್ರಿಕ್ ವಿಕೆಟ್ ಸಿದ್ದು ಲಾತೂರ್, ಸೆಮಿಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಇಕ್ಬಾಲ್ ಹಾಗೂ ವಿಶಾಲ್ ಪಡೆದುಕೊಂಡರೆ ಫೈನಲ್ನಲ್ಲಿ ನವಾಜ್ μÀರೀಫ್ ಪಡೆದುಕೊಂಡರು.
ವೇದಿಕೆ ಮೇಲೆ ಪು.ಸ. ಚನ್ನಬಸು ಯರಗಟ್ಟಿ, ಮಹಾದೇವ ಕಡಬಲ್ಲವರ್, ಪಾಪಾ ನಾಲಬಂದ, ಮಂಜು ಬಕರೆ, ಮಲ್ಲು ಪಾಶ್ಚಾಪುರ, ಅಸ್ಗರ ಪಕಾಲಿ, ಮನೋಜ್ ಬಸಂತಾನಿ, ವಿನೋದ್ ಸಿಂಪಿ, ತಾಹಿರ್ ಸೌದಾಗರ್, ಲಕ್ಕಪ್ಪ ಭಜಂತ್ರಿ, ಜಿಗೇರಿ, ರಾಕೇಶ್ ಕುಳಲಿಮಠ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎಲ್ಲ ಗಣ್ಯಮಾನ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.ಸೈಯದ್ ಶೇಕ್ ಹಾಗೂ ಎಸ್. ಗಣೇಶ್ ಸ್ವಾಗತಿಸಿದರು ಮತ್ತು ಮೀರಾ ತಟಗಾರ ನಿರೂಪಿಸಿ, ದುರ್ಗೇಶ್ ವಂದಿಸಿದರು.